ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಪರಿಸರಕ್ಕೆ ಮಾರಕ ಹಾಗೂ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ತರುವ ಯಾವುದೇ ಪ್ಲಾಸ್ಟಿಕ್ ಹಾಗೂ ಅಪಾಯಕಾರಿ ರಾಸಾಯನಿಕಗಳು ತುಂಬಿರುವ ಬಲೂನ್​ಗಳನ್ನು ಬಳಸದಂತೆ ಪರಿಸರ ತಜ್ಞರು, ವನ್ಯಜೀವಿ ಪ್ರೇಮಿಗಳು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವದ ವೇಳೆ ತಿರಂಗಾ ಚಿತ್ರ ಉಳ್ಳ ಬಲೂನ್, ಪ್ಲಾಸ್ಟಿಕ್ ಧ್ವಜಗಳನ್ನು ಜನರು ಹೆಚ್ಚಾಗಿ ಬಳಸುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ತ್ಯಾಜ್ಯ ಸೇರಿ ಕರಗದೇ ಕೂರುವ ಈ ಪ್ಲಾಸ್ಟಿಕ್ ವಸ್ತುಗಳು ಪ್ರಾಣಿ, ಪಕ್ಷಿಗಳ ಹೊಟ್ಟೆ ಸೇರುತ್ತದೆ. ಇದರಿಂದ ಮೂಕ ಪ್ರಾಣಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೇ ದೊಡ್ಡ ದೊಡ್ಡ ಬಲೂನ್​ಗಳು ಸ್ಪೋಟಿಸಿ ಸಾವು ಸಂಭವಿಸಿರುವ ಹಲವು ನಿದರ್ಶನಗಳಿವೆ. ಹೀಗಾಗಿ ಪರಿಸರಕ್ಕೆ ಪ್ರೇರಕವಾಗುವ ರೀತಿ ಸ್ವಾತಂತ್ರೊ್ಯೕತ್ಸವ ಆಚರಿಸುವಂತೆ ಜಿಲ್ಲಾಡಳಿತಗಳು ಸ್ಪಷ್ಟ ನಿರ್ದೇಶನ ನೀಡಿವೆ.
ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯ, ಭಾರತ ಸರ್ಕಾರ ಕೂಡ ಏಕ ಬಳಕೆಯ ಪ್ಲಾಸ್ಟಿಕ್​ನಿಂದ ತಯಾರಿಸಿದ ಧ್ವಜಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆ ನಿಷೇಧಿಸಿದೆ. ಆದರೆ, ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್​ನ ರೂಪವೇ ಆಗಿರುವ ಬಲೂನುಗಳ ಬಳಕೆ ನಿಷೇಧದ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿದೆ.
ಅಪಾಯಕಾರಿ ಅನಿಲ:ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಸಂದರ್ಭಗಳಲ್ಲಿ ಪ್ಲಾಸ್ಟಿಕ್​ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸುವಂತಿಲ್ಲ ಎಂದು ರಾಷ್ಟ್ರೀಯ ಗೌರವ ಕಾಯ್ದೆ ಮತ್ತು ಭಾರತದ ಧ್ವಜ ಸಂಹಿತೆ ತಿಳಿಸಿದೆ. ಆದರೆ, ಪ್ಲಾಸ್ಟಿಕ್​ನಷ್ಟೇ ಅಪಾಯಕಾರಿಯಾದ ಹೀಲಿಯಂ, ಹೈಡ್ರೋಜನ್ ಅನಿಲ ಬಳಸಿದ ಬಲೂನುಗಳ ಬಳಕೆ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದೊಂದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಪರಿಸರಕ್ಕೆ ಮಾರಕವಾಗಿರುವ ಈ ಸಂಸ್ಕೃತಿಯನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಅವಘಡಕ್ಕೆ ದಾರಿ:ಹಿಲಿಯಂ ಅನಿಲ ತುಂಬಿಕೊಂಡ ಬಲೂನುಗಳು ವಿದ್ಯುತ್ ಸಂಪರ್ಕಕ್ಕೆ ಬಂದರೆ ಸ್ಪೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ. ಬಲೂನುಗಳನ್ನು ಹಾರಿಬಿಟ್ಟಾಗ ಅವು ವಿದ್ಯುತ್ ತಂತಿಗಳಿಗೆ ತಗುಲಿ ಅವಘಡಗಳಿಗೆ ದಾರಿ ಮಾಡಿಕೊಡುತ್ತವೆ ಎಂಬ ಆತಂಕವಿದೆ.
