ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರು ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಈ ವರ್ಷ ಕೃಷಿ ಚಟುವಟಿಕೆ ಆರಂಭಕ್ಕೆ ಉತ್ತಮ ಮುಂಗಾರು ಸಹಕಾರಿಯಾಗಿದ್ದರೂ, ಬೆಳೆ ವಿಮೆ ಹಾಗೂ ಹೊಸ ಸಾಲ ಸಿಗದೆ ರೈತರು ಲೇವಾದೇವಿದಾರರ ಮೊರೆಹೋಗುವ ಸನ್ನಿವೇಶ ಎದುರಾಗಿದೆ.
ಹಳೆಯ ಸಾಲ ಪಾವತಿಸದೆ ಹೊಸ ಸಾಲ ಸಿಗುವುದಿಲ್ಲ. ಈ ಸಂಕಷ್ಟ ಸಮಯದಲ್ಲಿ ಸಾಲ ಮರುಪಾವತಿಗೆ ರೈತರ ಬಳಿ ಹಣವಿಲ್ಲ. ಹಣ ಇದ್ದರೂ ಪಹಣಿ ಇನ್ನಿತರ ದಾಖಲೆಗಳನ್ನು ಪಡೆಯುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ 79 ಲಕ್ಷ ರೈತರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರಲ್ಲಿ 20 ರಿಂದ 22 ಲಕ್ಷ ರೈತರು ಸಹಕಾರಿ ಬ್ಯಾಂಕ್​ಗಳಿಂದ ಹಾಗೂ 25 ರಿಂದ 28 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಕೃಷಿ ಸಾಲ ಪಡೆಯುತ್ತಾರೆ. ಉಳಿದ ರೈತರು ಲೇವಾದೇವಿದಾರರಿಂದ ಹಣ ಪಡೆಯುತ್ತಾರೆ. ಬ್ಯಾಂಕ್​ಗಳಿಂದ ವಾರ್ಷಿಕ 30 ರಿಂದ 35 ಸಾವಿರ ಕೋಟಿ ರೂ. ಕೃಷಿ ಸಾಲ ನೀಡಲಾಗುತ್ತದೆ ಎಂಬ ಅಂದಾಜಿದೆ.
ವರ್ಷದ ಕಂತು:ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲದ ಕಂತುಗಳ ಪಾವತಿಯನ್ನು ಆಗಸ್ಟ್​ವರೆಗೆ ಮುಂದಕ್ಕೆ ಹಾಕಿದೆ. ಆದರೆ ಕೃಷಿ ಸಾಲ ವರ್ಷದ ಕಂತು. ಹೀಗಾಗಿ ಇದನ್ನು ಮುಂದಕ್ಕೆ ಹಾಕಿಲ್ಲ. ಕೃಷಿ ಸಾಲದ ಕಂತು ಮರುಪಾವತಿಸಿದರೆ ಮಾತ್ರ ಹೊಸ ಸಾಲ ಸಿಗುತ್ತದೆ. ಒಂದೆರಡು ಜಿಲ್ಲೆಗಳ ಹೊರತಾಗಿ ಬಹುತೇಕ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ.
ಬರ ಘೋಷಣೆಯಲ್ಲಿ ಅವಕಾಶ:ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದರೆ ಮಾತ್ರ ಬಡ್ಡಿ ಪಾವತಿಸಿ, ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಅವಕಾಶವಿದೆ. ಆದರೆ ಈಗ ಸರ್ಕಾರ ಈ ಅವಕಾಶ ನೀಡಿಲ್ಲ.
ದಾಖಲೆ ಪಡೆಯುವುದು ಕಷ್ಟ:ಹಣ ಇದ್ದವರು ಕಂತು ಪಾವತಿಸಿ ಸಾಲ ತೆಗೆದುಕೊಳ್ಳೋಣ ಎಂದರೆ ಪಹಣಿ, ಇಸಿಗಳನ್ನು ಪಡೆಯಲು ಸಾಧ್ಯವಾಗು ತ್ತಿಲ್ಲ. ಕಂದಾಯ ಇಲಾಖೆ ಸಿಬ್ಬಂದಿ ಕರೊನಾ ಕೆಲಸದಲ್ಲಿ ನಿರತರಾಗಿದ್ದಾರೆ. ಯಾವ ಕಾಗದಪತ್ರಗಳೂ ಸಿಗದಂತಹ ಸ್ಥಿತಿಯಿದೆ.
