ಬೆಂಗಳೂರು:ಮೂರು ಸಾವಿರ ಕೋಟಿ ರೂ.ಗಳ ಮುಡಾ ಹಗರಣ, ವಾಲ್ಮೀಕಿ ನಿಗಮದ ಅವ್ಯವಹಾರ ಗುರುವಾರವೂ ಕೋಲಾಹಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಯಿತು. ಮತ್ತೊಂದೆಡೆ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಈ ಹಗರಣಗಳ ವಿಚಾರವನ್ನು ರಾಜಭವನದ ಅಂಗಳಕ್ಕೆ ಹೊತ್ತೊಯ್ದಿರುವ ಬಿಜೆಪಿ, ಜೆಡಿಎಸ್ ನಾಯಕರು ಬೆಂಗಳೂರಿನಿಂದ ಸಿಎಂ ತವರು ಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಕಾರ್ಯತಂತ್ರ ಹಣೆದಿದ್ದಾರೆ. ಕಾಂಗ್ರೆಸ್ ಕೂಡ ಬೆಂಗಳೂರಿನಿಂದ ಮೈಸೂರಿನವರೆಗೆ ಪ್ರತಿ ಪಾದಯಾತ್ರೆ ನಡೆಸಿ ವಿಪಕ್ಷಗಳಿಗೆ ಸೆಡ್ಡು ಹೊಡೆಯುವ ಚಿಂತನೆ ನಡೆಸಿದೆ.
ಮುಡಾ ವಿಚಾರ ಚರ್ಚೆಗೆ ಅವಕಾಶ ಸಿಗದಿದ್ದಕ್ಕೆ ಬುಧವಾರ ಇಡೀ ದಿನ ಪ್ರತಿಭಟನೆ, ಅಹೋರಾತ್ರಿ ಧರಣಿ ನಡೆಸಿ ವಿಧಾನಸೌಧದಲ್ಲೇ ನಿದ್ರೆಗೆ ಶರಣಾಗಿದ್ದ ವಿಪಕ್ಷ ಸದಸ್ಯರು ಗುರುವಾರವೂ ಹೋರಾಟ ಬಿಡಲಿಲ್ಲ. ರಾಜೀನಾಮೆಗೆ ಸಿಎಂ ನಿರಾಕರಿಸಿದ ಪರಿಣಾಮ ಮೈಸೂರಿನವರೆಗೆ ಪಾದಯಾತ್ರೆ ನಡೆಸಿ ಮುಡಾದ ಇಂಚಿಂಚೂ ಅಕ್ರಮವನ್ನು ಜನರ ಎದುರು ತೆರೆದಿಡಲು ದೋಸ್ತಿ ನಾಯಕರು ತೀರ್ವನಿಸಿದ್ದಾರೆ. ಪ್ರತಿಯಾಗಿ ಹಿಂದಿನ ಸರ್ಕಾರದ ಅಕ್ರಮವನ್ನು ಜನತೆ ಮುಂದೆ ಬಿಚ್ಚಿಸುವ ಉದ್ದೇಶದಿಂದ ಕಾಂಗ್ರೆಸ್ ಕೂಡ ಮೈಸೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ಪ್ಲಾ್ಯನ್ ರೂಪಿಸಿದೆ. ಆದರೆ ಕೆಪಿಸಿಸಿ ಹಂತದಲ್ಲಿ ಈ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ತಿಳಿದು ಬಂದಿದೆ.
