ಬೆಂಗಳೂರು:ವಿಧಾನ ಪರಿಷತ್ ಚುನಾವಣೆಗೆ ಕರೊನಾ ಅಡ್ಡಿಯಾಗುವುದಿಲ್ಲವೆಂದು ಹೇಳಲಾಗುತ್ತಿದೆ. ವಿಧಾನಸಭೆಯಿಂದ ಆಯ್ಕೆಯಾಗಿರುವ 7 ಸ್ಥಾನಗಳು, ನಾಮ ನಿರ್ದೇಶನ 5 ಸ್ಥಾನಗಳು, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ತಲಾ ಎರಡು ಸ್ಥಾನಗಳು ಜೂನ್ ಅಂತ್ಯದೊಳಗೆ ಖಾಲಿಯಾಗಲಿವೆ. ಈಗಾಗಲೇ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧತೆ ಸೇರಿ ಚುನಾವಣಾ ಪ್ರಕ್ರಿಯೆ ಆರಂಭವಾಗಿವೆ.
ಆದರೆ ವಿಧಾನಸಭೆಯಿಂದ ನಡೆಯಬೇಕಾಗಿರುವ ಏಳು ಸ್ಥಾನಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಯಬೇಕಿದ್ದು, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕೇಂದ್ರ ಚುನಾವಣಾ ಆಯೋಗಕ್ಕೆ ಈ ನಿಟ್ಟಿನಲ್ಲಿ ಪತ್ರ ಬರೆದಿದ್ದಾರೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಏಳು ಸ್ಥಾನಗಳ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಒಟ್ಟು 223 ಸದಸ್ಯರಿದ್ದಾರೆ. ಇನ್ನೂ ಎರಡು ಸ್ಥಾನಗಳು ಖಾಲಿ ಉಳಿದಿವೆ. ಕೇಂದ್ರ ಚುನಾವಣಾ ಆಯೋಗ ಅನುಮತಿ ಕೊಟ್ಟ ಕೂಡಲೇ ಉಳಿದ ಸಿದ್ಧತೆಗಳನ್ನು ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅನುಮತಿ ಕೊಟ್ಟಿದ್ದರಿಂದ ರಾಜ್ಯದಲ್ಲಿಯೂ ಅನುಮತಿ ಸಿಗಬಹುದೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಒಂದೇ ಅಪಾರ್ಟ್​ಮೆಂಟ್​ನ 25 ಮಂದಿಗೆ ಕರೊನಾ ಸೋಂಕು…ಸ್ಥಳದ ಸುತ್ತಮುತ್ತ ಆತಂಕ
ನಾಮ ನಿರ್ದೇಶನ ಸರ್ಕಾರ ಮಾಡಬೇಕಾಗಿದೆ. ಸರ್ಕಾರ ಆಯ್ಕೆ ಮಾಡಿ ಕಳುಹಿಸುವುದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡುತ್ತಾರೆ.
ಯಾವ ಪಕ್ಷಕ್ಕೆ ಎಷ್ಟು ಧಕ್ಕಬಹುದು:ವಿಧಾನಸಭೆಯಿಂದ ನಡೆಯುವ ಏಳು ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಗೆ 4, ಕಾಂಗ್ರೆಸ್​ಗೆ 2 ಹಾಗೂ ಜೆಡಿಎಸ್​ಗೆ ಒಂದು ಸ್ಥಾನ ಸಿಗಲಿದೆ. ಐದು ನಾಮ ನಿರ್ದೇಶನ ಬಿಜೆಪಿ ಪಾಲಾಗಲಿವೆ. ಪರಿಷತ್​ನಲ್ಲಿ ಬಿಜೆಪಿಯ ಬಲ ಹೆಚ್ಚಾಗಲಿದೆ. ವಿಧಾನಸಭೆಯಿಂದ 4 ಹಾಗೂ ನಾಮ ನಿರ್ದೇಶನ ಐದು ಸೇರಿ 9 ಜನ ಆಯ್ಕೆಯಾಗಲಿದ್ದು, ಬಿಜೆಪಿಯ ಬಲ 28ಕ್ಕೆ ಏರಿಕೆಯಾಗಲಿದೆ.
ಕಾಂಗ್ರೆಸ್​ನಿಂದ ಈಗ 37 ಸದಸ್ಯರಿದ್ದು, ವಿಧಾನಸಭೆ ಹಾಗೂ ನಾಮ ನಿರ್ದೇಶನದಿಂದ ಒಟ್ಟಾರೆ 10 ಜನರ ಅವಧಿ ಮುಗಿಯಲಿದೆ ಆದರೆ ಪಕ್ಷದಿಂದ ಇಬ್ಬರ ಆಯ್ಕೆಗೆ ಮಾತ್ರ ಅವಕಾಶ ಇದೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಯಾರು ಮತದಾರರ ಒಲವು ಗಳಿಸಲಿದ್ದಾರೆ ಎಂಬುದು ಸಹ ಪಕ್ಷಗಳ ಬಲಾಬಲವನ್ನು ನಿರ್ಧರಿಸಲಿದೆ.

ಹವಳ ಸಂರಕ್ಷಿಸಲು ಬಂದವರು ದ್ವೀಪದಲ್ಲಿಯೇ ಬಂಧಿಗಳಾದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
