
| ಸತೀಶ್ ಕೆ. ಬಳ್ಳಾರಿ ಬೆಂಗಳೂರು
ಕರೊನಾಕ್ಕೆ ಲಸಿಕೆ ಲಭಿಸುವವರೆಗೂ ಮಾಸ್ಕ್ ಧಾರಣೆ, ದೈಹಿಕ ಅಂತರ ಇನ್ನಿತರ ನಿಯಮಗಳೇ ಶ್ರೀರಕ್ಷೆಯಾಗಿದ್ದು, ಇವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯತಜ್ಞರು ಮತ್ತು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮನವಿ ಮಾಡಿದರೂ ಹಲವರು ಇದು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಇದು ಸೋಂಕು ಹರಡುವ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಹೆಚ್ಚಿನ ಜನರು ಮಾಸ್ಕ್ ಧರಿಸದೆ, ದೈಹಿಕ ಅಂತರ ಮರೆತು ವ್ಯಾಪಾರ ವಹಿವಾಟು, ಮದುವೆ ಸಮಾರಂಭ ನಡೆಸುವುದು, ದೇವಾಲಯಕ್ಕೆ ಭೇಟಿ ಹಾಗೂ ಪ್ರವಾಸ ಕೈಗೊಳ್ಳುತ್ತಿರುವುದು ‘ವಿಜಯವಾಣಿ’ ರಿಯಾಲಿಟಿ ಚೆಕ್​ನಲ್ಲಿ ಕಂಡುಬಂದಿದೆ.
ಮೂಗು ಮುಚ್ಚದ ಮಾಸ್ಕ್:ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂತೆಗಳು, ಮಾರುಕಟ್ಟೆಗಳಲ್ಲಿ ಮತ್ತು ಪ್ರಮುಖ ರಸ್ತೆಗಳು, ದೇವಾಲಯ, ಪ್ರವಾಸಿ ತಾಣಗಳು, ಕಲ್ಯಾಣ ಮಂಟಪ, ಸಭೆ ಸಮಾರಂಭಗಳು, ಕಚೇರಿ ಕಾರ್ಯಕ್ರಮಗಳು ಸೇರಿ ಬಹುತೇಕ ಕಡೆಗಳಲ್ಲಿ ಮಾಸ್ಕ್ ಧರಿಸುವ ನಿಯಮ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಮುಖ್ಯವಾಗಿ ಮಾಸ್ಕ್​ನ್ನು ಮೂಗು, ಬಾಯಿ ಮುಚ್ಚುವಂತೆ ಧರಿಸಬೇಕು. ಆದರೆ ಬಹುತೇಕರು ಗಲ್ಲದ ಮೇಲೆ ಮಾಸ್ಕ್ ಹಾಕಿಕೊಂಡಿರುತ್ತಾರೆ.
ದಂಡಾಧಿಕಾರಿಗಳು ಕಂಡಲ್ಲಿ ನಿಯಮ ಪಾಲನೆ:ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದ್ದರೂ, ಮಾಸ್ಕ್ ಧರಿಸುವವರ ಸಂಖ್ಯೆ ಕಡಿಮೆಯಿದೆ. ಪೊಲೀಸರು, ಪಂಚಾಯಿತಿ, ನಗರ ಪಾಲಿಕೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಮಾರ್ಷಲ್​ಗಳು ಕಂಡಾಗ ಮಾತ್ರ ಜನರು ಮಾಸ್ಕ್ ಧರಿಸುತ್ತಿದ್ದಾರೆ.
ದಂಡಾಧಿಕಾರಿಗಳು ಕಂಡಲ್ಲಿ ನಿಯಮ ಪಾಲನೆ:ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದ್ದರೂ, ಮಾಸ್ಕ್ ಧರಿಸುವವರ ಸಂಖ್ಯೆ ಕಡಿಮೆಯಿದೆ. ಪೊಲೀಸರು, ಪಂಚಾಯಿತಿ, ನಗರ ಪಾಲಿಕೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಮಾರ್ಷಲ್​ಗಳು ಕಂಡಾಗ ಮಾತ್ರ ಜನರು ಮಾಸ್ಕ್ ಧರಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಯಾದಗಿರಿ, ಕಲಬುರಗಿ, ಬಾಗಲಕೋಟೆ, ಬೀದರ್ ಮತ್ತು ವಿಜಯಪುರ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಮಹಾಮಳೆಗೆ ಜನರು ಸೂರು ಕಳೆದುಕೊಂಡಿದ್ದಾರೆ. ಉಟ್ಟ ಬಟ್ಟೆಯಲ್ಲೇ ಸರ್ಕಾರ ಆರಂಭಿಸಿದ ಕಾಳಜಿ ಕೇಂದ್ರಗಳಿಗೆ ಬಂದು ನೆಲೆಯೂರಿದ್ದಾರೆ. ಅವರಿಗೆ ಮಾಸ್ಕ್ ಧಾರಣೆಯಂತಹ ನಿಯಮ ಪಾಲನೆ ಸಾಧ್ಯವಾಗುತ್ತಿಲ್ಲ. ಪ್ರವಾಹ ಸಂಕಷ್ಟದ ನಡುವೆಯೇ ಕರೊನಾವೂ ಉಲ್ಬಣಿಸಿದರೆ ಎಂಬ ಆತಂಕ ಉಂಟಾಗಿದೆ.
