|ಸಂತೋಷ ಕವಚೂರು/ಶಶಿಕಾಂತ ಮೆಂಡೆಗಾರ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಅಂಗನವಾಡಿ ಡಿಜಿಟಲೀಕರಣ’ಕ್ಕೆ ರಾಜ್ಯದಲ್ಲಿ ಗ್ರಹಣ ಹಿಡಿದಿದೆ. ಕಾರ್ಯಕರ್ತೆಯರಿಗೆ, ಮೇಲ್ವಿಚಾರಕರಿಗೆ ಕೊಟ್ಟ ಸ್ಮಾರ್ಟ್​ಫೋನ್​ಗಳು ಮಕ್ಕಳ ಆಟಿಕೆಗಳಾಗಿವೆ…!
ಬಡವರ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ಸಮಗ್ರ ಮಾಹಿತಿ ಕ್ಷಣಾರ್ಧದಲ್ಲಿ ಆನ್​ಲೈನ್​ನಲ್ಲಿ ಸಿಗಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ‘ಪೋಷಣ ಅಭಿಯಾನ’ ಯೋಜನೆ ಆರಂಭಿಸಿತ್ತು. ಈ ಯೋಜನೆಯ ಸಮಗ್ರ ಮಾಹಿತಿಯನ್ನು ಆನ್​ಲೈನ್​ನಲ್ಲಿ ದಾಖಲಿಸಲೆಂದು ಪ್ರತಿಯೊಂದು ಅಂಗನವಾಡಿಗೆ ನೀಡಿದ್ದ ಸ್ಮಾರ್ಟ್​ಫೋನ್​ಗಳು ಇದೀಗ ರೀಚಾರ್ಜ್ ಮಾಡದೆ ಸ್ಥಗಿತಗೊಂಡಿವೆ. ಇದರಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾರಿಗೆ ತಂದಿದ್ದ ಯೋಜನೆಯ ಉದ್ದೇಶವೇ ಈಡೇರಿಲ್ಲ. ಪೋಷಣ ಅಭಿಯಾನದಡಿ 2020ರಲ್ಲಿ 62,581 ಅಂಗನವಾಡಿ, 3,331 ಉಪಕೇಂದ್ರ ಸೇರಿ 65,911 ಕೇಂದ್ರಗಳ ಕಾರ್ಯಕರ್ತೆಯರಿಗೆ ‘ಸ್ಯಾಮ್ಂಗ್ ಗ್ಯಾಲಕ್ಸಿ ಎ-10 ಎಸ್’ ಮಾಡೆಲ್ ಸ್ಮಾರ್ಟ್​ಫೋನ್ ಹಾಗೂ ಏರ್​ಟೆಲ್ ಪೋಸ್ಟ್ಪೇಡ್ ಸಿಮ್ ವಿತರಿಸಲಾಗಿತ್ತು. ಹೊಸದಾಗಿ ಆರಂಭಿಸಿದ 1050 ಅಂಗನವಾಡಿಗಳಿಗೆ ಸ್ಮಾರ್ಟ್​ಫೋನ್​ಗಳಿನ್ನೂ ಸಿಗದಿರುವುದು ಬೇರೆ ಮಾತು.
ಅಂಗನವಾಡಿ, ಮೇಲ್ವಿಚಾರಕರು ಮತ್ತು ಸಿಡಿಪಿಒಗಳ ತ್ವರಿತ ಕಾರ್ಯನಿರ್ವಹಣೆಗೆ ಕೇಂದ್ರ-ರಾಜ್ಯ ಸರ್ಕಾರಗಳು ಶೇ.60-40ರ ಅನುಪಾತದಲ್ಲಿ ಸಾಕಾರಗೊಳಿಸಿದ ಯೋಜನೆ ಇದು. ಇದರನ್ವಯ 72,049 ಸ್ಮಾರ್ಟ್ ಫೋನ್​ಗಳನ್ನು ಕೇಂದ್ರ ಒದಗಿಸಿದೆ. 2020-21ನೇ ಆರ್ಥಿಕ ವರ್ಷದಲ್ಲಿ ಕೇಂದ್ರ 1054.88 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ 1,113 ಲಕ್ಷ ರೂ. ವ್ಯಯಿಸಿವೆ.
ನಂತರ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಡಿಜಿಟಲೀಕರಣ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಬಳಕೆಯಲ್ಲಿದ್ದ 65,911 ಸ್ಮಾರ್ಟ್​ಫೋನ್​ಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಏರ್​ಟೆಲ್ ಕಂಪನಿಗೆ ಪೋಸ್ಟ್ಪೇಡ್ ಶುಲ್ಕ ಪಾವತಿಸದ ಕಾರಣ ಸೇವೆ ಸ್ಥಗಿತಗೊಳಿಸಿದೆ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮೇಲಧಿಕಾರಿಗಳ ಗಮನ ಸೆಳೆದಿದ್ದು, ಅನುದಾನದ ಕೊರತೆ ಇದೆ ಎಂಬ ಉತ್ತರ ಬಂದಿದೆ.
