ಬೆಂಗಳೂರು/ಶಿವಮೊಗ್ಗ:ಶಿವಮೊಗ್ಗದಲ್ಲಿ ಎರಡು ದಿನ ಕಾಲ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಹಾಗೂ ವಿಶೇಷ ಸಭೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಕರ್ನಾಟಕದಲ್ಲಿ ಪಕ್ಷಕ್ಕೆ ಬಿಎಸ್​ವೈ ಸುಪ್ರೀಂ. ಅನಗತ್ಯ ಹೇಳಿಕೆ ನೀಡಿದವರನ್ನು ಪಕ್ಷದ ಕೇಂದ್ರ ಶಿಸ್ತು ಸಮಿತಿ ನೋಡಿಕೊಳ್ಳುತ್ತದೆ’ ಎಂದು ಹೇಳುವ ಮೂಲಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಬಿಎಸ್​ವೈ ನಾಯಕತ್ವ ವಿಚಾರದಲ್ಲಿ ಸೃಷ್ಟಿಯಾಗಿದ್ದ ಗೊಂದಲಗಳಿಗೆ ಕೇಂದ್ರ ಬಿಜೆಪಿ ತೆರೆ ಎಳೆದಿದೆ. ಜತೆಗೆ ರಾಜ್ಯ ಸರ್ಕಾರದ ತೀರ್ವನಗಳು, ಕಾರ್ಯನಿರ್ವಹಣೆಗೂ ಪೂರ್ಣ ಅಂಕ ನೀಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಭೇರಿ ಬೆನ್ನಲ್ಲೇ ಬಿಜೆಪಿ ಸಭೆಗಳು ಭಾನುವಾರ ಸಂಪನ್ನಗೊಂಡಿವೆ. ಮುಂದಿನ ಎಲ್ಲ ಚುನಾವಣೆಗಳನ್ನು ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸಲು ನಿರ್ಣಯ ಕೈಗೊಳ್ಳಲಾಯಿತು. ಇದು ಬಿಎಸ್​ವೈಗೆ ಮತ್ತಷ್ಟು ಬಲ ತುಂಬಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140-150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಅವರು ಹಾಕಿಕೊಂಡಿದ್ದು, ವಿವಿಧ ಹಂತದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ.
ಯತ್ನಾಳ್ ಯಾರು?:ಸರಣಿ ಸಭೆಯ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಸಿಎಂ ಬದಲಾವಣೆ ಬಗ್ಗೆ ಪದೇಪದೆ ಚರ್ಚೆ ನಡೆಯುತ್ತಿದೆ. ಇದರ ಅಗತ್ಯವೇ ಇಲ್ಲ. ಪಕ್ಷದಲ್ಲಿ ಎಲ್ಲ ಕಾರ್ಯಕರ್ತರನ್ನೂ ಗೌರವವಿದೆ. ಸಮಸ್ಯೆಗಳಿದ್ದರೆ ಪಕ್ಷದೊಳಗೆ ರ್ಚಚಿಸಬೇಕು. ಚೌಕಟ್ಟನ್ನು ಮೀರಿ ಹೇಳಿಕೆ ನೀಡಬಾರದು ಎಂದು ಎಚ್ಚರಿಸಿ ದರು. ಇದೇ ವೇಳೆ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗಳ ಕುರಿತು ಪ್ರಸ್ತಾಪಿಸಿದಾಗ ಸಿಡಿಮಿಡಿಗೊಂಡ ಅರುಣ್ ಸಿಂಗ್, ‘ಯತ್ನಾಳ್ ಯಾರು’ ಎಂದು ಅಸಹನೆ ಹೊರಹಾಕಿದರು.
ಸಚಿವ ಸಂಪುಟ ವಿಸ್ತರಣೆ ಶೀಘ್ರ:ಶೀಘ್ರವೇ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು. ಅವರು ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು. ಜೆಡಿಎಸ್​ನೊಂದಿಗೆ ಹೊಂದಾಣಿಕೆಯನ್ನು ತಳ್ಳಿಹಾಕಿದ ಅರುಣ್ ಸಿಂಗ್, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಮುಂದಿನ ಚುನಾವಣೆಯಲ್ಲೂ ಗೆಲುವು ಸಾಧಿಸಬೇಕು. ಯಾವುದೇ ಪಕ್ಷದ ಜತೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೂರು ಸಭೆಗಳು:ಕೋರ್ ಕಮಿಟಿ, ರಾಜ್ಯ ಪದಾಧಿಕಾರಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಗಳಲ್ಲಿ ಪಕ್ಷದ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈಗಿನಿಂದಲೇ ತಾ.ಪಂ., ಜಿ.ಪಂ. ಚುನಾವಣೆಗೆ ತಯಾರಿ ನಡೆಸಬೇಕು. ಸರ್ಕಾರ ಮತ್ತು ಪಕ್ಷದ ನಡುವಣ ಸಮನ್ವಯ ಉತ್ತಮವಾಗಿದೆ ಎಂಬ ಮಾತು ಕೇಳಿಬಂತು.