ರಾಜ್ಯದಲ್ಲಿ ಕೋವಿಡ್ ನಿಯಮ ಉಲ್ಲಂಘನೆಗೆ ನಗರ ಪ್ರದೇಶಗಳಲ್ಲಿ 250 ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡ ಪರಿಷ್ಕರಣೆಯಾದ ನಂತರ ಅ.12 ರಿಂದ 18ರವರೆಗೆ 91,049 ಮಂದಿಗೆ ದಂಡ ವಿಧಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ 11,624, ಬೆಳಗಾವಿ 5,580, ಮಂಡ್ಯ 5,010, ಮೈಸೂರು 4,950, ಕೊಪ್ಪಳ 4,882 ಸೇರಿ ಎಲ್ಲ ಜಿಲ್ಲೆಗಳಲ್ಲಿ ದಂಡ ವಿಧಿಸಲಾಗಿದೆ.
ಪೊಲೀಸರು, ಪಾಲಿಕೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಮಾರ್ಷಲ್​ಗಳು ಮಾರುಕಟ್ಟೆ, ಕಲ್ಯಾಣ ಮಂಟಪ, ಹೋಟೆಲ್, ಬಾರ್​ಗಳು, ದೇವಾಲಯಗಳು, ಸಣ್ಣಪುಟ್ಟ ಗಲ್ಲಿಗಳು, ಹಳ್ಳಿಗಳು, ಕೊಳೆಗೇರಿಗಳು, ಪ್ರವಾಸಿ ತಾಣಗಳು ಹಾಗೂ ಶಾಪಿಂಗ್ ಮಾಲ್​ಗಳು, ಜನಸಂದಣಿ ಪ್ರದೇಶಗಳಿಗೆ ಹೋಗುತ್ತಿಲ್ಲ. ಕೇವಲ ರಸ್ತೆಯಲ್ಲಿ ಸಂಚರಿಸುವವರಿಗೆ ದಂಡ ವಿಧಿಸುತ್ತಿದ್ದಾರೆ. ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ದೈಹಿಕ ಅಂತರ ಪಾಲನೆಯಾಗುತ್ತಿದೆ. ಆದರೆ, ಆಟೋಗಳು, ಬಿಎಂಟಿಸಿ ಬಸ್​ಗಳು, ಕಾರುಗಳು, ಕ್ಯಾಬ್ ಸೇರಿ ಬಹುತೇಕ ವಾಹನಗಳಲ್ಲಿ ದೈಹಿಕ ಅಂತರ, ಮಾಸ್ಕ್ ಧರಿಸುವಿಕೆ ನಿಯಮ ಉಲ್ಲಂಘನೆಯಾಗುತ್ತಿದೆ.
ಕರೊನಾ ಸೋಂಕು ಕಾಣಿಸಿಕೊಂಡ ಆರಂಭದ ಮೂರ್ನಾಲ್ಕು ತಿಂಗಳಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಗುತ್ತಿತ್ತು. ಇದಕ್ಕಾಗಿ ಪ್ರತಿ ಪಾಲಿಕೆಗಳು ಮತ್ತು ಪಂಚಾಯಿತಿಗಳು ಔಷಧ ಸಿಂಪಡಣೆ ಕ್ಯಾನ್, ಡ್ರೋನ್​ಗಳು, ಜೆಟ್ಟಿಂಗ್ ಯಂತ್ರ, ಸಿಂಪಡಣೆ ಯಂತ್ರ, ಅಗ್ನಿಶಾಮಕ ದಳದ ವಾಹನ ಹಾಗೂ ಬೃಹತ್ ಗಾತ್ರದ ಸಿಂಪಡಣೆ ವಾಹನ ಖರೀದಿಸಿದವು. ಈಗ ಔಷಧ ಸಿಂಪಡಣೆ ಕಾರ್ಯ ಹಾಗೂ ಯಂತ್ರಗಳು ಮೂಲೆ ಸೇರಿವೆ. ಕೆಲವೇ ವಾರ್ಡ್​ಗಳಿಗೆ ಔಷಧ ಸಿಂಪಡಣೆ ಸೀಮಿತವಾಗಿದೆ. ಬಿಬಿಎಂಪಿಯ ಬೃಹತ್ ಯಂತ್ರಗಳು ಕೆಲಸವಿಲ್ಲದೆ ಪಾಲಿಕೆ ಆವರಣದಲ್ಲಿ ನಿಂತಿವೆ.
ಮಾಸ್ಕ್ ಹಾಕದವರಿಗೆ ದಂಡ ಹಾಕುವುದರಿಂದ ಫಲ ಸಿಗುತ್ತಿಲ್ಲ. ಜನರ ಮನಸ್ಸನ್ನು ನಾವು ಪರಿವರ್ತನೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಅರಿವು ಮೂಡಿಸುವ, ಜಾಗೃತಿ ತರುವುದಕ್ಕೆ ಎಲ್ಲ ರೀತಿಯ ಮಾಧ್ಯಮಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಜನರ ಸಹಕಾರ ಇಲ್ಲದೇ ಏನೂ ಮಾಡಲಾಗದು.
|ಡಾ. ಕೆ. ಸುಧಾಕರ್ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ಕೊಳೆಗೇರಿ, ಒಂದು ಸಮುದಾಯ ಹೆಚ್ಚಿರುವ ಪ್ರದೇಶ, ಧಾರ್ವಿುಕ ಕ್ಷೇತ್ರಗಳಲ್ಲಿ ಕಡ್ಡಾಯ ದೈಹಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವಂತೆ ಧಾರ್ವಿುಕ ಮುಖಂಡರು, ಗಣ್ಯ ವ್ಯಕ್ತಿಗಳು ಹಾಗೂ ರಾಜಕೀಯ ನಾಯಕರ ಸಹಕಾರದಿಂದ ಜನರ ಮನವೊಲಿಕೆ ಮಾಡಲಾಗುವುದು.
|ಎನ್. ಮಂಜುನಾಥ್ ಪ್ರಸಾದ್ಬಿಬಿಎಂಪಿ ಆಯುಕ್ತ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 1 =
Remember me
