ಬೆಂಗಳೂರು:ಬೆಂಗಳೂರು ನಗರದ ಶಾಲೆಗಳ ಸಮಯವನ್ನು ಬದಲಾವಣೆ ಮಾಡದಿರುವಂತೆ ಶಿಕ್ಷಣ ಇಲಾಖೆ ಪಾಲುದಾರರಾದ ಖಾಸಗಿ ಶಾಲೆಗಳು, ಪಾಲಕರ ಸಂಘಟನೆ, ಪೊಲೀಸ್ ಮತ್ತು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿವೆ.
ಬೆಂಗಳೂರು ಮಹಾನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್​ಕುಮಾರ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು.
ಶಿಕ್ಷಣ ಇಲಾಖೆಯು ಮಂಗಳವಾರ ಹೈಕೋರ್ಟ್​ನಲ್ಲಿ ‘ಶಾಲಾ ಸಮಯ ಪರಿಷ್ಕರಣೆ’ ಕುರಿತು ನಡೆಯಲಿರುವ ವಿಚಾರಣೆಯಲ್ಲಿ ಪಾಲುದಾರರ ಅಭಿಪ್ರಾಯವನ್ನು ಮಂಡಿಸಲಿದೆ. ಹೈಕೋರ್ಟ್​ನ ತೀರ್ಪಿನ ಆಧಾರದಲ್ಲಿ ಶಾಲಾ ಸಮಯ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಿದೆ. ಸಭೆಯ ಬಳಿಕ ಮಾತನಾಡಿದ ರಿತೇಶ್​ಕುಮಾರ್ ಸಿಂಗ್, ಸಾರಿಗೆ, ಪೊಲೀಸ್ ಇಲಾಖೆ, ಖಾಸಗಿ ಶಾಲೆಗಳು ಮತ್ತು ಪಾಲಕರು ಸಂಘಟನೆಗಳು ಹಾಲಿ ಚಾಲ್ತಿಯಲ್ಲಿರುವ ಸಮಯವನ್ನೇ ಮುಂದುವರಿಸುವಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿವೆ ಎಂದು ತಿಳಿಸಿದರು. ಸಭೆಯಲ್ಲಿ ಪ್ರಮುಖವಾಗಿ ಸಂಚಾರ ದಟ್ಟಣೆ ನಿವಾರಣೆ ಮಾಡಲು 4-5 ಖಾಸಗಿ ಶಾಲೆಗಳು ಸೇರಿ ಒಮ್ಮತದಿಂದ ಅನುಮತಿ ನೀಡಿದರೆ, ಬಿಎಂಟಿಸಿ ಬಸ್​ಗಳನ್ನು ಓಡಿಸಲಾಗುತ್ತದೆ. ಇದು ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಬೋಧಕ ಸಿಬ್ಬಂದಿ ಮಾತ್ರ ಮೀಸಲಾಗಿರುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು. ವಿದೇಶಗಳಲ್ಲಿ ಸ್ಥಳೀಯವಾಗಿ ಸಂಚಾರ ದಟ್ಟಣೆಯನ್ನು ಟ್ರಾಫಿಕ್ ವಾರ್ಡನ್​ಗಳು ನಿರ್ವಹಣೆ ಮಾಡುತ್ತಾರೆ. ಆ ಮಾದರಿಯಲ್ಲಿಯೇ ಇಲ್ಲಿಯೂ ಯೋಜನೆ ರೂಪಿಸಲು ಪೊಲೀಸ್ ಇಲಾಖೆ ಆಸಕ್ತಿ ತೋರಿದೆ. ಇದಕ್ಕೆ ಪಾಲಕರು ಒಪ್ಪಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ಕೇಂದ್ರ ಭಾಗ ಹಾಗೂ ಇತರೆ ಸಂಚಾರ ದಟ್ಟಣೆ ಬಡಾವಣೆಗಳಾದ ಸರ್ಜಾಪುರ, ಹೆಬ್ಬಾಳ, ಆಡುಗೋಡಿ ಮತ್ತು ಬನ್ನೇರಘಟ್ಟ ರಸ್ತೆ ಪ್ರಮುಖ ಸಂಚಾರ ದಟ್ಟಣೆ ಬಡಾವಣೆಗಳಾಗಿವೆ. ಈ ಸುತ್ತಲಿನ ಶಾಲೆಗಳಲ್ಲಿ ಟ್ರಾಫಿಕ್ ವಾರ್ಡನ್ ನೇಮಿಸುವ ಅಗತ್ಯವಿದೆ ಎಂದು ತಿಳಿಸಿದೆ. ಸ್ಥಳಿಯವಾಗಿ ಅನುಕೂಲವಾಗುವಂತೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರನ್ನು (ಡಿಡಿಪಿಐ) ಒಳಗೊಂಡ ಸಮಿತಿ ರಚಿಸಿಕೊಂಡು ಯೋಜನೆ ರೂಪಿಸಿ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬ ಸಲಹೆಗಳು ಬಂದಿವೆ ಎಂದು ತಿಳಿಸಿದರು. ಸಭೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ. ಕಾವೇರಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್, ಕ್ಯಾಮ್್ಸ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಪಾಲಕರ ಸಂಘಟನೆಯ ಬಿ.ಎನ್. ಯೋಗಾನಂದ ಸೇರಿ ಹಲವರು ಪಾಲ್ಗೊಂಡಿದ್ದರು.
