| ರಮೇಶ್ ಮೈಸೂರು ಬೆಂಗಳೂರು
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಪ್ರಾದೇಶಿಕ ಭಾಷೆಗಳು ಶಿಕ್ಷಣ ಮಾಧ್ಯಮವಾಗಿ ಹೆಚ್ಚು ಉತ್ತೇಜನ ಪಡೆಯುತ್ತಿವೆ. ಉನ್ನತ ಶಿಕ್ಷಣದಲ್ಲೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಿ ಬೋಧನೆ ಮಾಡಬೇಕೆಂಬ ಸಲಹೆಗಳ ನಡುವೆಯೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸ್ಥಳೀಯ ಭಾಷೆಗಳಲ್ಲಿ ತಾಂತ್ರಿಕಕೋರ್ಸ್ ಆರಂಭಿ ಸಿದೆ. ಉತ್ತರ ಭಾರತದ ಹಲವು ರಾಜ್ಯಗಳು, ಮಹಾ ರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಬೋಧಿಸಲಾಗುತ್ತಿದೆ. ಅಂತೆಯೇ, ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ಉತ್ತೇಜಿಸುವ ಕ್ರಮವಾಗಿ ಇಂಜಿನಿಯರಿಂಗ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಗಳನ್ನು ದ್ವಿಭಾಷೆಗಳಲ್ಲಿ ಒದಗಿಸುವಂತೆ ಸೂಚಿಸಿದೆ. ಇದರನ್ವಯ ಕರ್ನಾಟಕದಲ್ಲಿ ಕನ್ನಡದಲ್ಲೂ ಪ್ರಶ್ನೆಪತ್ರಿಕೆ ಸಿಗಲಿದೆ.
ಸುತ್ತೋಲೆಯಲ್ಲಿ ಏನಿದೆ?:ಎಐಸಿಟಿಇ ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ಪ್ರೋತ್ಸಾಹಿಸುತ್ತಿದೆ. ಇದಕ್ಕಾಗಿ ಪ್ರಾದೇಶಿಕ ಭಾಷೆಗಳಲ್ಲಿ ಕಲಿಯುವವರಿಗಾಗಿ ಹೆಚ್ಚುವರಿ ಪದವಿ, ಡಿಪ್ಲೊಮಾ ಸೀಟುಗಳಿಗೆ ಅನುಮೋದನೆ ನೀಡಿದೆ. ತಮ್ಮ ವಿಷಯ ಜ್ಞಾನವನ್ನು ಪರೀಕ್ಷೆಗಳಲ್ಲಿ ಸಮರ್ಥವಾಗಿ ಮಂಡಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಪ್ರಶ್ನೆಪತ್ರಿಕೆಗಳನ್ನು ದ್ವಿಭಾಷೆಗಳಲ್ಲಿ ನೀಡುವುದು ಅಪೇಕ್ಷಣೀಯವಾಗಿದೆ. ಇದರಲ್ಲಿ ಒಂದು ಭಾಷೆ ಕಡ್ಡಾಯವಾಗಿ ಸ್ಥಳೀಯ ಭಾಷೆಯಾಗಿರತಕ್ಕದ್ದು. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಾಂತ್ರಿಕ ವಿವಿಗಳ ಕುಲಪತಿಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು ಮತ್ತು ಎಐಸಿಟಿಇ ಅನುಮೋದಿತ ಸಂಸ್ಥೆಗಳ ಪ್ರಾಂಶುಪಾಲರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಜತೆಗೆ, ಪರೀಕ್ಷೆಯನ್ನೂ ಪ್ರಾದೇಶಿಕ ಭಾಷೆಗಳಲ್ಲಿಯೇ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಎಐಸಿಟಿಇ ಚಿಂತನೆಗಳೇನು?:ಇಂಗ್ಲಿಷ್​ನಲ್ಲಿ ಪಾವೀಣ್ಯ ಇಲ್ಲದವರನ್ನು ಪ್ರಾದೇಶಿಕ ಭಾಷೆ ಮೂಲಕ ತಲುಪುವುದು ? ವಿದ್ಯಾರ್ಥಿಗಳ ಜ್ಞಾನ, ಕೌಶಲ ಪ್ರದರ್ಶನಕ್ಕೆ ಭಾಷೆ ಅಡ್ಡಿಯಾಗಲ್ಲ ಎಂದು ಸಾರುವುದು ?ಭಾಷಾ ಪ್ರೌಢಿಮೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಸಾಧನೆ ಮೇಲೆ ಪರಿಣಾಮ ಬೀರುತ್ತದೆ ? ವಿಷಯದ ಜ್ಞಾನ ಮುಖ್ಯವೇ ಹೊರತು ಭಾಷಾ ಪಾಂಡಿತ್ಯವಲ್ಲ ಎಂದು ಸಾರುವುದು ?ಭಾರತೀಯ ಭಾಷೆಗಳು ಆಯಾ ವಿದ್ಯಾರ್ಥಿಯ ಸಾಂಸ್ಕೃತಿಕ ಗುರುತೂ ಆಗಿರುತ್ತದೆ ? ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ನಡೆದರೆ ಭಾಷೆ ಸಂರಕ್ಷಿಸುವ ಕಾರ್ಯವೂ ಸಾಧ್ಯ ? ತಮ್ಮದೇ ಭಾಷೆಯಲ್ಲಿ ಪ್ರಶ್ನೆಗಳನ್ನ ಓದಿದರೆ ವಿಷಯ ಸುಲಭವಾಗಿ ಗ್ರಹಿಸಲು ಸಾಧ್ಯ ? ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಿದರೆ ಸಾಕ್ಷರತಾ ಪ್ರಮಾಣ ಹೆಚ್ಚಿಸುವುದು ಸಾಧ್ಯ ? ಶಾಲೆಯಿಂದ ಹೊರಗುಳಿದವರ ಸಂಖ್ಯೆ ಕಡಿಮೆ ಮಾಡುವ ಸರ್ಕಾರದ ಆಶಯಕ್ಕೆ ನೆರವು
ಎಲ್ಲೆಲ್ಲಿ ಕನ್ನಡ?
ಎಐಸಿಟಿಇ ಈ ಹಿಂದೆ ಸ್ಥಳೀಯ ಭಾಷೆಗಳಲ್ಲಿ ಕೋರ್ಸ್ ಆರಂಭಕ್ಕೆ ನಿರ್ದೇಶನ ನೀಡಿತ್ತು. ಹಲವು ರಾಜ್ಯಗಳಲ್ಲಿ ಕೋರ್ಸ್ ಬೋಧಿಸ ಲಾಗುತ್ತಿದೆ. 2 ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹೊರಡಿಸುವುದು ಅಸಾಧ್ಯದ ಸಂಗತಿಯೇನಲ್ಲ.
| ಎಸ್. ವಿದ್ಯಾಶಂಕರ್ ವಿಟಿಯು ಕುಲಪತಿ
Virat Kohli: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