ಮೊಬೈಲ್ ಕರೆನ್ಸಿ ಮುಗಿದಿದ್ದರಿಂದ ಮ್ಯಾನುವಲ್ ಆಗಿ ಮಾಹಿತಿ ಕೊಡಬೇಕಿದೆ. ಕೆಲ ಕಾರ್ಯಕರ್ತೆಯರಿಗೆ ನೀಡಿರುವ ಎಲ್​ಜಿ ಸೆಟ್ 2ಜಿ ಸಾಮರ್ಥ್ಯದ್ದಾಗಿದ್ದರಿಂದ ನೆಟ್ವರ್ಕ್ ಸಿಗದೆ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
|ಜಯಮ್ಮಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಕೇಂದ್ರ ಶೇ.60, ರಾಜ್ಯ ಸರ್ಕಾರ ಶೇ.40 ಅನುದಾನ ಭರಿಸುತ್ತಿವೆ. ಕೇಂದ್ರ ಮೊದಲ ಕಂತು ನೀಡಿದ್ದು, ಎರಡನೇ ಕಂತು ಬಿಡುಗಡೆಯಾಗಿಲ್ಲ. ಮೊದಲಿನ ಅನುದಾನ ಬಳಸಿ ಎನ್ನುತ್ತಿದೆ ಕೇಂದ್ರ ಸರ್ಕಾರ. ಹಣ ಖರ್ಚು ಮಾಡಿದ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಮಾಣಪತ್ರ ಸಲ್ಲಿಸಿ ಎರಡನೇ ಕಂತಿನ ಬಿಡುಗಡೆಗೆ ಪ್ರಯತ್ನಿಸುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರ ಕಾಣಲಿದೆ.
|ಪ್ರಿಯಾಂಕಾ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು.
ವಿತರಿಸಲಾಗಿರುವ ಎಲ್ಲ ಮೊಬೈಲ್​ಗಳ ಸಿಮ್ಳಿಗೂ ಸದ್ಯದಲ್ಲೇ ರೀಚಾರ್ಜ್ ಮಾಡಲಾಗುವುದು. ಮೊಬೈಲ್​ಗಳು ಗುಣಮಟ್ಟದಿಂದ ಕೂಡಿದ್ದು ಅವುಗಳನ್ನೇ ಬಳಸಲಾಗುವುದು.
|ಹಾಲಪ್ಪ ಆಚಾರ್ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ
ಸ್ಮಾರ್ಟ್ ಫೋನ್ ಇದ್ದಾಗಲೂ ತೊಡಕು:ಸರ್ಕಾರ, 10,000 ರೂ.ಗೆ ಒಂದರಂತೆ ಖರೀದಿಸಿ ಕೊಟ್ಟ ಸ್ಮಾರ್ಟ್ ಫೋನ್ 32 ಜಿಬಿ ಸ್ಟೋರೇಜ್, 2 ಜಿಬಿ ರ್ಯಾಮ್ ಸಾಮರ್ಥ್ಯದ್ದಾಗಿದ್ದು, ಡೇಟಾ ಅಪ್​ಲೋಡ್​ಗೆ, ಕಡತ ಸಂಗ್ರಹಕ್ಕೆ ತೊಡಕಾಗುತ್ತಿದೆ. ಹಳ್ಳಿಗಳಲ್ಲಿ ನೆಟ್​ವರ್ಕ್, ಸರ್ವರ್ ಹಾಗೂ ಇಂಟರ್​ನೆಟ್ ಸಮಸ್ಯೆಯಿಂದ ದೈನಂದಿನ ಡೇಟಾ ಎಂಟ್ರಿ, ಮಾಹಿತಿ ರವಾನೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಕಾರ್ಯಕರ್ತೆಯರು.
