ಬೆಂಗಳೂರು:ನಾಳೆ (ಆಗಸ್ಟ್​ 30) ಬೇರೆ ಊರುಗಳಿಗೆ ಹೋಗುವ ಯೋಚನೆಯಿದ್ದರೆ ಈ ಕೂಡಲೇ ಬಿಟ್ಟು ಬಿಡಿ. ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ನೀವು ತೆರಳಬೇಕಾದ ಸ್ಥಳಕ್ಕೆ ಸಮರ್ಪಕವಾದ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್​ಗಳ ಸೇವೆ ಸಿಗುವುದಿಲ್ಲ.
ಇದನ್ನೂ ಓದಿ:ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
ಜನಸಾಮಾನ್ಯರು ಬಯಸಿದ ವೇಳೆಗೆ ಸರಿಯಾಗಿ ಬಸ್​ ಸಿಗುವುದು ಅನುಮಾನ. ಇದಕ್ಕೆ ಕಾರಣ ನಾಳೆ ನಡೆಯಲಿರುವ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಜನರನ್ನು ಕರೆದೊಯ್ಯಲು ಸಾವಿರಾರು ಸರ್ಕಾರಿ ಬಸ್​ಗಳನ್ನು ರಾಜ್ಯ ಸರ್ಕಾರ ಈಗಾಗಲೇ ಬುಕ್​ ಮಾಡಿದೆ.
ಮೈಸೂರಿನಲ್ಲಿ‌ ನಡೆಯುವ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್​ಗಳು ಬಳಕೆಯಾಗಲಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ ನಿಗಮಗಳಿಂದ 2000ಕ್ಕೂ ಹೆಚ್ಚು ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ಕಟ್ಟಡ ಕಾರ್ಮಿಕ ಮಂಡಳಿಯ ಕಿಟ್ ಹಗರಣ ತನಿಖೆಗೆ ಒಳಪಡಿಸಿ
ಬಿಎಂಟಿಸಿ ವತಿಯಿಂದ 200ಕ್ಕೂ ಹೆಚ್ಚು ಬಸ್​ಗಳು ಮತ್ತು ಕೆಎಸ್​ಆರ್​ಟಿಸಿಯಿಂದ 1,800 ಕ್ಕೂ ಹೆಚ್ಚು ಬಸ್​ಗಳು ಮೈಸೂರಿನತ್ತ ಪಯಣ ಬೆಳಸಲಿದೆ. ಬೆಂಗಳೂರು, ಮಂಡ್ಯ, ತುಮಕೂರು, ಚಾಮರಾಜನಗರ, ಮೈಸೂರು, ಮಡಿಕೇರಿ, ಹಾಸನ, ಕೋಲಾರ, ಸೇರಿದಂತೆ ಅನೇಕ ಜಿಲ್ಲೆಗಳಿಂದ ಅಧಿಕ ಸಾರಿಗೆ ಬಸ್​ಗಳು ಮೈಸೂರಿಗೆ ಬರಲಿದೆ. ವಾಯುವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ನಿಗಮಗಳಿಂದಲೂ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.
ಫಿಕ್ಸ್​ ಆಯ್ತು ‘ಸಲಾರ್​’ ಟ್ರೇಲರ್​​ ರಿಲೀಸ್​ ಡೇಟ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 19 =
Remember me