ಬೆಂಗಳೂರು ನಗರ ಮಧ್ಯ ಭಾಗಕ್ಕೆ ಬರುವಂತಹ ಮುಖ್ಯ ದ್ವಾರಗಳ ರಸ್ತೆ ಎಲ್ಲೆಲ್ಲಿ? ಸಂಚಾರ ದಟ್ಟಣೆ ಎಲ್ಲಿ ಆರಂಭವಾಗುತ್ತೆ? ಎಂಬ ಜಾಗಗಳನ್ನು ಗುರುತಿಸಿ ಅದರ ಸಮೀಪದಲ್ಲಿ ಸಾರ್ವಜನಿಕ ಸ್ಥಳ/ ಬಸ್ ನಿಲ್ದಾಣಗಳನ್ನು ವಿಸ್ತರಿಸಿ ಅಲ್ಲಿಂದ ಮಧ್ಯ ಭಾಗದ ಶಾಲಾ ಕಾಲೇಜಿಗೆ ಬರುವಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸುಸಜ್ಜಿತ ಮಾಲಿನ್ಯ ರಹಿತ, ಹವಾನಿಯಂತ್ರಿತ ಎಲೆಕ್ಟ್ರಿಕಲ್ ಬಸ್​ಗಳನ್ನು ಪ್ರತಿ 5 ನಿಮಿಷಕ್ಕೊಂದರಂತೆ 5-10 ಬಸ್​ಗಳನ್ನು ಒದಗಿಸುವುದು.
ಸ್ವಂತ ವಾಹನಗಳಲ್ಲಿ ಬರುವಂತಹ ಮಕ್ಕಳು ನಗರದ ಮಧ್ಯಭಾಗ ಶಾಲಾ- ಕಾಲೇಜಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಬರುವ ವ್ಯವಸ್ಥೆ ರೂಪಿಸಿದ್ದಲ್ಲಿ ಕನಿಷ್ಠ 50-75 ಕಾರುಗಳನ್ನು ರಸ್ತೆಯಿಂದ ಹೊರಗಿಡಲು ಸಾಧ್ಯ. ಒಂದು ಬಸ್ಸಿಗೆ 3ರಿಂದ 5 ಅಕ್ಕಪಕ್ಕದ ಶಾಲೆಗಳನ್ನು ನಿಯೋಜಿಸಿದ್ದಲ್ಲಿ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು.
ಸರ್ಕಾರ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಬೆಂಗಳೂರು ನಗರ ಮಧ್ಯಭಾಗದ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವುದು ಹಾಗೂ ಇಲ್ಲಿ ದಾಖಲಾತಿ ನಡೆಸುವಂತಹ ಪಾಲಕ/ಪೋಷಕರನ್ನು ಮುಚ್ಚಳಿಕೆ ಬರೆಯಿಸಿಕೊಂಡು ಶಾಲೆ-ಕಾಲೇಜಿಗೆ ಬಂದು ಹೋಗಲು ಕಡ್ಡಾಯವಾಗಿ ಶಾಲಾ ವಾಹನ/ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಮಾತ್ರ ಬಳಸುವ ಒಪ್ಪಂದ ಮಾಡಿಕೊಳ್ಳುವುದು.
ಉಚಿತ ಮತ್ತು ಕಡ್ಡಾಯ ಶಿಕ್ಷಣ ನಿಯಮಗಳ ಪ್ರಕಾರ ಶಾಲಾ ಶಿಕ್ಷಣವು 5 ಕಿ.ಮೀ.ನೊಳಗೆ ಮಕ್ಕಳ ಶಿಕ್ಷಣ ಲಭ್ಯವಾಗಬೇಕೆಂಬ ನಿಯಮವಿದೆ. ಈ ನಿಯಮ ಕಡ್ಡಾಯಗೊಳಿಸಿದ್ದಲ್ಲಿ ಸ್ಥಳೀಯ ಮಕ್ಕಳಿಗೆ ದಾಖಲಾತಿ ಸಿಗುವಂತಹ ಪರಿಹಾರ ಹಾಗೂ 20-30 ಕಿ.ಮೀ. ಹೋಗುವುದರಿಂದ ಮಾಲಿನ್ಯ ದುಷ್ಟರಿಣಾಮಗಳನ್ನು ತಪ್ಪಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
