ಬೆಂಗಳೂರು:ಸಂಕ್ರಾಂತಿಗೆ ಸಂಪುಟ ಸೇರುವ ಆಸೆಹೊತ್ತಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಖಚಿತವಾಗಿದೆ. ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂಪುಟ ಸರ್ಜರಿ ವಿಚಾರವಾಗಿ ಶುಭ ಸುದ್ದಿಯನ್ನೇನು ಹೊತ್ತು ತಂದಿಲ್ಲ. ಶನಿವಾರ ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಅರುಣ್ ಸಿಂಗ್ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಯಾವುದೇ ಸಂದೇಶ ನೀಡಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ಜ.15ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿಯೇ ಬಹುತೇಕ ಎಲ್ಲವೂ ಅಂತಿಮವಾಗಲಿದೆ ಎಂದು ಅರುಣ್ ಸಿಂಗ್ ತಿಳಿಸಿರುವುದಾಗಿ ಮೂಲಗಳು ಖಚಿತಪಡಿಸಿವೆ.
ಅರುಣ್ ಸಿಂಗ್ ಹಾಗೂ ಯಡಿಯೂರಪ್ಪ ನಡುವೆ ಸುಮಾರು 20 ನಿಮಿಷ ಮಾತುಕತೆ ನಡೆಯಿತು. ಈ ಅವಧಿಯಲ್ಲಿ ಹೆಚ್ಚು ಸಮಯ ಗ್ರಾಮ ಪಂಚಾಯಿತಿ ಚುನಾವಣೆಯ ವಿಜಯ ವಿಚಾರಕ್ಕೆ ಸೀಮಿತವಾಗಿತ್ತೆಂದು ಹೇಳಲಾಗಿದೆ. ರಾಜ್ಯದ ಗ್ರಾಪಂಗಳಲ್ಲಿ ಶೇ.60 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸುಮಾರು 3800 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದೇವೆ. ಮುಂದೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆಗೂ ಇದರಿಂದ ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ಸಿಎಂ ಅಂಕಿಅಂಶಗಳ ಸಹಿತ ವಿವರಿಸಿದ್ದಾರೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಗ್ರಾಮೀಣ ಭಾಗಕ್ಕೂ ಪಕ್ಷ ವಿಸ್ತರಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅರುಣ್ ಸಿಂಗ್, ಮುಂದಿನ ಚುನಾವಣೆಗಳಲ್ಲಿಯೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಈಗಿನಿಂದಲೇ ಕಾರ್ಯತಂತ್ರ ರೂಪಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತರಿದ್ದರು.
ಶಿವಮೊಗ್ಗಕ್ಕೆ ಒಟ್ಟಿಗೆ ಪಯಣ:ಶಿವಮೊಗ್ಗಕ್ಕೆ ರಸ್ತೆಯ ಮೂಲಕ ತೆರಳಬೇಕಿದ್ದ ಅರುಣ್ ಸಿಂಗ್ ಅಂತಿಮವಾಗಿ ಯಡಿಯೂರಪ್ಪ ಜತೆ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಹ ಇದ್ದರು.
