ಬೆಂಗಳೂರು:ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಿಡುಗಡೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಸದ್ಯದ ಮಟ್ಟಿಗೆ ಈ ಪ್ರಕರಣದ ಬಗ್ಗೆ ಯಾರೊಬ್ಬರೂ ಯಾವುದೇ ಹೇಳಿಕೆಯನ್ನು ಕೊಡಬೇಡಿ ಎಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ರಮೇಶ್​ ಜಾರಕಿಹೊಳಿ ಪ್ರಕರಣದ ಮಾಹಿತಿಯನ್ನು ಹೈ ಕಮಾಂಡ್​ಗೆ ನೀಡಲಾಗಿದೆ. ಅಲ್ಲಿಂದ ಸೂಚನೆ ಬಂದ ನಂತರವೇ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೂ ಹೇಳಿಕೆ ಕೊಡದಿರುವಂತೆ ಪಕ್ಷದೆ ನಾಯಕರಿಗೆ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಅವರ ಅಧಿಕೃತ ನಿವಾಸದಲ್ಲಿ ಬೊಮ್ಮಯಿ ಹಾಗೂ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸಭೆ ನಡೆಸಿದ್ದು ಈ ಕುರಿತಾಗಿ ಚರ್ಚೆ ನಡೆಸಿರುವುದಾಗಿ ಹೇಳಲಾಗಿದೆ.
ಸರ್ಕಾರಕ್ಕೆ ಈ ಆರೋಪದಿಂದಾಗಿ ಭಾರೀ ಮುಜುಗರವಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹಲವು ರೀತಿಯ ಪ್ಲಾನ್​ ಮಾಡುತ್ತಿದೆ ಎನ್ನಲಾಗಿದೆ. ವೀಡಿಯೋ ಯಾವ ವರ್ಷದ್ದು ಅನ್ನುವ ವರದಿ ಪಡೆಯುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ಇದು ಹನಿಟ್ರ್ಯಾಪ್​ನಂತೆ ಕಂಡುಬಂದಿದೆ. ಮಹಿಳೆ ಜತೆ ಸಚಿವರು ಅನೇಕ ವರ್ಷಗಳಿಂದ ಒಡನಾಟದಲ್ಲಿರುವ ಸಾಧ್ಯತೆಯಿದೆ. ವಿಡಿಯೋ ಬಗ್ಗೆ ತನಿಖೆ ನಡೆಸುವುದಾಗಿ ಹೇಳುವ ಸಾಧ್ಯತೆಯೂ ಇದೆ. ಅದಾದ ಮೇಲೆ ತನಿಖೆ ಬರುವವರೆಗೂ ಈ ಕುರಿತು ಚರ್ಚೆ ಮುಂದೂಡಲಾಗುವುದು. ಒಂದು ವೇಳೆ ವಿರೋಧ ಪಕ್ಷಗಳ ಒತ್ತಡ ಹೆಚ್ಚಾದರೆ ಅಂತಿಮವಾಗಿ ಸಚಿವರ ರಾಜೀನೇಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆ ಸಚಿವ ಸಂಪುಟವಿದ್ದು, ಅದರಲ್ಲಿ ಈ ಕುರಿತಾಗಿ ಚರ್ಚೆ ಆಗುವ ಸಾಧ್ಯತೆಯಿದೆ. ಆ ಸಮಯದಲ್ಲಿ ಯಾವ ರೀತಿಯಲ್ಲಿ ಪರಿಸ್ಥಿತಿ ನಿಯಂತ್ರಿಸಬೇಕು ಎನ್ನುವುದರ ಕುರಿತು ನಾಯಕರು ಚರ್ಚೆ ಮಾಡಿರುವುದಾಗಿ ಹೇಳಲಾಗಿದೆ.
ಇದಿನ್ನೂ ಟ್ರೇಲರ್​​, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್​!? ಈ ಭಾಗದ ಸಚಿವರ ಸಿಡಿ ರಿಲೀಸ್​ ಆಗೋ ಸಾಧ್ಯತೆ!

‘ಕರ್ನಾಟಕ ಭವನವೇನು ನಿಮ್ಮ​ ಬೆಡ್​ ರೂಮಾ?’ ಬಿಜೆಪಿ ನಾಯಕರಿಗೆ ಕಾಂಗ್ರೆಸ್​ ಪ್ರಶ್ನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
