ಬೆಂಗಳೂರು: ಕರೊನಾ ಚಿಕಿತ್ಸೆಗೆ ಬಳಸುವ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಹಗರಣ ನಡೆದಿರುವ ಬಗ್ಗೆ ಸೂಕ್ತ ದಾಖಲೆ ನೀಡಿದರೆ ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಡಾ. ಬಾಬು ಜಗಜೀವನರಾಂ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ಇರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿ, ಕರೊನಾ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅವರು ವಿಧಾನಸೌಧದಲ್ಲೇ ಕುಳಿತುಕೊಳ್ಳಲಿ, ನಾನೇ ಅಧಿಕಾರಿಗಳಿಗೆ ಎಲ್ಲ ಕಡತ ನೀಡುವಂತೆ ಸೂಚಿಸುತ್ತೇನೆ. ಆ ಕಡತ ಪರಿಶೀಲಿಸಿ ತಪ್ಪು ಕಂಡುಬಂದರೆ ಹೇಳಲಿ. ಸಿದ್ದರಾಮಯ್ಯ ಸುಖಾಸುಮ್ಮನೇ ಆರೋಪ ಮಾಡುವುದು ಬೇಡ. ದಾಖಲೆಯೊಂದಿಗೆ ಮಾತನಾಡಲಿ ಎಂದರು.
ಕರೊನಾ ಚಿಕಿತ್ಸೆ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಶುಕ್ರವಾರ ಆರೋಪಿಸಿದ್ದರು. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸಹ ಪ್ರತಿಕ್ರಿಯೆ ನೀಡಿ, ದಾಖಲೆ ತಲುಪಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮಾತನಾಡಿದ್ದೇನೆ ಎಂದಿದ್ದರು. ಇನ್ನೊಂದೆಡೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ವಿಚಾರದಲ್ಲಿ ತನಿಖೆ ನಡೆಸಬೇಕೆಂದು ಹಠ ಹಿಡಿದಿದ್ದು, ಆರೋಗ್ಯ ಇಲಾಖೆಯಿಂದ ದಾಖಲೆ ಬಯಸಿದೆ. ಖರೀದಿ ಪೂರ್ವ ಕಡತ ಸೃಷ್ಟಿಯಲ್ಲಿನ ಟಿಪ್ಪಣಿ ನೀಡುವಂತೆ ಕೋರಿತ್ತು. ಆದರೆ, ಇಲಾಖೆ ನಿರಾಕರಿಸಿತ್ತು.
ನಿರಾಣಿ ಅಸಮಾಧಾನವೇ ಕೈ ಅಸ್ತ್ರ:ಆರೋಗ್ಯ ಇಲಾಖೆಯಲ್ಲಿ ಪರಿಕರ ಖರೀದಿ ಕುರಿತು ವಿಧಾನ ಮಂಡಲದ ಜಂಟಿ ಸದನ ಸಮಿತಿ ಸಭೆಯಲ್ಲಿ ಶಾಸಕ ಮುರುಗೇಶ್ ನಿರಾಣಿ ನೀಡಿರುವ ಅಭಿಪ್ರಾಯವೇ ಈಗ ಸರ್ಕಾರವನ್ನು ಹಣಿಯಲು ಕಾಂಗ್ರೆಸ್ ಪಾಲಿನ ದೊಡ್ಡ ಅಸ್ತ್ರ ಎಂದು ಹೇಳಲಾಗುತ್ತಿದೆ. ಸಮಿತಿ ಸದಸ್ಯರೂ ಆಗಿರುವ ನಿರಾಣಿ, ಜೂ.28ರ ಸಭೆಯಲ್ಲಿ ಆರೋಗ್ಯ ಇಲಾಖೆಯಲ್ಲಿನ ಖರೀದಿ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ವಿಜಯಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದರು. ಅವರು ಸುಮಾರು 125 ಪುಟಗಳ ದಾಖಲೆ ಇದ್ದ ಪೆನ್​ಡ್ರೖೆವ್ ತಂದಿದ್ದರು. ಅದನ್ನು ನಾನು ಕಳಿಸಿಕೊಡುತ್ತೇನೆ, ಅದರಲ್ಲಿ ಪಿಪಿಇ ಕಿಟ್ ಬಗ್ಗೆ, ಲೋಕಲ್ ಸ್ಯಾನಿಟೈಸರ್ ಬಗ್ಗೆ, 70-80 ರೂ. ಬೆಲೆ ಬಕೆಟ್ ಅನ್ನು 500 ರೂ. ಬಿಲ್ ಹಾಕಿರುವುದು, 30 ರೂ. ಉಪಕರಣಕ್ಕೆ 3 ಸಾವಿರ ರೂ. ಬಿಲ್ ಹಾಕಿರುವುದು, ಈ ರೀತಿಯದ್ದಕ್ಕೆಲ್ಲ ದಾಖಲೆ ಇವೆ. ಪೆನ್​ಡ್ರೖೆವ್ ನಿಂದ ಡೌನ್ ಲೋಡ್ ಆಗಲಿಲ್ಲ. ಇಲ್ಲವಾದರೆ ದಾಖಲೆಗಳ ಪ್ರಿಂಟ್​ಔಟ್ ಅನ್ನು ನಾನೇ ಸಮಿತಿಗೆ ಸಲ್ಲಿಸುತ್ತಿದ್ದೆ ಎಂದು ಹೇಳಿದ್ದರು. ಇದು ನಡಾವಳಿಯಲ್ಲಿ ದಾಖಲಾಗಿದೆ.
