ಬೆಂಗಳೂರು:ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಘೋಷಿಸಲಾದ ಲಾಕ್​ಡೌನ್ ಬಳಿಕ ಭಾರಿ ಸಂಕಷ್ಟಕ್ಕೆ ತುತ್ತಾಗಿ, ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಅಸಂಘಟಿತ ಕಾರ್ವಿುಕರ ಹಿತ ಕಾಪಾಡಲು ರಾಜ್ಯ ಸರ್ಕಾರ ಐದು ಹೊಸ ಮಂಡಳಿಗಳನ್ನು ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಕಟ್ಟಡ ಕಾರ್ವಿುಕರಿಗಾಗಿ ಇನ್ನಷ್ಟು ಅನುಕೂಲ ಕಲ್ಪಿಸುವ ಯೋಜನೆಯನ್ನೂ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ಈ ಸುಳಿವು ನೀಡಿದ್ದಾರೆ. ಈ ಸಂಬಂಧ ನಾಲ್ಕು ಮಂಡಳಿಗಳಿಗೆ ಈಗಾಗಲೇ ಪ್ರಸ್ತಾವನೆ ಸಿದ್ಧಗೊಂಡಿದೆ. ಸಚಿವ ಹೆಬ್ಬಾರ್ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ವಿಧೇಯಕ್ಕೆ ಒಪ್ಪಿಗೆ ಪಡೆದು ಜಾರಿಗೆ ತರುವ ಉದ್ದೇಶ ಹೊಂದಿದ್ದಾರೆ. ಈ ಮಂಡಳಿಗಳಿಗೆ ಕಾರ್ವಿುಕ ಸಚಿವರೇ ಅಧ್ಯಕ್ಷರಾಗಿರಲಿದ್ದಾರೆ.
ಸಮತೋಲನದ ನಡಿಗೆ:ಇಲಾಖೆ ನಡಿಗೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವ ಅಗತ್ಯವಿದೆ. ಉದ್ಯೋಗಿ, ಉದ್ಯೋಗದಾತನನ್ನು ಸಂರಕ್ಷಿಸಬೇಕು. ಯಾವುದೇ ಮಾಲೀಕನ ಮೇಲೆ ಕಾನೂನಿನ ದಂಡ ಪ್ರಯೋಗಿಸಿದರೆ ತಾತ್ಕಾಲಿಕ ಪರಿಹಾರ ಸಿಗಬಹುದು. ಭವಿಷ್ಯದಲ್ಲಿ ಅದು, ಕಾರ್ವಿುಕರ ಹಿತಕ್ಕೆ ಮಾರಕ ಎಂದರಿತು ಎಚ್ಚರಿಕೆಯ ಹೆಜ್ಜೆಯಿಡಲಾಗುವುದು ಎಂದು ಸಚಿವರು ಹೇಳಿದರು.
ಕೇರಳ ಮಾದರಿ:ಕೇರಳದಲ್ಲಿ ವಿವಿಧ 27 ಮಂಡಳಿಗಳಿವೆ. ಕಾರ್ವಿುಕರಿಗೆ ಹೆಚ್ಚಿನ ರಕ್ಷಣೆ ಕೊಡಲು ಸಾಧ್ಯವಾಗಿದೆ. ನಮ್ಮ ರಾಜ್ಯ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ. ಹೊಸ ಹೊಸ ಮಂಡಳಿ ಸ್ಥಾಪಿಸಿ ಭವಿಷ್ಯದಲ್ಲಿ ಕಾರ್ವಿುಕರ ಬದುಕಿಗೆ ರೂಪ ಕೊಡುವ ಕೆಲಸವಾಗಬೇಕಿದೆ. ಈ ದಿಸೆಯಲ್ಲಿ ಕೇರಳ, ತಮಿಳುನಾಡು ಸೇರಿ ನಾಲ್ಕಾರು ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ವಿವಿಧ ಮಂಡಳಿಗಳನ್ನು ಅಧ್ಯಯನ ಮಾಡಿ ಮತ್ತಷ್ಟು ಸುಧಾರಿತ ಅಂಶಗಳನ್ನು ಅಂತರ್ಗತಗೊಳಿಸಿ ಕಸುಬು ಆಧಾರಿತ ಮಂಡಳಿ ಸ್ಥಾಪಿಸಿ ಅಸಂಘಟಿತ ಕಾರ್ವಿುಕರ ಹಿತ ಕಾಪಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಸಚಿವರು ಹೇಳಿದರು. ಕೇರಳದಲ್ಲಿ ಕಸುಬು ಆಧಾರಿತ ಅನೇಕ ಮಂಡಳಿಗಳನ್ನು ಸ್ಥಾಪಿಸಿರುವುದರಿಂದ ಕರೊನಾದಂತಹ ಸಂಕಷ್ಟ ಪರಿಸ್ಥಿತಿಗಳನ್ನು ಸುಸೂತ್ರವಾಗಿ ನಿಭಾಯಿಸಲು ಸಾಧ್ಯವಾಗಿದೆ. ಯಾವುದೇ ಸರ್ಕಾರ ಇರಲಿ ರಾಜ್ಯದಲ್ಲಿ ಅಂತಹ ಕೆಲಸ ನಡೆಯದಿರುವುದು ವಿಷಾದದ ಸಂಗತಿ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹೊಸ ಐದು ಮಂಡಳಿ ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿ ಸೂಚಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವ ಯಾವ ಮಂಡಳಿಗಳು?