ಬೆಂಗಳೂರು:ಕರೊನಾ ನಿಯಂತ್ರಣಕ್ಕೆ 200 ವೆಂಟಿಲೇಟರ್​ಗಳನ್ನು ತಲಾ 18.2 ಲಕ್ಷ ರೂ. ನೀಡಿ ಖರೀದಿಸಲಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವಿಭಿನ್ನ ತಾಂತ್ರಿಕ ವೈಶಿಷ್ಟ್ಯೆಗೆ ಅನುಗುಣವಾಗಿ ವೆಂಟಿಲೇಟರ್ ದರದಲ್ಲಿ ಭಿನ್ನತೆಯಿರುತ್ತದೆ. ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವೇರ್ ಹೌಸಿಂಗ್ ಸೊಸೈಟಿ (ಕೆಎಸ್​ಡಿಎಲ್​ಡಬ್ಲ್ಯುಎಸ್) ಮೂಲಕ ವೆಂಟಿಲೇಟರ್ ಖರೀದಿಗೆ ಬೇರೆ ಉತ್ಪಾದಕರು ಮುಂದೆ ಬಾರದ ಕಾರಣಕ್ಕೆ ಮೈಸೂರಿನ ಮೆಸರ್ಸ್ ಸ್ಕ್ಯಾನರಿ ಟೆಕ್ನಾಲಜೀಸ್ ಪ್ರೖೆ.ಲಿ. ಮೂಲಕ ತಲಾ 5,60,000 ರೂ. ಮೊತ್ತದಲ್ಲಿ 130 ವೆಂಟಿಲೇಟರ್ ಖರೀದಿಗೆ 2020ರ ಮಾ.22ರಂದು ಆರ್ಡರ್ ನೀಡಲಾಯಿತು. ಈ ಸಂಸ್ಥೆ ಇಲ್ಲಿವರೆಗೆ 80 ವೆಂಟಿಲೇಟರ್​ಗಳನ್ನು ಸರಬರಾಜು ಮಾಡಿದೆ.
2,149 ವೆಂಟಿಲೇಟರ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. 1,600 ವೆಂಟಿಲೇಟರ್ ನೀಡಲು ಒಪ್ಪಿದ ಕೇಂದ್ರ ಸರ್ಕಾರ ಇಲ್ಲಿವರೆಗೆ 640 ಸರಬರಾಜು ಮಾಡಿದ್ದು, ಉಳಿದವು ಸರಬರಾಜು ಪ್ರಕ್ರಿಯೆಯಲ್ಲಿವೆ. ಈ ಉಪಕರಣಗಳನ್ನು ಪಿಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಉಚಿತವಾಗಿ ನೀಡಲಾಗುತ್ತಿದೆ. ಕರೊನಾ ಸೋಂಕಿನ ತುರ್ತು ಪರಿಸ್ಥಿತಿಯಲ್ಲಿದ್ದ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ವೆಂಟಿಲೇಟರ್ ಸರಬರಾಜು ಇರಲಿಲ್ಲ. ಈ ಅವಧಿಯಲ್ಲಿ ವಿವಿಧ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ 28 ಉನ್ನತ ಸಾಮರ್ಥ್ಯದ ಐಸಿಯು ವೆಂಟಿಲೇಟರ್​ಗಳನ್ನು 6 ವಿಭಿನ್ನ ಉತ್ಪಾದಕರಿಂದ ವಿಭಿನ್ನ ದರಗಳಿಗೆ ಖರೀದಿ ಮಾಡಿ ವಿತರಣೆ ಮಾಡಲಾಗಿತ್ತು. ಟ್ರಾನ್ಸ್​ಪೋರ್ಟ್ ವೆಂಟಿಲೇಟರ್​ಗಳನ್ನು ಐಸಿಯು ವೆಂಟಿಲೇಟರ್​ಗಳ ಜತೆಗೆ ಹೋಲಿಕೆ ಮಾಡುವುದು ತಪು್ಪ. ಹಾಗಾಗಿ 200 ವೆಂಟಿಲೇಟರ್​ಗಳನ್ನು ತಲಾ 18.2 ಲಕ್ಷ ರೂ. ಮೊತ್ತಕ್ಕೆ ಖರೀದಿ ಮಾಡಲಾಗಿದೆ ಎಂಬುದು ಸುಳ್ಳು ಆರೋಪ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ವೆಂಟಿಲೇಟರ್ ಸಿಗದೆ ರಾಜ್ಯದಲ್ಲಿ ಕರೊನಾ ಸೋಂಕಿತರು ಸಾಯುತ್ತಿದ್ದರೆ, ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್​ಗಳಿಂದ ಹಿಡಿದು ಬೆಡ್​ಗಳವರೆಗೂ ಕರೊನಾ ಚಿಕಿತ್ಸಾ ಉಪಕರಣಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.
| ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
https://www.vijayavani.net/modular-icu-used-for-corona-treatment/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
