|ಪ್ರಕಾಶ್ ಮಂಜೇಶ್ವರಮಂಗಳೂರು
ಉನ್ನತ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ/ನೀಟ್) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಈ ವರ್ಷವೂ ನಿರಾಸೆಯಾಗಿದೆ. ಈ ವಿದ್ಯಾರ್ಥಿಗಳಿಗೆ ಸತತ ಐದನೇ ವರ್ಷವೂ ಸಿಇಟಿ/ನೀಟ್​ನಲ್ಲಿ ಮೀಸಲಾತಿ ಲಭ್ಯವಾಗಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಎನ್​ಸಿಸಿ, ಕ್ರೀಡಾಪಟುಗಳಿಗೆ ಇರುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಿಇಟಿ ಇಂಜಿನಿಯರಿಂಗ್​ನಲ್ಲಿ 12, ಮೆಡಿಕಲ್ ಮತ್ತು ಡೆಂಟಲ್​ನಲ್ಲಿ ತಲಾ ಎರಡು ಸೀಟುಗಳನ್ನು ಮೀಸಲಿಡಲಾಗಿದೆ. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎನ್ನುವುದು ಅದಕ್ಕಿರುವ ಅರ್ಹತೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಪರೀಕ್ಷೆಯೇ ನಡೆಯುತ್ತಿಲ್ಲ. ರಾಷ್ಟ್ರಪತಿ ಪುರಸ್ಕಾರದ ಬದಲು ರಾಜ್ಯ ಪುರಸ್ಕಾರ ಪರೀಕ್ಷೆಯನ್ನು ಪರಿಗಣಿಸುವಂತೆ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಗೆ ಸಿಇಟಿಯಲ್ಲಿ ಮೀಸಲು ಆರಂಭಿಸಲಾಗಿತ್ತು.
ಸ್ಕೌಟ್ಸ್, ಗೈಡ್ಸ್​ನಲ್ಲಿ ನಗರಕ್ಕಿಂತ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು. ಹೀಗಾಗಿ ಈ ಮೀಸಲಾತಿ ಅವರಿಗೆ ಅನುಕೂಲವಾಗುತ್ತಿತ್ತು. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ನಿಲ್ಲಿಸಲಾಗಿದೆ.
ಕೋರ್ಟ್ ಮೊರೆ?:ಮೀಸಲಾತಿಗೆ ರಾಷ್ಟ್ರಪತಿ ಪುರಸ್ಕಾರವನ್ನು ಸರ್ಕಾರ ಮಾನದಂಡವಾಗಿಸಿದೆ. ಆದರೆ ಆ ಪರೀಕ್ಷೆಯೇ ನಡೆಯುತ್ತಿಲ್ಲ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ. ಸರ್ಕಾರ ರಾಜ್ಯ ಪುರಸ್ಕಾರವನ್ನು ಪರಿಗಣಿಸದಿದ್ದರೆ ಕೋರ್ಟ್ ಮೊರೆಹೋಗಲು ಕೆಲ ಪಾಲಕರು ನಿರ್ಧರಿಸಿದ್ದಾರೆ.
ರಾಷ್ಟ್ರಪತಿ ಪುರಸ್ಕಾರ ಪ್ರದಾನ ಸ್ಥಗಿತ ಹಿನ್ನೆಲೆಯಲ್ಲಿ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನೇ ಸಿಇಟಿ ಮೀಸಲು ಸ್ಥಾನಗಳಿಗೆ ಪರಿಗಣಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ನೀಡಿದ್ದೇವೆ. ಸರ್ಕಾರ ಮನಸ್ಸು ಮಾಡಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಬೇರೆ ಸವಲತ್ತುಗಳಿಲ್ಲ.
|ಪಿ.ಜಿ.ಆರ್. ಸಿಂಧ್ಯಾಮುಖ್ಯ ಆಯುಕ್ತರು, ಸ್ಕೌಟ್ಸ್ ಆಂಡ್ ಗೈಡ್, ಕರ್ನಾಟಕ
ತುಂಬು ಗರ್ಭಿಣಿಯೇ ಆಸ್ಪತ್ರೆಗೆ ದಾಖಲಾಗಿ ಮಗುವನ್ನು ಕದ್ದಳು!; ಕಾರಣ ಮೂರು ಮತ್ತೊಂದು..
ಮನಿಮೈಂಡೆಡ್​ ಜನಪ್ರತಿನಿಧಿಗಳಿಗೆ ಇದು ಶಾಕಿಂಗ್ ಸುದ್ದಿ: ಸಂಚಲನ ಮೂಡಿಸುವಂತಿದೆ ಆರ್​ಬಿಐನ ಈ ಕ್ರಮ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 12 =
Remember me
