ಬೆಂಗಳೂರು:ಕರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್​ಡೌನ್​ಗೆ ಹಾಟ್​ಸ್ಪಾಟ್ ವಲಯದಲ್ಲಿ ಮೇ 3ರವರೆಗೆ ಯಾವುದೇ ವಿನಾಯಿತಿ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ, ರೈಲು, ಸಾರ್ವಜನಿಕ ಸಾರಿಗೆ ಬಸ್, ಮೆಟ್ರೋ, ಆಟೋರಿಕ್ಷಾ, ಬೈಕ್, ಕ್ಯಾಬ್ ಸೇವೆ ಇರುವುದಿಲ್ಲ. ಶಿಕ್ಷಣ ಸಂಸ್ಥೆ, ತರಬೇತಿ ಕೇಂದ್ರಗಳು ಬಾಗಿಲು ತೆರೆಯುವುದಿಲ್ಲ. ಚಿತ್ರಮಂದಿರ, ಮಾಲ್, ವ್ಯಾಪಾರ ಮಳಿಗೆ, ಜಿಮ್ ಕ್ರೀಡಾ ಸಂಕೀರ್ಣ, ಈಜುಕೊಳ, ಮನೋರಂಜನಾ ಪಾರ್ಕ್, ರಂಗಮಂದಿರ, ಬಾರ್, ಸಭಾಂಗಣ, ಸಮುದಾಯ ಭವನ ಬಂದ್ ಆಗಿರುತ್ತವೆ. ರಾಜಕೀಯ, ಕ್ರೀಡೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಸಭೆಗಳನ್ನು ನಿರ್ಬಂಧಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗಳು, ನರ್ಸಿಂಗ್ ಹೋಂ, ಕ್ಲಿನಿಕ್, ಟೆಲಿ ಮೆಡಿಸಿನ್, ಜನೌಷಧ ಕೇಂದ್ರ, ಮೆಡಿಕಲ್ ಶಾಪ್, ಪಶು ಚಿಕಿತ್ಸಾಲಯ, ಪ್ರಯೋಗಾಲಯ, ಲಸಿಕೆ, ಮನೆಯಲ್ಲಿ ರೋಗಿಗಳ ಆರೈಕೆ ಸೇವೆಗಳು ಹಾಗೂ ಚಿಕಿತ್ಸೆ ಸಿಗುತ್ತವೆ. ವೈದ್ಯಕೀಯ ಸೇವೆಗೆ ಮಾತ್ರ ಅಂತರ ಜಿಲ್ಲೆ ಮತ್ತು ರಾಜ್ಯ ಸಂಚಾರಕ್ಕೆ ವಿನಾಯಿತಿ ಇದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್, ಅಂಚೆ ಕಚೇರಿ, ನೀರು, ಒಳಚ ರಂಡಿ, ತ್ಯಾಜ್ಯ ಸಂಗ್ರಹಣೆ ವಿಲೇವಾರಿ ಘಟಕಗಳು ಸೇವೆ ಇರಲಿದೆ.
ಕಟ್ಟುನಿಟ್ಟಾಗಿ ಜಾರಿಗೆ:ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಗುರುತಿಸಿರುವ ಹಾಟ್​ಸ್ಪಾಟ್ ವಲಯಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ವೈದ್ಯಕೀಯ ತುರ್ತು ಸೇವೆ, ಸರ್ಕಾರದ ಕೆಲಸಕ್ಕೆ ಮಾತ್ರ ಅವಕಾಶವಿರಲಿದೆ. ಉಳಿದಂತೆ, ಅನುಮತಿ ಇಲ್ಲದೆ ಹೊರಗೆ ಯಾರೊಬ್ಬರೂ ಓಡಾಡುವಂತಿಲ್ಲ. ಹಾಟ್​ಸ್ಪಾಟ್ ವಲಯಕ್ಕೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೂ ಇದು ಅನ್ವಯ ಆಗಲಿದೆ. ಬಿಬಿಎಂಪಿ ಲಾಕ್​ಡೌನ್ ನಿರ್ಬಂಧಿತ ಕ್ರಮಗಳನಅ್ನು ವಿಪತ್ತು ನಿರ್ವಹಣಾ ಕಾಯ್ದೆ- 2009ರಡಿ ಮಾರ್ಗಸೂಚಿ ಅನ್ವಯ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ.
ಕಟ್ಟಡ ಕೆಲಸಕ್ಕೆ ಹಸಿರು ನಿಶಾನೆ:ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿ, ನೀರಾವರಿ, ಕಟ್ಟಡ, ಕೈಗಾರಿಕೆ ಯೋಜನೆಗಳ ಕಾಮಗಾರಿ ಅನುಮತಿ,ಕಾರ್ವಿುಕರನ್ನು ಹೊರಗಿನಿಂದ ತಾರದೆ ಸ್ಥಳೀಯವಾಗಿ ಬಳಸಿಕೊಳ್ಳಬೇಕು. ಮೆಟ್ರೋ ಕಾಮಗಾರಿಗೂ ಇದೇ ಆದೇಶ ಅನ್ವಯ ಆಗಲಿದೆ.
