|ಡಿಪಿಎನ್ ಶ್ರೇಷ್ಠಿಚಿತ್ರದುರ್ಗ
ಭಾರತ ಚುನಾವಣಾ ಆಯೋಗ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲರು ಹಾಗೂ 80 ವರ್ಷ ವಯಸ್ಸು ಮೀರಿದವರಿಗೆ ಮನೆ ಬಾಗಿಲಲ್ಲೇ ಮತ ಹಾಕುವ ಅವಕಾಶ ಕಲ್ಪಿಸಿದೆ. ಈ ಅವಕಾಶದತ್ತ ನಿರಾಸಕ್ತಿ ತೋರಿರುವ ಬಹಳಷ್ಟು ಅಂಗವಿಕಲರು ಹಾಗೂ ವೃದ್ಧರು ಮೇ 10ರಂದು ಮತಗಟ್ಟೆಗೆ ತೆರಳಿ ಮತ ಹಾಕಲು ನಿರ್ಧರಿಸಿದಂತಿದೆ. ರಾಜ್ಯದಲ್ಲಿ 58,545 ಮತಗಟ್ಟೆಗಳು ಹಾಗೂ 5,30,85,556 ಮತದಾರರಿದ್ದಾರೆ. ಇವರಲ್ಲಿ್ಲ 80 ವರ್ಷಕ್ಕೂ ಅಧಿಕ ವಯೋಮಾನದ ಪುರುಷರು 5,46,487, ಮಹಿಳೆಯರು 6, 69,417 ಹಾಗೂ ಇತರ 16 ಮಂದಿ ಸೇರಿ 12,15,920 ಮತದಾರರು ಇದ್ದಾರೆ. ಇಷ್ಟು ಮತದಾರರಲ್ಲಿ 80,250 ಮಂದಿ ಮನೆ ಬಳಿ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. ಪುರುಷ 3,35, 387 ಹಾಗೂ ಮಹಿಳೆ 2,35,833 ಹಾಗೂ ಇತರ 61 ಮಂದಿ ಸೇರಿ ರಾಜ್ಯದಲ್ಲಿ 5,71,281 ಅಂಗವಿಕಲ ಮತದಾರರು ಇದ್ದಾರೆ. ಮತದಾನಕ್ಕೆ ನೋಂದಣಿ ಮಾಡಿಕೊಂಡ ಅಂಗವಿಕಲರ ಸಂಖ್ಯೆ 19,279 ಮಾತ್ರ. ಇನ್ನು, ಅಗತ್ಯ ಸೇವೆಯಲ್ಲಿರುವ 13,771, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿ 1,78,523 ಮಂದಿ ಹಕ್ಕು ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ.
ರೆಡಿಯಾಗಿದೆ ತಂಡ:ಈ ಮತದಾರರ ಮನೆಗಳಿಗೆ ಹೋಗಲು ರೂಟ್​ವ್ಯಾಪ್ ಸಿದ್ಧವಾಗಿದೆ. ಮೈಕ್ರೋಅಬ್ಸರ್ವರ್, ಪೊಲೀಸ್ ಸಿಬ್ಬಂದಿ ವಿಡಿಯೋ ಗ್ರಾಫರ್​ಗಳು ಹಾಗೂ ಅಗತ್ಯ ಪರಿಕರಗಳೊಂದಿಗೆ ಮತ ಹಾಕಿಸಿಕೊಳ್ಳಲು ತಂಡ ಸಜ್ಜಾಗುತ್ತಿದೆ. ಇವರು ಮತಗಟ್ಟೆ ಏಜೆಂಟರಿಗೆ ಮಾಹಿತಿ ನೀಡಿದ ಬಳಿಕವೇ ತಂಡ ಮನೆಗಳಿಗೆ ತೆರಳಲಿದೆ. ಏ.29 ರಿಂದ ಮೇ 6ರೊಳಗೆ ಮತದಾನದ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ನಿರ್ದೇಶಿಸಿದೆ.
ಮೇ 2ರಿಂದ ಪಿವಿಎಸ್ ಶುರು:ಅಗತ್ಯ ಸೇವೆಗಳಲ್ಲಿರುವ ವಿವಿಧ 12 ಇಲಾಖೆಗಳ ನೌಕರರ ಪೈಕಿ ಅಂಚೆ ಮತದಾನಕ್ಕೆ ನೋಂದಾಯಿಸಿದವರಿಗೆ ಮತದಾನ ಮಾಡಲು ಆಯೋಗ ಮೇ 2 ರಿಂದ 6 ರವರೆಗೆ ಆಯಾ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್(ಪಿವಿಎಸ್) ಆರಂಭಿಸಲಿದ್ದು, 3 ದಿನದೊಳಗೆ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶಿಸಿದೆ. ವಿದ್ಯುತ್, ಆರೋಗ್ಯ ಇಲಾಖೆ, ಬಿಎಸ್​ಎನ್​ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ವಿಮಾನಯಾನ, ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಮಾನ್ಯತೆ ಹೊಂದಿರುವ ಪತ್ರಕರ್ತರು, ಟ್ರಾಫಿಕ್ ಪೊಲೀಸ್ ಮತ್ತು ಆಂಬುಲೆನ್ಸ್ ಇತ್ಯಾದಿ ಅಗತ್ಯ ಸೇವೆಗಳಲ್ಲಿ ಪಿವಿಎಸ್​ಗಳಲ್ಲಿ ಮತ ಚಲಾಯಿಸಬಹುದಾಗಿದೆ.
ದರ್ಗಾದಲ್ಲಿನ ಶಿವಲಿಂಗ ಪೂಜೆ ಅವಕಾಶ ನಮಗೆ ಬೇಕು: ನಿರ್ಮಲಾ ಸೀತಾರಾಮನ್

ಶೆಟ್ಟರ್ ಅವರನ್ನು ಮನೆಗೆ ಕಳಿಸುವುದೇ ನನ್ನ ಉದ್ದೇಶ; ಸೋತ ಅವರ ಸಮ್ಮುಖದಲ್ಲೇ ವಿಜಯೋತ್ಸವ ಮಾಡೋಣ: ಬಿಎಸ್​ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + six =
Remember me