ಮೊದಲಿನಂತೆಯೇ ಕೆಲಸದೊತ್ತಡ:ಸ್ಮಾರ್ಟ್​ಫೋನ್​ನಿಂದ ಕೆಲಸ ತ್ವರಿತ ಹಾಗೂ ಸುಲಭವಾದ ಕಾರಣ ಸಿಡಿಪಿಒ, ಮೇಲ್ವಿಚಾರಕರು, ಕಾರ್ಯ ಕರ್ತೆಯರು ನಿರಾಳರಾಗಿದ್ದರು. 40 ಬಗೆಯ ಸೇವಾ ನಿರ್ವಹಣೆ ಮಾಹಿತಿಯನ್ನು ‘ಸ್ನೇಹ’ ಆಪ್ ಮೂಲಕ ದಾಖಲಿಸಿ ಸಲ್ಲಿಸಲಾಗುತ್ತಿತ್ತು. ಅಂಗನವಾಡಿಗೆ ಒಟ್ಟು ಮಕ್ಕಳ ದಾಖಲಾತಿ, ಪ್ರತಿದಿನ ಹಾಜರಿರುವ ಮಕ್ಕಳ ಮಾಹಿತಿ, ಆಹಾರ ಸಾಮಗ್ರಿಗಳು, ಬಾಣಂತಿಯರು, ಗರ್ಭಿಣಿಯರ ಮಾಹಿತಿ ಸೇರಿದಂತೆ ಎಲ್ಲವನ್ನೂ ಕಾರ್ಯಕರ್ತೆಯರು ದಾಖಲು ಮಾಡುತ್ತಿದ್ದರು. ಆದರೆ ಇದೀಗ ರಿಚಾರ್ಜ್ ಮುಗಿದಿರುವುದರಿಂದ ಎಲ್ಲ ಮೊಬೈಲ್​ಗಳು ‘ಡೆಡ್ ಇನ್ವೆಸ್ಟ್’ ಎಂಬಂತಾಗಿವೆ. ಮತ್ತೆ ಕೈ ಬರಹದಲ್ಲಿ ಕಡತ, ದಾಖಲಾತಿ ನಿರ್ವಹಿ ಸುವಂತಾಗಿ, ಕೆಲಸದೊತ್ತಡ ಹೆಚ್ಚಿದೆ.
ಗೌರವಧನ ಹೆಚ್ಚಳ ಇಲ್ಲಿಯವರೆಗೂ ಬಂದಿಲ್ಲ. 3 ತಿಂಗಳಿಂದ ವೇತನ ಕೂಡ ದೊರೆತಿಲ್ಲ. ಬದುಕು ಸಾಗಿಸುವುದು ದುಸ್ತರವಾಗಿದೆ.
|ಭಾಗ್ಯಮ್ಮ ಸಿರಿಗೆರೆಅಂಗನವಾಡಿ ಕಾರ್ಯಕರ್ತೆಯರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷೆ
ತಾಂತ್ರಿಕ ದೋಷ ದಿಂದಾಗಿ ಕೇಂದ್ರದಿಂದ ಹಣ ಬರುವುದು ತಡವಾಗಿದೆ. ಇನ್ನೊಂದು ವಾರದಲ್ಲಿ ದೋಷ ಸರಿಪಡಿಸಿ ವೇತನ ನೀಡಲು ಕ್ರಮ ಕೈಗೊಳ್ಳಲಿದ್ದೇವೆ.
|ಸುಧಾಶಿಶು ಅಭಿವೃದ್ಧಿ ಯೋಜನಾಧಿಕಾರಿ
3 ತಿಂಗಳಾದ್ರೂ ಗೌರವಧನವಿಲ್ಲ:ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಕಳೆದ 3 ತಿಂಗಳಿಂದ ಗೌರವಧನ ಕೈ ಸೇರಿಲ್ಲ. ರಾಜ್ಯದಲ್ಲಿ 62 ಸಾವಿರ ಅಂಗನವಾಡಿಗಳಲ್ಲಿ 1.24 ಲಕ್ಷ ಕಾರ್ಯಕರ್ತೆಯರು, ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ವೇತನಕ್ಕೆ ಕೇಂದ್ರ ಸರ್ಕಾರದಿಂದ ಶೇ.35, ರಾಜ್ಯ ಸರ್ಕಾರ ಶೇ.65ರಷ್ಟು ಹಣ ಬಿಡುಗಡೆ ಮಾಡಬೇಕಿದೆ. ಪ್ರತಿ ವರ್ಷ ಮಾರ್ಚ್​ನಲ್ಲಿ ಗೌರವಧನವನ್ನು ಮುಂಗಡವಾಗಿ ನೀಡಲಾಗುತ್ತಿತ್ತು. ಈ ವರ್ಷ ಗೌರವಧನ ಮಾತ್ರವಲ್ಲದೆ 3 ತಿಂಗಳಿಂದ ಮೊಟ್ಟೆ, ತರಕಾರಿ ಬಿಲ್ ಬಾಕಿ ಕೂಡ ನೀಡದೆ ಸತಾಯಿಸುತ್ತಿದ್ದಾರೆ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕೊಡುಗೆಯೂ ಇಲ್ಲ:ಸೇವೆ ಆಧಾರದಲ್ಲಿ ಗೌರವಧನ ಹೆಚ್ಚಳಕ್ಕೆ ಬಜೆಟ್​ನಲ್ಲಿ ಘೊಷಿಸಲಾಗಿತ್ತು. 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,500 ರೂ., 10 ರಿಂದ 20 ವರ್ಷದ ಕೆಲಸಕ್ಕೆ 1,250 ರೂ., 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ 1,000 ರೂ. ಹೆಚ್ಚಿಸಲು ನಿರ್ಧರಿಸಲಾಗಿತ್ತು. ಇಲ್ಲಿಯವರೆಗೂ ಈ ಹಣವೂ ಬಂದಿಲ್ಲ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − 2 =
Remember me
