ಬೆಂಗಳೂರು:ಹೆಬ್ಬಾಳ ಕೆಂಪಾಪುರದ ರಾಮಯ್ಯ ಲೇಔಟ್​ನಲ್ಲಿ ವಾಲಿಕೊಂಡು ಬೀಳುವ ಹಂತ ದಲ್ಲಿದ್ದ ಕಟ್ಟಡ, ಬೆಂಗಳೂರಿನ ರಿಯಲ್​ಎಸ್ಟೇಟ್ ವಲಯದಲ್ಲಿ ‘ಬಿ ಖಾತಾ’ ಎಂದು ಕರೆಯಲಾಗುವ ಬಿ- ನೋಂದಣಿ ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಖಾತೆ ಮತ್ತು ಕಟ್ಟಡ ನಕ್ಷೆ ಮಂಜೂರಾತಿ ನೀಡಲು ಅವಕಾಶವಿಲ್ಲದ ಇಂಥ ಮನೆಗಳಿಗೆ ಸರ್ಕಾರದ ದೃಷ್ಟಿಯಲ್ಲಿ ವಾಸಯೋಗ್ಯ ಸ್ಥಳದ ಮಾನ್ಯತೆ ಪಡೆದಿರುವುದಿಲ್ಲ. ಆಸ್ತಿ ತೆರಿಗೆ ದೃಷ್ಟಿಯಿಂದ ಸ್ಥಳೀಯ ಆಡಳಿತ ಬಿ- ನೋಂದಣಿ ನೀಡುತ್ತದೆಯೇ ಹೊರತು, ಯಾವುದೇ ಅನಾಹುತ ಸಂಭವಿಸಿದರೆ ಪರಿಹಾರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ 3.5 ಲಕ್ಷಕ್ಕೂ ಹೆಚ್ಚು ಮನೆಗಳು ಅಕ್ರಮವಾಗಿ ನಿರ್ವಣವಾಗಿವೆ. ಈ ಮನೆಗಳು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುವುದಿಲ್ಲ. ಜತೆಗೆ ಪಾಲಿಕೆ, ಬಿಡಿಎ, ಬಿಎಂಆರ್​ಡಿಎ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರದೇಶ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆಯದೆ ನಿರ್ವಿುಸಿದ ಬಡಾವಣೆಗಳು, ಅಪಾರ್ಟ್​ವೆುಂಟ್​ಗಳಾಗಿವೆ. ಇವುಗಳಿಂದ ಸಮಸ್ಯೆಗಳಾದಲ್ಲಿ, ಪರಿಹಾರ ನೀಡದೆ ತೆರವು ಕಾರ್ಯ ಮಾಡುವ ಹಕ್ಕು ಸ್ಥಳೀಯ ಆಡಳಿತ ಸಂಸ್ಥೆಗಳಿಗಿದೆ.
ಬಿ- ಖಾತಾ ಎಂಬುದೇ ಇಲ್ಲ:ಕೃಷಿ ಜಮೀನು ಅಥವಾ ಕಂದಾಯ ಜಮೀನುಗಳನ್ನು ಬಿಬಿಎಂಪಿ, ಬಿಡಿಎ, ಬಿಎಂಆರ್​ಡಿಎಯಿಂದ ವಾಸಯೋಗ್ಯ ಪ್ರಮಾಣಪತ್ರ, ನಕಾಶೆ ಅನುಮತಿಪತ್ರ ಪಡೆಯದೆ, ಸರ್ಕಾರದ ನಿಯಮ ಉಲ್ಲಂಘಿಸಿ ನಿರ್ವಿುಸಿರುವ ಮನೆಗಳಿಗೆ ಬಿ-ನಮೂನೆ ಅರ್ಜಿ ತುಂಬಿ ತೆರಿಗೆ ವಿಧಿಸುತ್ತವೆ. ಇದನ್ನೇ ಬಿ-ನೋಂದಣಿ ಎಂದು ಕರೆಯಲಾಗುತ್ತದೆ. ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಮಾತ್ರ ಇದು ಸೀಮಿತವಾಗಿರುತ್ತದೆ.
ಸರ್ಕಾರದ ಬಳಿ ಬಿ-ಖಾತಾ ಎಂಬ ಖಾತೆ ಅಥವಾ ವ್ಯಾಖ್ಯಾನವೇ ಇಲ್ಲ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೇರಿ ಆಸ್ತಿ ಮತ್ತು ಮನೆಗಳಿಗೆ ಸಂಬಂಧಿಸಿದ ಯಾವುದೇ ಕಡತದಲ್ಲಿ ಬಿ-ಖಾತೆ ಎಂಬ ಪದವಿಲ್ಲ. ಇದಕ್ಕೆ ತಾತ್ಕಾಲಿಕ ಆಸ್ತಿ ತೆರಿಗೆ ಸಂಗ್ರಹಣೆಗಾಗಿ ಸ್ಥಳೀಯ ಪಾಲಿಕೆ ಅಥವಾ ಸರ್ಕಾರಗಳು ನೀಡುವ ಬಿ-ನಮೂನೆ ಅರ್ಜಿಯಲ್ಲಿ ದಾಖಲಾತಿ ಮಾಡಿಕೊಂಡು ನೋಂದಣಿ ನೀಡುತ್ತವೆ. ಹಾಗಾಗಿ ಈ ಹೆಸರು ಬಂದಿದೆ.