ಕೃಷಿ, ಮೀನುಗಾರಿಕೆ, ಹೈನು ವಲಯ ಅಬಾಧಿತ
ರೈತರು, ಕೃಷಿ ಕಾರ್ವಿುಕರು, ಕೃಷಿ ಉತ್ಪನ್ನಗಳ ಸಂಗ್ರಹ, ಎಂಎಸ್​ಪಿ ಚಟುವಟಿಕೆ, ಎಪಿಎಂಸಿ, ಕೃಷಿ ಯಂತ್ರ, ಬಿಡಿಭಾಗಗಳ ಮಾರಾಟ ಮಳಿಗೆ, ಸರಬರಾಜು, ದುರಸ್ತಿಗೆ, ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಉತ್ಪಾದನೆ, ಪ್ಯಾಕಿಂಗ್, ಮಾರಾಟ ಕೇಂದ್ರ ತೆರೆಯಬಹುದು. ಪರಿವೀಕ್ಷಣೆ, ಬೀಜಗಳ ಸಂಗ್ರಹಣೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಂಶೋಧನಾ ಸಂಸ್ಥೆಗಳು, ಜೇನು ಸಾಕಣೆಗೆ ಅನುಮತಿ ನೀಡಲಾಗಿದೆ. ಸಾಗರ ಮತ್ತು ಒಳನಾಡು ಮೀನುಗಾರಿಕೆ, ಮೀನುಮರಿ ಕೇಂದ್ರಗಳು, ಆಹಾರ ಬೆಳೆಗಳು, ಅಲಂಕಾರಿಕ ಮೀನುಗಳ ಮಾರಾಟ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹ, ಮಾರಾಟ, ಕುಕ್ಕು ಟೋದ್ಯಮ, ಪಶು ಆಹಾರ ಉತ್ಸಾದನಾ ಕೇಂದ್ರ, ಗೋಶಾಲೆ ನಡೆಯಲಿದೆ. ನರೇಗಾ ಕೆಲಸಕ್ಕೆ ಅನುಮತಿ ನೀಡಲಾಗಿದೆ.
ಪಾಸ್ ನೀಡುವ ವ್ಯವಸ್ಥೆ ಹೇಗೆ?
ಲಾಕ್​ಡೌನ್ ವಿನಾಯಿತಿ ಅಡಿ ಸಂಚಾರಕ್ಕೆ ಅನುಮತಿ ಪತ್ರ (ಪಾಸ್) ಪಡೆದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಇರಲಿದೆ. ಕಟ್ಟಡ ಮತ್ತು ರಸ್ತೆ, ನೀರಾವರಿ ಯೋಜನೆ ಕಾಮಗಾರಿಗೆ ಗುತ್ತಿಗೆದಾರರೇ ಪೊಲೀಸ್ ಇಲಾಖೆಯಿಂದ ಪಾಸ್ ಪಡೆಯಬೇಕು. ಗುತ್ತಿಗೆದಾರ ಸ್ವಂತ ವಾಹನದಲ್ಲಿ ಕರೆದೊಯ್ದು ನಂತರ ವಾಪಸ್ ಬಿಡಬೇಕು. ವಿನಾಯಿತಿ ಪಡೆದ ಕಂಪನಿಗಳು ಸಿಬ್ಬಂದಿಗೆ ಐಡಿ ಕಾರ್ಡ್ ವಿತರಿಸ ಬೇಕು. ಅನಗತ್ಯವಾಗಿ ಓಡಾಡುವವರ ವಾಹನ ಜಪ್ತಿ ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೇವೆ
ಆರ್​ಬಿಐ, ಪೇಮೆಂಟ್ ಸಿಸ್ಟಂ ಆಪರೇಟರ್ಸ್, ಸ್ಟ್ಯಾಂಡ್​ಲೋನ್ ಪ್ರೖೆಮರಿ ಡೀಲರ್ಸ್, ಬ್ಯಾಂಕ್, ಎಟಿಎಂ, ಐಟಿ ವೆಂಡರ್ಸ್, ನಗದು ನಿರ್ವಹಣಾ ಏಜೆನ್ಸಿಗಳು ಕಾರ್ಯನಿರ್ವಹಿಸಲಿವೆ. ಗ್ರಾಹಕರ ನಡುವೆ ದೈಹಿಕ ಅಂತರ ಕಾಪಾಡುವಂತೆ ವ್ಯವಸ್ಥೆ ಮಾಡಬೇಕು. ಸೆಬಿ, ಐಆರ್​ಡಿಎಐ ಮತ್ತು ವಿಮಾ ಸಂಸ್ಥೆಗಳು ಸೇವೆ ಸಲ್ಲಿಸಲಿವೆ.
