| ರವಿ ಗೋಸಾವಿ ಬೆಳಗಾವಿನಿಷ್ಕ್ರಿಯ ಬ್ಯಾಂಕ್ ಖಾತೆ, ತಪ್ಪಾದ ಆಧಾರ್ ಸಂಖ್ಯೆ ಹಾಗೂ ಇ-ಕೆವೈಸಿ ಸೇರಿ ವಿವಿಧ ಕಾರಣಗಳಿಂದ ರಾಜ್ಯದ 15 ಲಕ್ಷಕ್ಕೂ ಅಧಿಕ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರ ಕುಟುಂಬಗಳು ‘ಅನ್ನಭಾಗ್ಯ’ ಹಣ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ ಈಗಾಗಲೆ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇನ್ನುಳಿದ 5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ 170 ರೂಗಳನ್ನು ಸೋಮವಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ.
ರಾಜ್ಯಾದ್ಯಂತ ಒಟ್ಟು 1.53 ಕೋಟಿಗೂ ಅಧಿಕ ಪಡಿತರ ಚೀಟಿಗಳಿವೆ. 10 ಲಕ್ಷ ಅಂತ್ಯೋದಯ, 1.72 ಕೋಟಿಗೂ ಅಧಿಕ ಆದ್ಯತಾ (ಬಿಪಿಎಲ್) ಪಡಿತರ, 2.48 ಕೋಟಿ ಎಪಿಎಲ್ ಪಡಿತರ ಚೀಟಿಗಳಿವೆ. ಈ ಪೈಕಿ ಅರ್ಹ 1.37 ಕೋಟಿ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆಯಾಗಿದ್ದು, ಇವು ಅನ್ನಭಾಗ್ಯದ ಹಣ ಪಡೆಯುವುದು ಗ್ಯಾರಂಟಿ.
ಅನ್ನಭಾಗ್ಯದ ಅಕ್ಕಿಯ ಹಣ ಸಂದಾಯ ಮಾಡಲು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಅರ್ಜಿ ಕರೆದಿಲ್ಲ. ಈಗಾಗಲೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ ಇ-ಕೆವೈಸಿ ಪೂರ್ಣಗೊಳಿಸಿದವರ ಮಾಹಿತಿ ಪಡೆದಿದ್ದು, ಆ ದಾಖಲೆಗಳ ಮೂಲಕವೇ ಹಣ ಸಂದಾಯ ಮಾಡುತ್ತಿದೆ. ಆದರೆ ಅರ್ಹರು ಮಾಸಾಂತ್ಯದೊಳಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಸಬೇಕು. ಜೂನ್ ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದವರು ಮಾತ್ರವೇ ಜುಲೈನಲ್ಲಿ ಹಣ ಪಡೆಯಲು ಅರ್ಹರು ಎಂದು ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಾಜ್ಯದ ಬಹುದೊಡ್ಡ ಜಿಲ್ಲೆ ಬೆಳಗಾವಿಯೊಂದರಲ್ಲೇ 1.74 ಲಕ್ಷ ಪಡಿತರ ಚೀಟಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 1 ಲಕ್ಷ ಚೀಟಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯೇ ಆಗಿಲ್ಲ. ಸರ್ಕಾರ ಇ-ಕೆವೈಸಿ ಮಾಡಿಸುವಂತೆ ಜಾಗೃತಿ ಮೂಡಿಸಿದರೂ 15,73,194 ಪಡಿತರ ಚೀಟಿಗಳಿಗೆ ಬ್ಯಾಂಕ್ ಹಾಗೂ ಆಧಾರ್ ಸಂಖ್ಯೆ ಜೋಡಣೆಯಾಗಿಲ್ಲ. ಹೀಗಾಗಿ ಅವರೆಲ್ಲರಿಗೂ ಈ ಬಾರಿಯ ಅನ್ನಭಾಗ್ಯದ ಹಣ ಸಿಗುವ ಗ್ಯಾರಂಟಿಯೇ ಇಲ್ಲ.
ಅರ್ಹರೆಲ್ಲರಿಗೂ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಹೊಸದಾಗಿ ಬ್ಯಾಂಕ್ ತೆರೆದಾದರೂ ಆಧಾರ್ ಲಿಂಕ್ ಮಾಡಿಸಬೇಕು ಎಂದು ಸರ್ಕಾರ ಜು.30ರವರೆಗೆ ಗಡುವು ನೀಡಿದ್ದು, ಅಧಿಕಾರಿಗಳು ಪಡಿತರದಾರರಿಗೆ ಅರಿವು ಮೂಡಿಸುತ್ತಿದ್ದಾರೆ.

ಅರ್ಹ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಯ ಕುಟುಂಬಗಳ ಮುಖ್ಯಸ್ಥರು ಆಧಾರ್ ಕಾರ್ಡ್​ಗೆ ಬ್ಯಾಂಕ್ ಖಾತೆ ಜೋಡಣೆ ಮಾಡಿಸಿದ ಬಳಿಕವೇ ಅನ್ನಭಾಗ್ಯದ ಹಣ ಸಂದಾಯ ಮಾಡಲಾಗುವುದು.
| ಶ್ರೀಶೈಲ ಕಂಕಣವಾಡಿ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಳಗಾವಿ
ಅಂತ್ಯೋದಯಕ್ಕೆ ನಿಯಮ ಭಿನ್ನ!:ರಾಜ್ಯದಲ್ಲಿ 10 ಲಕ್ಷ ಅಂತ್ಯೋದಯ ಕಾರ್ಡ್​ಗಳಿದ್ದು, ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿದ್ದರೂ ಕಡ್ಡಾಯವಾಗಿ 35 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿದೆ. ಆದ್ದರಿಂದ ಇಂತಹ ಕುಟುಂಬಗಳಿಗೆ ಅನ್ನಭಾಗ್ಯದ ಹಣ ನೀಡಲಾಗುವುದಿಲ್ಲ. ಆದರೆ ಮೂರಕ್ಕಿಂತ ಹೆಚ್ಚು ಸದಸ್ಯರಿದ್ದರೂ ಅಂತಹ ಕುಟುಂಬಗಳಿಗೂ 35 ಕೆಜಿ ಅಕ್ಕಿ ನೀಡುತ್ತದೆ.
ಪ್ರತಿ ಸದಸ್ಯರಿಗೆ 10 ಕೆಜಿ ಕೊಡಬೇಕಿದ್ದರಿಂದ ನಾಲ್ಕು ಸದಸ್ಯರಿದ್ದರೆ 5 ಕೆಜಿ ಅಕ್ಕಿ ಕಡಿಮೆಯಾಗುತ್ತದೆ. ಆ ಅಕ್ಕಿಯ ಹಣವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಅದರಂತೆ ಐವರು ಸದಸ್ಯರಿದ್ದರೆ 15 ಕೆಜಿಯ ಹಣ, 6 ಸದಸ್ಯರಿದ್ದರೆ 25 ಕೆಜಿಯ ಹಣವನ್ನು ಜಮೆ ಮಾಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
