ಬೆಂಗಳೂರು:ಕಾಂಗ್ರೆಸ್​ ಸರ್ಕಾರದ ನೂತನ​ ಸಚಿವರು ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಇಂದು ಬೆಳಗ್ಗೆ 11.45ಕ್ಕೆ ರಾಜಭವನದಲ್ಲಿ 24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಅನೇಕ ಹಿರಿಯರಿಗೆ ಕೋಕ್​ ನೀಡಿ ಹೊಸಬರಿಗೆ ಮಣೆ ಹಾಕಲಾಗಿದೆ. ಅದರಲ್ಲೂ ವಲಸಿಗರಿಗಂತೂ ಯಾವುದೇ ಸಚಿವ ಸ್ಥಾನವನ್ನು ನೀಡಲಾಗಿಲ್ಲ.
ವಿಧಾನಸಭಾ ಚುನಾವಣೆ ವೇಳೆ ಅನೇಕ ನಾಯಕರು ವಿವಿಧ ಪಕ್ಷವನ್ನು ತೊರೆದು ಕಾಂಗ್ರೆಸ್​ ಸೇರಿದರು. ಕಾಂಗ್ರೆಸ್ಸಿನಿಂದ ಗೆದ್ದರೂ​ ಹೈಕಮಾಂಡ್​ ಸಚಿವ ಸ್ಥಾನವನ್ನು ನೀಡಿಲ್ಲ. ಹಲವು ವಲಸಿಗರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಲಕ್ಷ್ಮಣ್ ಸವದಿ, ಶಿವಲಿಂಗೇಗೌಡ, ಯು. ಬಿ. ಬಣಕಾರ್, ವೈ. ಗೋಪಾಲಕೃಷ್ಣ, ಗುಬ್ಬಿ ಶ್ರೀನಿವಾಸ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ:ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ
ಲಕ್ಷ್ಮಣ ಸವದಿ, ಶಿವಲಿಂಗೇಗೌಡ ಹೆಸರು ಪ್ರಮುಖವಾಗಿ ಚರ್ಚೆಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಸಚಿವರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಸೋತಿರುವ ಜಗದೀಶ್ ಶೆಟ್ಟರ್ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇವರಿಗೂ ಸಚಿವ ಸ್ಥಾನ ಮಿಸ್ ಆಗಿದೆ. ವಲಸಿಗರ ಪೈಕಿ ಮಧು ಬಂಗಾರಪ್ಪರಿಗೆ ಮಾತ್ರ ಸಚಿವ ಸಿಕ್ಕಿದೆ. ಅವರು ಒಂದೂವರೆ ವರ್ಷದ ಹಿಂದೆಯೇ ಕಾಂಗ್ರೆಸ್ ಸೇರಿದ್ದರು.(ದಿಗ್ವಿಜಯ ನ್ಯೂಸ್​)
ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!

ನಮ್ಮ ಮಾವಂದ ಮೇ 31ಕ್ಕ ಮುಗಿತ…

ದುಬೈ ರಾಜಕುಮಾರಿಯ ಪಲಾಯನದ ಕಥೆ-ವ್ಯಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