ಮಕ್ಕಳು, ವೃದ್ಧರ ಸೇವೆಗೆ ಅಡ್ಡಿಯಿಲ್ಲ
ಮಕ್ಕಳು, ಅಂಗವಿಕಲರು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರು, ಮಹಿಳೆಯರು, ವಿಧವೆಯರು, ನಿರ್ಗತಿಕರಿಗೆ ವಸತಿಗೃಹಗಳು ಹಾಗೂ ಹಿರಿಯ ನಾಗರಿಕರು ಇದ್ದಲ್ಲಿಗೆ ಖಾಸಗಿ ಶುಶ್ರೂಷಕರ ಸೇವೆ, ವೀಕ್ಷಣಾ ಮಂದಿರಗಳು, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಬಾಲಮಂದಿರ ತೆರೆಯಲಿವೆ. ಪಿಂಚಣಿ, ಪಿಎಫ್, ಇಪಿಎಫ್​ಒ ಸೇವೆಗಳಿರಲಿವೆ. 15 ದಿನಗಳಿಗೊಮ್ಮೆ ಅಂಗನವಾಡಿ ಫಲಾನುಭವಿಗಳಾದ ಮಕ್ಕಳು ಮತ್ತು ಮಹಿಳೆಯರ ಮನೆ ಬಾಗಿಲಿಗೆ ಪೌಷ್ಟಿಕ ಆಹಾರ ವಿತರಣೆ ನಡೆಯಲಿದೆ.
ಸರಕು ಸಾಗಣೆಗೆ ಸಮಸ್ಯೆಯಿಲ್ಲ
ರಾಜ್ಯ ಮತ್ತು ಅಂತಾರಾಜ್ಯದಲ್ಲಿ ಸಿಮೆಂಟ್, ಕಬ್ಬಿಣ, ಜಲ್ಲಿ, ಇಟ್ಟಿಗೆ, ಬಣ್ಣ, ಟೈಲ್ಸ್, ಬಣ್ಣ, ಟಾರ್ ಸಾಗಣೆಗೆ ಅವಕಾಶವಿದೆ. ದಿನಸಿ, ಹಣ್ಣು, ತರಕಾರಿ, ಹಾಲು, ಡೇರಿ ಉತ್ಪನ್ನ, ಮಾಂಸ, ಮೀನು, ಪ್ರಾಣಿಗಳ ಆಹಾರ, ಬಿಸ್ಕತ್ತು, ಬೇಕರಿ ಉತ್ಪನ್ನಗಳು, ಚಿಲ್ಲರೆ ಅಂಗಡಿ ಇರಲಿವೆ. ರೈಲು, ವಿಮಾನ, ಒಳನಾಡು, ಜಲಸಾರಿಗೆ ಮತ್ತು ಸರಕು ಸಾಗಣೆಗೆ ವಾಹನಗಳನ್ನು ಬಳಸಲು ಅವಕಾಶವಿದೆ.
ವಾಣಿಜ್ಯ, ಖಾಸಗಿ ಸಂಸ್ಥೆಗಳು
ಕೊರಿಯರ್, ಖಾಸಗಿ ಭದ್ರತಾ ಸಿಬ್ಬಂದಿ, ಎಲೆಕ್ಟ್ರಿಷಿಯನ್, ಕಂಪ್ಯೂಟರ್, ಕೊಳಾಯಿ, ಯಂತ್ರೋಪಕರಣಗಳ ರಿಪೇರಿ ಕೆಲಸ, ಬಡಗಿ ಅಂಗಡಿ ತೆರೆಯಬಹುದು. ಐಟಿ ಸಂಬಂಧಿಸಿದ ಸೇವೆಗಳ ನಿರ್ವಹಿಸುವ ಕನಿಷ್ಠ ಸಿಬ್ಬಂದಿ ಜತೆ ಕೆಲಸ. ಶೈಕ್ಷಣಿಕ ಪಠ್ಯಪುಸ್ತಕ, ಎಲೆಕ್ಟ್ರಿಕಲ್ ಫ್ಯಾನ್​ಗಳ ಮಾರಾಟ ಅಂಗಡಿಗೆ ವಿನಾಯಿತಿ.
ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಹಲವೆಡೆ ಗುಡುಗು ಸಿಡಿಲಿನಿಂದೊಡಗೂಡಿ ಧಾರಾಕಾರ ಮಳೆ

ಸಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
