ಮೈಸೂರು;ಇನ್ಮುಂದೆ ಜೆ.ಡಿ.ಎಸ್ ಪಕ್ಷದ ಜೊತೆ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಮುಲ್ (ಮೈಸೂರು ಹಾಲು ಒಕ್ಕೂಟ) ವಿಚಾರವಾಗಲಿ, ಬೇರೆ ಯಾವುದೇ ವಿಚಾರವಾಗಲಿ ಇನ್ನು ಮುಂದೆ ಜೆ.ಡಿ.ಎಸ್ ಜೊತೆ ಯಾವುದೇ ತೆರನಾದ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು
ಸಹಕಾರ ಸಂಘಗಳ ಚುನಾವಣೆ ಚಿಹ್ನೆ ಮೇಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆ.ಡಿ.ಎಸ್ ಗೆ ಯಾವುದೇ ರೀತಿಯ ಬೆಂಬಲ ಇಲ್ಲ. ಕುಮಾರಸ್ವಾಮಿ ಹೇಳಿದರೂ ಅಷ್ಟೆ, ಯಾರು ಹೇಳಿದರೂ ಅಷ್ಟೇ. ಈ ವಿಷಯವನ್ನು ನಾನೇ ಹೇಳುತ್ತಿದ್ದೇನೆ, ಇನ್ನುಮುಂದೆ ಜೆಡಿಎಸ್ ಜೊತೆ ಯಾವುದೇ ಮೈತ್ರಿಯಿಲ್ಲ ಎಂದು ಖಡಕ್​ ಆಗಿ ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ಗೊತ್ತಾಗಲಿ. ಡಿಕೆಶಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರನ್ನು ಸಿಲುಕಿಸುತ್ತಿದ್ದಾರೆ ಎಂದು ಡಿಕೆಶಿಯೆ ಹೇಳಿದ್ದಾರೆ. ಹಾಗೆಂದು ಅವರಿಗೆ ಅನ್ನಿಸಿರಬಹುದು. ಆದರೆ ಇಂತಹ ಪ್ರಕರಣಗಳಿಂದ ರಾಜಕಾರಣಿಗಳ ಮಾನ ಮರ್ಯಾದೆ ಹೋಗುತ್ತದೆ. ಜನರು ರಾಜಕಾರಣಿಗಳ ಬಗ್ಗೆ ಲಘುವಾಗಿ, ಹಗುರವಾಗಿ ಮಾತನಾಡಲು ಶುರು ಮಾಡುತ್ತಾರೆ. ಆಗ ನಾವೇನು ಮಾಡೋಕಾಗೋದಿಲ್ಲ ಎಂದು ಹೇಳಿದ್ದಾರೆ.
ಪರೀಕ್ಷೆ ಇಲ್ಲದೇ ಮಕ್ಕಳು ಪಾಸಾ? ಕಾಲೇಜುಗಳಿಗೆ 15 ದಿನ ರಜೆನಾ? ‘ಸುತ್ತೋಲೆ’ಯ ಅಸಲಿಯತ್ತೇನು?

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ: ಬಿವೈ ವಿಜಯೇಂದ್ರ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
