|ಗಿರೀಶ್ ಗರಗಬೆಂಗಳೂರು
ಕರೊನಾ ಸೊಂಕಿನ ಭೀತಿ ನಡುವೆಯೂ ಸಾರಿಗೆ, ಪೊಲೀಸ್ ಮತ್ತು ಶಿಕ್ಷಕರು ಕೂಡ ವೈದ್ಯಕೀಯ ಸಿಬ್ಬಂದಿ ರೀತಿಯಲ್ಲಿಯೇ ಸೋಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರಾದರೂ ಸೋಂಕಿನಿಂದ ಮೃತಪಟ್ಟವರ ಕುಟುಂಬದವರಿಗೆ ಆರ್ಥಿಕ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.
ಖಾಕಿಗಷ್ಟೇ ಆದ್ಯತೆ:ಸರ್ಕಾರಿ ನೌಕರರು ಕರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟರೆ, 30 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಮೊದಲ ಅಲೆಯಲ್ಲಿ ಅದನ್ನು ಪಾಲಿಸಲಾಗಿದೆ. ಆದರೆ, ಶಿಕ್ಷಕರಿಗೆ ಆ ಸೌಲಭ್ಯವಿಲ್ಲ. ಈವರೆಗೆ ಮೃತಪಟ್ಟ ಯಾವೊಬ್ಬ ಶಿಕ್ಷಕರ ಕುಟುಂಬಕ್ಕೆ ಸರ್ಕಾರದಿಂದ ಅಥವಾ ಆ ಇಲಾಖೆಯಿಂದ ಯಾವುದೇ ಪರಿಹಾರ ದೊರೆತಿಲ್ಲ. ಈ ಬಗ್ಗೆ ಚರ್ಚೆಗಳು ನಡೆದಿಲ್ಲ. ಆದರೆ, ಕರೊನಾ ಸೋಂಕಿನಿಂದ ಪೊಲೀಸ್ ಸಿಬ್ಬಂದಿ ಮೃತಪಟ್ಟ 3 ದಿನದಲ್ಲಿ ಅವರ ಕುಟುಂಬದವರ ಖಾತೆಗೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇನ್ನು ಕರೊನಾ ಸೋಂಕಿನಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿ ಕುಟುಂಬದವರಿಗೆ ಸರ್ಕಾರಿ ನೌಕರರಿಗೆ ನೀಡುವಂತೆ 30 ಲಕ್ಷ ರೂ. ಪರಿಹಾರ ನೀಡಬೇಕೆಂದು 2020ರ ಡಿಸೆಂಬರ್​ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆಗ ಸರ್ಕಾರ ಎಲ್ಲರಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ನಂತರ ಲೆಕ್ಕ ಹಾಕಿ 117 ಸಿಬ್ಬಂದಿ ಕರೊನಾದಿಂದ ಮೃತಪಟ್ಟಿದ್ದಾರೆ ಎಂದು ಪಟ್ಟಿ ಮಾಡಲಾಗಿತ್ತು. ಆ ಬಳಿಕ 10 ಕುಟುಂಬದವರಿಗೆ ಪರಿಹಾರ ನೀಡಲಾಗಿತ್ತು. ಈ ಕುಟುಂಬಗಳನ್ನು ಹೊರತುಪಡಿಸಿ ಉಳಿದವರಿಗೆ ಈವರೆಗೆ ಪರಿಹಾರ ದೊರೆತಿಲ್ಲ. ಇದೀಗ ಎರಡನೇ ಅಲೆಯಲ್ಲಿ 10ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಈ ಹಿಂದಿನ ಮೃತರ ಕುಟುಂಬದವರಿಗೆ ಪರಿಹಾರ ನೀಡಿಲ್ಲ. ಇದೀಗ ಮೃತಪಡುತ್ತಿರುವವರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎಂಬುದೇ ಪ್ರಶ್ನೆಯಾಗಿದೆ.
ಕರೊನಾ ಸೋಂಕಿನ ಮೊದಲ ಅಲೆಯಲ್ಲಿ ಮೃತಪಟ್ಟ ಸಾರಿಗೆ ನೌಕರರ 10 ಕುಟುಂಬದವರಿಗೆ ಈಗಾಗಲೆ ಪರಿಹಾರ ನೀಡಲಾಗಿದೆ. ಉಳಿದ ನೌಕರರ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ವಿಭಾಗಗಳಿಂದ ಪಟ್ಟಿ ಬಂದ ಕೂಡಲೆ ಪರಿಹಾರ ನೀಡಲಾಗುವುದು.
|ಶಿವಯೋಗಿ ಸಿ. ಕಳಸದಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ಹೊಸಪೇಟೆ:ಕರೊನಾ ಸಂದಿಗ್ಧತೆಯಲ್ಲೂ ರೋಗಿಗಳ ಮನೆಮನೆಗೆ ತೆರಳಿ ಚಿಕಿತ್ಸೆ ನೀಡುವ ಬೇರುಮಟ್ಟದ ಆರೋಗ್ಯ ಸಹಾಯಕರಿಗೆ ಸರ್ಕಾರವು ಕೋವಿಡ್ ವಿಶೇಷ ಭತ್ಯೆ ನೀಡದೆ ತಾರತಮ್ಯ ನೀತಿ ಅನುಸರಿಸಿದೆ. ವಿಶೇಷ ಭತ್ಯೆ ನೀಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಕಾಯಂ-ಗುತ್ತಿಗೆ ಆಧಾರದಡಿ ಕೆಲಸ ಮಾಡುವವರ ಮಾಹಿತಿಯನ್ನು ಮೇ 11 ರೊಳಗೆ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆದೇಶಿಸಿದೆ. ಆದರೆ, ಇದರಲ್ಲಿ ಆರೋಗ್ಯ ಸಹಾಯಕರನ್ನೇ ಪರಿಗಣಿಸಿಲ್ಲ. ಯಾವ ಆಧಾರದ ಮೇಲೆ ನಮ್ಮನ್ನು ಕಡೆಗಣಿಸಿದ್ದಾರೆ ಎಂಬುದು ಆರೋಗ್ಯ ಸಹಾಯಕರ ಪ್ರಶ್ನೆ. ಪ್ರತಿ ತಿಂಗಳು ವಿಶೇಷ ಭತ್ಯೆಯಾಗಿ ಐದು ಸಾವಿರ ರೂ. ನಿರೀಕ್ಷೆಯಲ್ಲಿದ್ದ ಸಹಾಯಕರಿಗೆ ಉತ್ತರ ಕೊಡುವವರು ಯಾರು ಎಂಬಂತಾಗಿದೆ. ರಾಜ್ಯದಲ್ಲಿ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 12,136 ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನೀನಾಸಂ ಸತೀಶ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + six =
Remember me
