|ಕೆ.ಎನ್.ರಾಘವೇಂದ್ರಮಂಡ್ಯ
ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಎಲ್ಲಿಯೂ ಬಿರುಕು ಕಂಡುಬಂದಿಲ್ಲ. ಈ ಸಂಬಂಧ ತಾಂತ್ರಿಕ ತಂಡ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿಯೂ ಉಲ್ಲೇಖಿಸಿಲ್ಲ ಎನ್ನುವ ಮಾಹಿತಿಯನ್ನು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ ಸಂಸದೆ ಸುಮಲತಾ ಅಂಬರೀಶ್​ಗೆ ಲಿಖಿತವಾಗಿ ನೀಡಿದ್ದಾರೆ.
ಕೆಆರ್​ಎಸ್ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸುಮಲತಾ ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ತಿಳಿಸಿದ್ದರು. ಬಳಿಕ ಜಿಲ್ಲಾದ್ಯಂತ ಗಂಭೀರ ಚರ್ಚೆ ನಡೆದಿತ್ತು. ಅಂತೆಯೇ ನಿಗಮದ ಅಧಿಕಾರಿಗಳು ಡ್ಯಾಂನಲ್ಲಿ ಬಿರುಕಿಲ್ಲ ಎನ್ನುವ ವಿಷಯವನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದರು. ಆದರೆ, ಈ ಬಗ್ಗೆ ಅಧಿಕೃತ ದಾಖಲೆಗಳಿರಲಿಲ್ಲ. ಇದೀಗ ಜು.1ರಂದು ಸಂಸದೆಗೆ ನೀಡಿರುವ ವಿವರಣೆಯ ಪತ್ರ ‘ವಿಜಯವಾಣಿ’ಗೆ ಲಭ್ಯವಾಗಿದೆ.
ಹತ್ತು ಪ್ರಶ್ನೆ ಕೇಳಿದ್ದ ಸಂಸದೆ:ಅಣೆಕಟ್ಟೆ ಸುರಕ್ಷತೆಗೆ ಸಂಬಂಧಿಸಿದಂತೆ ಸುಮಲತಾ ಹತ್ತು ಪ್ರಶ್ನೆಗಳಿಗೆ ವಿವರಣೆ ಕೇಳಿ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿಗಳು ಡ್ಯಾಂ ಸುರಕ್ಷತೆ ದೃಷ್ಟಿಯಿಂದ ತೆಗೆದು ಕೊಂಡಿರುವ ಕ್ರಮಗಳು, ಮುಂದೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮತ್ತು ಡ್ಯಾಂ ಕುರಿತ ಕೆಲವು ಮಾಹಿತಿಯನ್ನು ನೀಡಿದ್ದಾರೆ.
ಅಧಿಕಾರಿಗಳ ವಿವರಣೆ:ಕೆಆರ್​ಎಸ್ ಡ್ಯಾಂ ಆಕ್ಟಿವ್ ಜೋನ್​ನಲ್ಲಿ ಬರುವುದರಿಂದ ಸುರಕ್ಷಿತವಾಗಿದೆ. ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಅಣೆಕಟ್ಟೆ ಪುನಃಶ್ಚೇತನ ಕಾಮಗಾರಿ ನಿರ್ವಹಿಸಲಾಗಿದೆ. ಸಿವಿಲ್ ಕಾಮಗಾರಿಯೂ ಮುಗಿದಿದ್ದು, ಮೆಕಾನಿಕಲ್ ಗೇಟ್ ರೀಪ್ಲೆಸ್​ವೆುಂಟ್ ಕಾಮಗಾರಿ ಪ್ರಗತಿಯಲ್ಲಿದೆ. ಡ್ಯಾಂ ಉತ್ತರ ಭಾಗದಲ್ಲಿರುವ ಬೇಬಿ ಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಅದಕ್ಕಾಗಿ ಬಳಸುತ್ತಿರುವ ಸ್ಪೋಟಕ ವಸ್ತುಗಳ ಸಾಗಣೆ, ನಿಯಂತ್ರಣಕ್ಕೆ ಸಂಬಂಧಿಸಿದಂತೆ ಡ್ಯಾಂನ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ತರಹದ ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸದಂತೆ 2018, ಅ.26ರಂದು ಡಿಸಿ ಆದೇಶಿಸಿದ್ದಾರೆ.
ಅಂತೆಯೇ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಡ್ಯಾಂನಲ್ಲಿ ಸ್ವಲ್ಪಮಟ್ಟಿನ ಬಿರುಕು ಕಾಣಿಸಿಕೊಂಡಿದ್ದ ಬಗ್ಗೆ ಸಂಸದೆ ಪ್ರಶ್ನೆಗೆ, ಡ್ಯಾಂನ ಪುನಃಶ್ಚೇತನ ಕಾಮಗಾರಿ ಮುಗಿದ ನಂತರ ತಾಂತ್ರಿಕ ತಂಡದೊಂದಿಗೆ ಕೂಲಂಕಷವಾಗಿ ಪರಿಶೀಲನೆ ನಡೆದಿದೆ. ಅವರು ನೀಡಿರುವ ವರದಿಯಲ್ಲಿ ಎಲ್ಲೂ ಬಿರುಕು ಕಂಡು ಬಂದಿರುವುದರ ಬಗ್ಗೆ ಉಲ್ಲೇಖಿಸಿಲ್ಲ. ಇದಲ್ಲದೆ ಪ್ರತಿವರ್ಷ ಆರು ತಿಂಗಳಿಗೊಮ್ಮೆ ಪ್ರೀ ಮಾನ್ಸೂನ್ ಹಾಗೂ ಪೋಸ್ಟ್ ಮಾನ್ಸೂನ್ ಪರಿಶೀಲನೆಯನ್ನು ನಿಗಮದ ಮುಖ್ಯ ಇಂಜಿನಿಯರ್ ಅವರು ತಾಂತ್ರಿಕ ತಂಡದೊಂದಿಗೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇಲ್ಲಿಯೂ ಬಿರುಕು ಕಂಡುಬಂದಿರುವ ಬಗ್ಗೆ ಉಲ್ಲೇಖಿಸಿಲ್ಲ.
ಇಂದು ಗಣಿಗಾರಿಕೆ ಸ್ಥಳಕ್ಕೆ ಸಂಸದೆ:ಸಂಸದೆ ಸುಮಲತಾ ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಮಧ್ಯಾಹ್ನ 2.30ಕ್ಕೆ ಶ್ರೀರಂಗಪಟ್ಟಣದ ಚೆನ್ನನಕೆರೆ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, 3.30ಕ್ಕೆ ಹಂಗರಹಳ್ಳಿ ಕಲ್ಲು ಗಣಿಗಾರಿಕೆ, 4.30ಕ್ಕೆ ಪಾಂಡವಪುರ ತಾಲೂಕು ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಕೆಆರ್​ಎಸ್ ಡ್ಯಾಂ ಸುರಕ್ಷಿತವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಅಧಿಕಾರಿಗಳು ಪ್ರತಿದಿನ ಪರಿಶೀಲನೆ ಮಾಡುತ್ತಾರೆ. ಇದೇ ಮಾಹಿತಿಯನ್ನು ಜು.3ರಂದು ನಡೆದ ದಿಶಾ ಸಭೆಯಲ್ಲಿ ನೀಡಲಾಗಿದೆ.
|ವಿಜಯಕುಮಾರ್ಅಧೀಕ್ಷಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five + 9 =
Remember me