ಪಕ್ಷಿಗಳ ಪ್ರಾಣಕ್ಕೆ ಕುತ್ತು:ನೂರಾರು ಬಲೂನುಗಳ ಗುಚ್ಛವನ್ನು ಹಾರಿಬಿಟ್ಟ ಬಳಿಕ ಅವು ಸ್ಪೋಟಗೊಂಡರೆ ಮರ-ಗಿಡ, ಕಟ್ಟಡ ಸೇರಿ ಎಲ್ಲೆಂದರಲ್ಲಿ ಬೀಳುತ್ತವೆ. ಅವುಗಳು ಪಕ್ಷಿಗಳ ಕಾಲಿಗೆ, ಕತ್ತಿಗೆ ಸುತ್ತಿಕೊಂಡು ಪಕ್ಷಿಗಳ ಪ್ರಾಣಕ್ಕೆ ಸಂಚಕಾರ ತರುತ್ತವೆ ಎಂಬುದು ಪಕ್ಷಿ ಪ್ರಿಯರ ಆತಂಕವಾಗಿದೆ.
ಮಕ್ಕಳಿಗೂ ಡೇಂಜರ್ :ಬೆಂಗಳೂರಿನ ಕೆಆರ್ ಪುರಂನಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮ ವೊಂದರಲ್ಲಿ ಹೀಲಿಯಂ ಬಲೂನು ವಿದ್ಯುತ್ ತಂತಿಗೆ ತಗುಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮಕ್ಕಳು ತೀವ್ರ ಗಾಯಗೊಂಡಿದ್ದರು. ಕಳೆದ ವರ್ಷ ಬೆಂಗಳೂರಿನಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಬಲೂನ್ ಸ್ಪೋಟಗೊಂಡು ಮೃತಪಟ್ಟ ಪ್ರಕರಣ ನಡೆದಿತ್ತು. ರಸ್ತೆ ಬದಿಯಲ್ಲಿ ಬಲೂನ್ ಮಾರಾಟ ಮಾಡುವಾಗ ಅವಘಡ ಸಂಭವಿಸಿತ್ತು.
ಬಲೂನು ಹಾಗೂ ಏಕ ಬಳಕೆ ಪ್ಲಾಸ್ಟಿಕ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪ್ಲಾಸ್ಟಿಕ್​ನಂತೆಯೇ ಇದೂ ಪರಿಸರಕ್ಕೆ ಮಾರಕವಾಗಿದೆ. ಭೂಮಿಯಲ್ಲಿ ಇದು ಕೊಳೆಯುವುದಿಲ್ಲ. ನೀರಿನಲ್ಲಿ ಸೇರಿದರೆ ಕೊಕ್ಕರೆ, ಮೀನು ಸೇರಿ ಜಲಚರಗಳ ಪ್ರಾಣಕ್ಕೆ ಕುತ್ತು ತರುತ್ತದೆ. ಯಾವುದೇ ಸರ್ಕಾರಿ ಹಾಗೂ ಇನ್ನಿತರ ಖಾಸಗಿ ಕಾರ್ಯಕ್ರಮಗಳಲ್ಲಿ ಬಲೂನುಗಳನ್ನು ಹಾರಿಬಿಡಬಾರದೆಂದು ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಬಳಕೆಯಿಂದ ಭೂಮಿ, ವಾಯು, ನೀರು ಸೇರಿ ಎಲ್ಲ ಬಗೆಯಲ್ಲೂ ತೊಂದರೆ ಎದುರಾಗಲಿದೆ.
| ಬಾಲಚಂದ್ರ, ಎಸ್​ಇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
ಬಲೂನ್ ಹಾರಿ ಬಿಡಲು ಬಳಸುವ ಹೀಲಿಯಂ, ಹೈಡ್ರೋಜನ್ ಮತ್ತಿತರ ರಾಸಾಯನಿಕ ಪರಿಸರದಲ್ಲಿನ ಪ್ರಾಣವಾಯುವಿನೊಂದಿಗೆ ಬೆರೆತು ಮನುಷ್ಯನ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ಸರ್ಕಾರಿ ಕಾರ್ಯಕ್ರಮಗಳಲ್ಲದೆ ಖಾಸಗಿ ಕಾರ್ಯಕ್ರಮಗಳಲ್ಲೂ ಇಂಥದ್ದೊಂದು ವಿನಾಶಕ ಸಂಸ್ಕೃತಿ ಹೆಚ್ಚಿರುವುದು ಆತಂಕಕಾರಿ ವಿಷಯ.
| ಯಲ್ಲಪ್ಪರೆಡ್ಡಿ ಪರಿಸರ ತಜ್ಞ
ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಆಯ್ಕೆ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:10 + sixteen =
Remember me