ಜಂಟಿ ಅಧಿವೇಶನ ಮುಂದೂಡಿಕೆ?:ಅಮಿತ್ ಷಾ ರಾಜ್ಯ ಭೇಟಿ ಹಾಗೂ ಇತರ ಕಾರಣಗಳಿಂದ ಜನವರಿ 3ನೇ ವಾರದಲ್ಲಿ ನಡೆಸಲು ಉದ್ದೇಶಿ ಸಿದ್ದ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಫೆಬ್ರವರಿ ಮೊದಲ ವಾರಕ್ಕೆ ಮುಂದೂಡುವ ಸಾಧ್ಯತೆ ಗಳಿವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರ ವಾಗಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶೀಘ್ರ ಸಂಪುಟ ವಿಸ್ತರಿಸಬೇಕೆಂಬ ಉದ್ದೇಶವನ್ನು ಹೊಂದಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಜನವರಿ ಮೂರನೇ ವಾರದಲ್ಲಿ ಕರೆಯಲು ಸಿದ್ಧತೆ ಆಗುತ್ತಿರುವ ನಡುವೆಯೇ ಅದಕ್ಕೆ ಮೊದಲೇ ತಾನು ಭರವಸೆ ಕೊಟ್ಟಿದ್ದವರನ್ನು ಸದನಕ್ಕೆ ಕರೆದುಕೊಂಡು ಹೋಗುವ ಆಸೆಯನ್ನು ಹೊಂದಿದ್ದಾರೆ. ಆದರೆ ಹೈಕಮಾಂಡ್​ನಿಂದ ಈ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ವಣವಾಗುತ್ತಿಲ್ಲ. ಬಿಜೆಪಿಯಲ್ಲಿ ಮೊದಲಿನಿಂದಲೂ ಸಂಪುಟ ವಿಸ್ತರಣೆ ಹೈಕಮಾಂಡ್ ಮಟ್ಟದಲ್ಲೇ ಚರ್ಚೆಯಾಗಿ ತೀರ್ವನವಾಗುತ್ತದೆ, ರಾಜ್ಯದ ಕೋರ್ ಕಮಿಟಿಯಲ್ಲಿ ಅಂತಹ ಚರ್ಚೆಗಳು ಆಗುವುದಿಲ್ಲ ಎನ್ನಲಾಗಿದೆ. ಅಮಿತ್ ಷಾ ರಾಜ್ಯಕ್ಕೆ ಬಂದಾಗ ಇಲ್ಲಿನ ಮುಖಂಡರೊಂದಿಗೆ ಪ್ರಸ್ತಾಪ ಮಾಡಿದರೂ ಅದು ತೀರ್ಮಾನ ವಾಗಿ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ರ್ಚಚಿಸಿ ಅಂತಿಮ ಗೊಳಿಸಲಿದ್ದಾರೆ. ಆದ್ದರಿಂದ ತಕ್ಷಣಕ್ಕೆ ಸಂಪುಟ ವಿಸ್ತರಣೆ ಮರೀಚಿಕೆಯೇ ಸರಿ.
ಅರುಣ್ ಸಿಂಗ್ ಜತೆ ಸಂಪುಟ ವಿಚಾರ ಚರ್ಚೆ:ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆ ರ್ಚಚಿಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಪಕ್ಷದ ಪ್ರಮುಖರ ಕೋರ್ ಕಮಿಟಿ ಸಭೆ ಜತೆ ಕಾರ್ಯಕಾರಿಣಿ ಸಭೆಯೂ ನಡೆಯಲಿದೆ. ಅದಾದ ಬಳಿಕ ಅರುಣ್ ಸಿಂಗ್ ಅವರೊಂದಿಗೆ ಮತ್ತೊಮ್ಮೆ ಮಾತನಾಡಲಾಗುವುದು. ಸಚಿವ ಸಂಪುಟ ವಿಸ್ತರಣೆ, ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿಗೆ ಕಾರಣಗಳು, ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮಾಲೋಚಿಸುವುದಾಗಿ ಸಿಎಂ ಸ್ಪಷ್ಟಪಡಿಸಿದರು.
ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!

ಯುವ ಧೂಮಪಾನಿಗಳಿಗಿದು ‘ಉಸಿರುಗಟ್ಟಿಸೋ’ ಸುದ್ದಿ; ಅವರನ್ನೇ ಗುರಿಯಾಗಿಸಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!

ಪ್ರಿಯತಮನಿಗೆ ಜಾಮೀನು ಕೊಡಿಸಲು ಒಪ್ಪದ ಅಪ್ಪ; ಸಿಟ್ಟಿಗೆದ್ದ ಅಪ್ರಾಪ್ತೆ ಹೀಗಾ ಮಾಡೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