ಗೋಹತ್ಯೆ ನಿಷೇಧಾಜ್ಞೆ ಸುಗ್ರೀವಾಜ್ಞೆ ಹೊರಡಿಸಿದ್ದಕ್ಕೆ ಸಭೆ ಹರ್ಷ ವ್ಯಕ್ತಪಡಿಸಿದೆ. ಜತೆಗೆ ಲವ್ ಜಿಹಾದ್ ಕಾಯ್ದೆಯೂ ಮುಂದಿನ ಸಭೆ ವೇಳೆಗೆ ಕಾರ್ಯರೂಪಕ್ಕೆ ತರಬೇಕೆಂಬ ಇಚ್ಛೆ ವ್ಯಕ್ತಪಡಿಸಿದೆ. ನಿಗಮ-ಮಂಡಳಿಗಳಿಗೆ ನೇಮಕವಾಗಿರುವ ಅಧ್ಯಕ್ಷರು, ನಿರ್ದೇಶಕರ 6 ತಿಂಗಳ ಅವಧಿಯ ಕಾರ್ಯ ಕ್ಷಮತೆ ಮೌಲ್ಯಮಾಪನ, ಅವರ ಕಾರ್ಯ ತೃಪ್ತಿಕರವಾಗಿರದಿದ್ದರೆ ಬದಲಾವಣೆಯ ಸೂಚನೆಯನ್ನೂ ನೀಡಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗಾಗಿ 3 ತಿಂಗಳು ನಡೆಸಿದ ತಯಾರಿ, ಬಳಸಿದ ಕಾರ್ಯತಂತ್ರಗಳು ನಿರೀಕ್ಷೆಗೆ ಮೀರಿದ ಫಲ ನೀಡಿವೆ. ಮೋದಿ ಹಾಗೂ ಬಿಎಸ್​ವೈ ಸರ್ಕಾರದ ಸಾಧನೆಗಳು ನೆರವಾಗಿವೆ ಎಂಬ ಮಾತು ಸಭೆಯಲ್ಲಿ ಕೇಳಿಬಂತು. ಯಶಸ್ವಿ ಕಾರ್ಯತಂತ್ರ ಮುಂದುವರಿಸುವ ಜತೆಗೆ ಜನ ಸೇವಕ ಸಮಾವೇಶ, ಗೆದ್ದ ಗ್ರಾ.ಪಂ. ಸದಸ್ಯರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆಗಳ ಮೂಲಕ ಎಲ್ಲ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲು ನಿರ್ಧರಿಸಲಾಯಿತು. ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳ ಉದ್ದೇಶ ರೈತರಿಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮ ಮುಂದುವರಿಸುವುದು, ರೈತರ ಹೆಸರಿನಲ್ಲಿ ಚಳವಳಿ ನಡೆಯುತ್ತಿದೆ ಎಂದು ಖಂಡಿಸಿ ನಿರ್ಣಯ ಅಂಗೀಕರಿಸಲಾಯಿತು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಶಾಸಕರನ್ನು ಗೆಲ್ಲಿಸುವ ಗುರಿಯಿದೆ. ಇದಕ್ಕಾಗಿ ಪಕ್ಷ ಸಂಘಟಿಸಲು ಶೀಘ್ರವೇ ರಾಜ್ಯ ಪ್ರವಾಸ ಮಾಡುವೆ.
|ಬಿ.ಎಸ್. ಯಡಿಯೂರಪ್ಪಮುಖ್ಯಮಂತ್ರಿ
ರಾಮ ಮತ್ತು ರೈತನ ಸಂದೇಶವನ್ನು ಈ ಸಭೆಯು ನೀಡಿದೆ. ಗ್ರಾ.ಪಂ.ಗಳಲ್ಲಿ ಯಶಸ್ಸು ಸಾಧಿಸಿದ ಮಾದರಿಯಲ್ಲೇ ತಾ.ಪಂ., ಜಿ.ಪಂ. ಚುನಾವಣೆಗೆ ಶ್ರಮಿಸಲು ‘ಜನ ಸೇವಕ’ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ.
|ನಳಿನ್ ಕುಮಾರ್ ಕಟೀಲ್ಬಿಜೆಪಿ ರಾಜ್ಯಾಧ್ಯಕ್ಷ
‘ಬಿಜೆಪಿಯನ್ನು ಮೆಚ್ಚಿಸಲು ಹೊರಟಿದ್ದಕ್ಕೆ 25-30 ಕೇಸಾಯಿತು, ಊರ್ಮಿಳಾ ಕಾಂಗ್ರೆಸ್​ನ್ನು ಮೆಚ್ಚಿಸಿ ಹೊಸ ಆಫೀಸು ಖರೀದಿಸಿದರು, ನಾನೆಷ್ಟು ಪೆದ್ದಿ’

ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