ಗಾರ್ವೆಂಟ್ಸ್ ನೌಕರರು, ಕೃಷಿ ಕಾರ್ವಿುಕರು, ಚಾಲಕರು ಹಾಗೂ ಹೊರ ಗುತ್ತಿಗೆ ನೌಕರರ ಕಲ್ಯಾಣಕ್ಕಾಗಿ ಮಂಡಳಿ ಸ್ಥಾಪಿಸುವುದಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ. ಮನೆಗೆಲಸದವರ ಕಲ್ಯಾಣ ಮಂಡಳಿ ಸ್ಥಾಪನೆ ವಿಚಾರ ಪರಿಶೀಲನೆಯಲ್ಲಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಕೋವಿಡ್-19 ನಮಗೆ ದೊಡ್ಡ ಪಾಠ ಕಲಿಸಿದೆ. ಕಟ್ಟ ಕಡೆಯ ಕಾರ್ವಿುಕನಿಗೂ ಬದುಕನ್ನು ಕಟ್ಟಿಕೊಡಲು ದಾರಿ ತೋರಿದೆ. ಇಂಥ ಸಂಕಷ್ಟ ಸಂದರ್ಭದಲ್ಲಿ ಅಸಂಘಟಿತ ಕಾರ್ವಿುಕರ ನೆರವಿಗೆ ಕಸುಬು ಆಧಾರಿತ ಮಂಡಳಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಎಷ್ಟಿದ್ದಾರೆ ಕಾರ್ವಿುಕರು:ಯಾವುದೇ ಮಂಡಳಿಗಳಲ್ಲಿ ಕಾರ್ವಿುಕರು ಹಾಗೂ ಉದ್ಯೋಗದಾತ ಸಂಸ್ಥೆಗಳಿಂದ ವಂತಿಗೆ ಪಡೆಯಲಾಗುತ್ತದೆ. ಅದನ್ನು ಕಾರ್ವಿುಕರ ಹಿತಕ್ಕೆ ಬಳಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 7.70 ಲಕ್ಷ ಚಾಲಕರಿದ್ದಾರೆ. ನರೇಗಾದಲ್ಲಿ ಕೃಷಿ ಕೂಲಿಕಾರ್ವಿುಕರಿಗೆ ವರ್ಷಕ್ಕೆ 3.50 ಕೋಟಿ ಮಾನವ ದಿನಗಳನ್ನು ನೀಡಲಾಗುತ್ತಿದೆ. ಅದೇ ರೀತಿಯಲ್ಲಿ 10 ಲಕ್ಷ ಗಾಮೆಂಟ್ಸ್ ನೌಕರರಿದ್ದಾರೆ. ಸುಮಾರು 50 ಸಾವಿರ ಹೊರ ಗುತ್ತಿಗೆ ನೌಕರರಿದ್ದಾರೆ. ಆದ್ದರಿಂದ ಮಂಡಳಿಗಳನ್ನು ರಚನೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
1 ಲಕ್ಷ ಸ್ಮಾರ್ಟ್​ಕಾರ್ಡ್:ಕಾರ್ವಿುಕರಿಗೆ 1 ಲಕ್ಷ ಸ್ಮಾರ್ಟ್​ಕಾರ್ಡ್ ಯೋಜನೆ ಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿತ್ತು. ಕೋವಿಡ್-19ರ ಕಾರಣದಿಂದ ಈ ಆಂದೋಲನಕ್ಕೆ ಚಾಲನೆ ನೀಡುವುದು ವಿಳಂಬ ವಾಗಿದೆ. ಕರೊನಾ ಆತಂಕ ನಿವಾರಣೆಯಾದ ಕೂಡಲೇ ಈ ಆಂದೋಲನ ಆರಂಭಗೊಳ್ಳಲಿದೆ. ಆಧಾರ್​ಕಾರ್ಡ್, ಪಾಸ್​ಪೋರ್ಟ್ ಮಾದರಿಯಲ್ಲಿ ಕಾರ್ವಿುಕರ ಎಲ್ಲ ಡೇಟಾ ಒಳಗೊಂಡಂತೆ ಈ ಸ್ಮಾರ್ಟ್​ಕಾರ್ಡ್ ಸಿದ್ಧಪಡಿಸಿ, ವಿತರಿಸಲಾಗುವುದು. ಇದರಿಂದ ಸರ್ಕಾರದ ಸವಲತ್ತುಗಳನ್ನು ನೇರವಾಗಿ ಕಾರ್ವಿುಕರಿಗೆ ತಲುಪಿಸಲು ಹಾಗೂ ದತ್ತಾಂಶ ಸಂಗ್ರಹಿಸಿ ಹೊಸ ಯೋಜನೆಗೆ ಸಹಕಾರಿಯಾಗಲಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