ಹೋರಾಟಕ್ಕೆ ಕಾಂಗ್ರೆಸ್ ತಯಾರಿ:ಕರೊನಾ ಚಿಕಿತ್ಸೆ ಉಪಕರಣ ಖರೀದಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವ ಹಿನ್ನೆಲೆ ದಾಖಲೆಗಳ ಸಂಗ್ರಹಕ್ಕೆ ಕಾಂಗ್ರೆಸ್ ಮುಂದಾಗಿದೆ. ಜತೆಗೆ ರಾಜ್ಯದ ಉದ್ದಗಲಕ್ಕೂ ವಿವಿಧ ರೂಪದಲ್ಲಿ ಹೋರಾಟ ನಡೆಸಲು ಉದ್ದೇಶಿಸಿದೆ. ಸೋಮವಾರ ಮಹತ್ವದ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ಮುಖಂಡರಾದ ರಾಮಲಿಂಗಾರೆಡ್ಡಿ, ರಮೇಶ್ ಕುಮಾರ್ ಅವರಿಗೆ ಜವಾಬ್ದಾರಿ ನೀಡಿದ್ದಾರೆ.
ಯುವ ಕಾಂಗ್ರೆಸ್ ಪ್ರತಿಭಟನೆ:ಇದೇ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಭವನದ ಮುಂಭಾಗ ಜಮಾಯಿಸಿದ್ದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಪಕ್ಷಗಳಿಗೆ ಮಾಡಲು ಬೇರೆ ಕೆಲಸ ಇಲ್ಲ. ಕರೊನಾ ಪರಿಕರಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ವಿಶ್ವಾದ್ಯಂತ ಕರೊನಾ ಮಹಾಮಾರಿ ಇದೆ. ಪ್ರತಿಪಕ್ಷಗಳು ಸಲಹೆ ನೀಡಲಿ, ಅದು ಬಿಟ್ಟು ಸುಳ್ಳು ಆರೋಪ ಮಾಡುತ್ತಿವೆ.
| ಗೋವಿಂದ ಕಾರಜೋಳಉಪಮುಖ್ಯಮಂತ್ರಿ
ನಾಡು ಸಂಕಷ್ಟದಲ್ಲಿದೆ, ಜನ ಸಮಸ್ಯೆಯಲಿದ್ದಾರೆ, ಕರೊನಾವನ್ನು ಗೆಲ್ಲಬೇಕಿದೆ. ಇದು ಕೆಲಸ ಮಾಡುವ ಸಮಯ, ನಾಡಿನ ಜನತೆಗಾಗಿ ಕೆಲಸ ಮಾಡಿ, ಕೆಲಸ ಮಾಡಲು ಬಿಡಿ. ಸಿದ್ದರಾಮಯ್ಯರಿಂದ ಕನಿಷ್ಠ ಮಟ್ಟದ ಸಹಕಾರವನ್ನು ಜನತೆ ಪರವಾಗಿ ಕೇಳುತ್ತೇನೆ.
| ಶ್ರೀರಾಮುಲುಆರೋಗ್ಯ ಸಚಿವ
ಚುನಾವಣೆ ಇನ್ನೂ ದೂರವಿದೆ. ಲೆಕ್ಕ ಕೇಳಲು ಸಾಕಷ್ಟು ಸಮಯ ಕೂಡ ಇದೆ. ಇದು ಸರ್ಕಾರದ ದುಡ್ಡು, ಜನರ ದುಡ್ಡು ಯಾರೂ ತಪ್ಪಿಸಿಕೊಳ್ಳಲಾಗಲ್ಲ. ಲೆಕ್ಕ ಕೇಳಲಿಕ್ಕೆ ಸದನ ಇದೆ. ಅಲ್ಲಿ ಕೇಳಿ.
| ಡಾ.ಸಿ.ಎನ್.ಅಶ್ವತ್ಥ ನಾರಾಯಣಡಿಸಿಎಂ
https://www.vijayavani.net/how-will-corona-pandemic-end-there-are-two-ways/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + five =
Remember me