ಸಾಲಮನ್ನಾಕ್ಕೆ ಕಾದ ರೈತರು:ಯಡಿಯೂರಪ್ಪ ಸರ್ಕಾರ ಸಾಲಮನ್ನಾ ಮಾಡುತ್ತದೆ ಎಂದು ರೈತರು ಕಾದಿದ್ದರು. ಸಿಎಂಗೆ ಒಲವಿದ್ದರೂ ಈಗ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಪ್ರವಾಹ ಹಾಗೂ ಕರೊನಾ ಕೈಕಟ್ಟಿವೆ.
ಬೆಳೆ ವಿಮೆ ಸಮಸ್ಯೆ:ಸಮೀಕ್ಷೆ ಸರಿಯಾಗಿ ನಡೆಯದ ಕಾರಣದಿಂದಾಗಿ, ಬೆಳೆ ವಿಮೆ ಕಂತು ಪಾವತಿ ಮಾಡಿರುವ ರೈತರಿಗೂ ವಿಮೆ ಹಣ ಸರಿಯಾಗಿ ಬರುತ್ತಿಲ್ಲ. ಸುಮಾರು 600 ಕೋಟಿ ರೂ. ಬಾಕಿ ಇದೆ. ಸರ್ಕಾರ ಈಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಸಹಕಾರ ವಲಯದ ಗುರಿ ಮತ್ತು ಸಾಧನೆ:ಸಹಕಾರ ವಲಯದಿಂದ 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂ. ಸಾಲ ನೀಡುವ ಗುರಿ ಇದೆ. ಇದುವರೆಗೆ 7,83,045 ರೈತರಿಗೆ 5356.15 ಕೋಟಿ ರೂ. ಸಾಲ ಪಾವತಿಸಲಾಗಿದೆ.
ಸಮಸ್ಯೆಗಳೇನು?:
ಸಾಲ ಸಿಗದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅಂಕಿ-ಅಂಶ ಪಡೆಯುತ್ತೇನೆ. ಆದರೆ ಬೆಳೆ ವಿಮೆ ಸಮಸ್ಯೆ ಬಗೆಹರಿಸಿದ್ದೇವೆ. 15 ರಿಂದ 20 ದಿನಗಳಲ್ಲಿ ವಿಮೆ ಹಣ ರೈತರಿಗೆ ಸಿಗಲಿದೆ.
| ಬಿ.ಸಿ.ಪಾಟೀಲ್ಕೃಷಿ ಸಚಿವ
ಯಾವ ಬ್ಯಾಂಕ್​ಗಳೂ ರೈತರಿಗೆ ಹೊಸ ಸಾಲ ನೀಡುತ್ತಿಲ್ಲ. ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಹಳೆಯ ಸಾಲದ ನವೀಕರಣ ಜತೆಗೆ ಹೊಸದಾಗಿ ಸಾಲ ಸಿಗುವಂತೆ ಮಾಡಬೇಕು. ಆರ್​ಬಿಐನಿಂದ ಬ್ಯಾಂಕ್​ಗಳಿಗೆ ಮಾರ್ಗದರ್ಶನ ಕೊಡಿಸುವ ಕೆಲಸವಾಗಬೇಕು.
| ಮಾರುತಿ ಮಾನ್ಪಡೆರೈತ ಮುಖಂಡರು
ಹಳೆಯ ಸಾಲ ಕಟ್ಟಲು ಆಗುತ್ತಿಲ್ಲ, ಹೊಸ ಸಾಲ ಸಿಗುತ್ತಿಲ್ಲ. ಬೆಳೆ ವಿಮೆ ಇಲ್ಲ. ಹಳೆಯ ಸಾಲ ಇದ್ದರೂ ರೈತರಿಗೆ ಕನಿಷ್ಠ 50 ಸಾವಿರದಿಂದ 1 ಲಕ್ಷ ರೂ. ತನಕ ಹೊಸ ಸಾಲ ಕೊಡಿಸಿದರಷ್ಟೇ ಅನುಕೂಲವಾಗಲಿದೆ.
| ಕುರುಬೂರು ಶಾಂತಕುಮಾರ್ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ
https://www.vijayavani.net/congress-mla-says-sachin-pilot-offered-rs-35-crore-for-cross-voting-in-rajasabha-election/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fifteen =
Remember me