ಅಕ್ರಮ ಮನೆಗಳಿಗೆ ಪೂರಕ ವಾತಾವರಣ
ಪಾಲಿಕೆ ವ್ಯಾಪ್ತಿಯಲ್ಲಿ ಬಿ-ನೋಂದಣಿ ಹೊಂದಿದ 3.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ರಾಜ್ಯ ಸರ್ಕಾರ ಅಕ್ರಮ- ಸಕ್ರಮ ಕಾಯ್ದೆಯೊಂದನ್ನು ರೂಪಿಸಿ ಎ-ಖಾತಾ ನೀಡಲು ಸಿದ್ಧವಾಗಿತ್ತು. ಆದರೆ ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿರುವ ಕಾರಣ ಪ್ರಕ್ರಿಯೆ ವಿಳಂಬವಾಗಿದೆ. ಆದರೂ ಕೆಲವರು ಅನಧಿಕೃತವಾಗಿ ಮನೆ ನಿರ್ವಿುಸುತ್ತಿದ್ದಾರೆ. ಜತೆಗೆ ಐದಾರು ವರ್ಷಗಳ ಹಿಂದೆ, ಎರಡು ಮಹಡಿ ಮನೆ ನಿರ್ವಿುಸಿ ಬಿ-ನೋಂದಣಿ ಪಡೆದ ಮಾಲೀಕರು ಸಕ್ರಮ ಭಾಗ್ಯದ ಆಸೆಯಲ್ಲಿ ಹೆಚ್ಚುವರಿ ನಾಲ್ಕೈದು ಮಹಡಿಗಳನ್ನು ಅನಧಿಕೃತವಾಗಿ ನಿರ್ವಿುಸುತ್ತಿದ್ದಾರೆ.
ಕಟ್ಟಡ ತೆರವು ವೆಚ್ಚದ ವಸೂಲಿ
ಪಾಲಿಕೆ ವತಿಯಿಂದ ಕಂದಾಯ ಭೂಮಿಯಲ್ಲಿ 2 ಮಹಡಿ ಮನೆಗಳಿಗೆ ಮಾತ್ರ ಬಿ-ನೋಂದಣಿ ನೀಡಲು ಅವಕಾಶವಿದೆ. ಅದರಂತೆ ಆಸ್ತಿ ತೆರಿಗೆ ವಿಧಿಸಲಾಗುತ್ತದೆ. ಆದರೆ ಈ ಮಿತಿಯನ್ನು ಮೀರಿ 4ರಿಂದ 5 ಮಹಡಿ ಮನೆ ನಿರ್ವಿುಸ ಲಾಗುತ್ತದೆ. ಇದರಿಂದ ಹೆಚ್ಚು ಅನಾಹುತಗಳಾಗುತ್ತವೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.
ಬ್ಯಾಟರಾಯನಪುರ ವಾರ್ಡ್​ನ ಹೆಬ್ಬಾಳ ಕೆಂಪಾಪುರದ ರಾಮಯ್ಯ ಲೇಔಟ್​ನ ವಾಲಿಕೊಂಡು ಬೀಳುವ ಹಂತ ತಲುಪಿದ್ದ ಕಟ್ಟಡವೂ ಬಿ-ನೋಂದಣಿಯ ಕಟ್ಟಡವಾಗಿದೆ. ಮನೆಯು 15 ಅಡಿ ರಸ್ತೆಯಲ್ಲಿದ್ದು, 5 ಮಹಡಿ ಮನೆ ನಿರ್ವಿುಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಪಾಲಿಕೆಯಿಂದ ನಕ್ಷೆ ಮಂಜೂರಾತಿ, ಮನೆ ನಿರ್ಮಾಣಕ್ಕೆ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯದ ಈ ಕಟ್ಟಡಕ್ಕೆ ಪಾಲಿಕೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ವಾಲಿದ ಕಟ್ಟಡ ತೆರವು ಸೇರಿ ಸುತ್ತಲಿನ ಎಲ್ಲ ಕಾರ್ಯಗಳಿಗೆ ಸಂಬಂಧಿಸಿದ ಆಸ್ತಿ ಮಾಲೀಕರೇ ಹಣ ಪಾವತಿಸಬೇಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಿ- ನೋಂದಣಿ ಪಡೆದ ಮನೆಗಳಿಗೆ ಪಾಲಿಕೆ ಯಿಂದ ಯಾವುದೇ ನಕ್ಷೆ ಮಂಜೂರಾತಿ, ನಿರಾಕ್ಷೇಪಣಾ ಪತ್ರ ನೀಡಿರುವುದಿಲ್ಲ. ಹಾಗಾಗಿ ಅಂತಹ ಮನೆಗಳಿಗೆ ಯಾವುದೇ ತೊಂದರೆಯಾದರೂ ಪಾಲಿಕೆ ಅಥವಾ ಸರ್ಕಾರದಿಂದ ಪರಿಹಾರ ದೊರೆಯುವುದಿಲ್ಲ. ಕೆಂಪಾಪುರದಲ್ಲಿ ವಾಲಿಕೊಂಡಿರುವ ಕಟ್ಟಡವು ಬಿ-ನೋಂದಣಿಗೆ ಸೇರಿದ್ದು ಇದಕ್ಕೆ ಯಾವುದೇ ಪರಿಹಾರ ನೀಡಲು ಬರುವುದಿಲ್ಲ.
| ಅಶೋಕ್ ಯಲಹಂಕ ವಲಯ ಪಾಲಿಕೆ ಜಂಟಿ ಆಯುಕ್ತ
| ಸತೀಶ್ ಕೆ. ಬಳ್ಳಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