ಕಲಾಪ ನುಂಗಿದ ಮುಡಾ:ಮುಡಾ ಹಗರಣದಲ್ಲಿ ಸಿಎಂ ಸುತ್ತಲೂ ಅನುಮಾನ ಮೂಡಿರುವುದರಿಂದ ಚರ್ಚೆಗೆ ಅವಕಾಶ ಕೊಡಲೇಬೇಕೆಂದು ಬಿಜೆಪಿ, ಜೆಡಿಎಸ್ ಸತತ ಎರಡನೇ ದಿನವಾದ ಗುರುವಾರವೂ ಪಟ್ಟು ಮುಂದುವರಿಸಿದವು. ಆದರೆ ಚರ್ಚೆಗೆ ಅವಕಾಶದ ಸಿಗದಿದ್ದರಿಂದ ಗದ್ದಲ, ಕೋಲಾಹಲ ಮುಂದುವರಿಯಿತು. ಸಂಪ್ರದಾಯದ ಪ್ರಕಾರ ವಿಧಾನಸಭೆಯಲ್ಲಿ ಅನುಮೋದನೆಗೊಂಡ ವಿಧೇಯಕ ಪರಿಷತ್​ನಲ್ಲಿ ಒಪ್ಪಿಗೆ ಪಡೆದು ಅದರ ಸಂದೇಶ ವಿಧಾನಸಭೆಗೆ ಪುನಃ ಬೇಕಾದ್ದರಿಂದ ಮಧ್ಯಾಹ್ನ ಭೋಜನ ವಿರಾಮಕ್ಕೆಂದು ಕಲಾಪ ಮುಂದೂಡಲ್ಪಟ್ಟಿತು. ಪುನಃ ಒಂದೂವರೆ ತಾಸು ತಡವಾಗಿ ಕಲಾಪ ಆರಂಭವಾದ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸ್ಪೀಕರ್ ಅನುಮತಿ ಪಡೆಯದೇ ಮುಡಾ ಹಗರಣದ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡಲಾರಂಭಿಸಿದರು. ಇದು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿಯವರೇ ನೇರ ಪಾಲುದಾರರು ಎಂದು ಆರೋಪಿಸಿದರಲ್ಲದೇ, ಮುಡಾದಲ್ಲಿ ಇಲಿ, ಹೆಗ್ಗಣ ಸೇರಿಕೊಂಡು ಬದಲಿ ನಿವೇಶನದ ನೆಪದಲ್ಲಿ ಲೂಟಿ ಹೊಡೆಯಲಾಗಿದೆ. ಯಾರ ಕಾಲದಲ್ಲೇ ಅಕ್ರಮವಾಗಿದ್ದರೂ ಎಲ್ಲವೂ ಹೊರಬರಲಿ. ಸಿದ್ದರಾಮಯ್ಯ ಕುಟುಂಬ 14 ನಿವೇಶನ ಪಡೆದುಕೊಂಡಿರುವುದು ಕಾನೂನು ಬಾಹಿರ. ಆ ಸಂದರ್ಭದಲ್ಲಿ ತಮಗಿದ್ದ ಅಧಿಕಾರ ಬಳಸಿಕೊಂಡಿದ್ದಾರೆ. ಡಿನೋಟಿಫಿಕೇಶನ್​ಗೆ ಅರ್ಜಿ ಕೊಟ್ಟವರು ಯಾರು? ಅಷ್ಟೊಂದು ನಿವೇಶನ ಹೇಗೆ ಸಿಕ್ಕಿತು ಎಂಬ ಸತ್ಯ ಜನರಿಗೆ ಗೊತ್ತಾಗಬೇಕು. ಬಡವರಿಗೆ ಸೇರಬೇಕಾಗಿದ್ದ ನಿವೇಶನ ಲೂಟಿ ಹೊಡೆಯಲಾಗಿದೆ ಎಂದು ನೇರ ಆರೋಪ ಮಾಡಿದರು. ಈ ಮಾತುಗಳನ್ನು ನಿಯಂತ್ರಿಸಲಾಗದೆ ಸ್ಪೀಕರ್ ಕಲಾಪವನ್ನು ಪುನಃ ಮುಂದೂಡಬೇಕಾಗಿ ಬಂತು.
ರಾಜ್ಯಪಾಲರಿಗೆ ದೂರು: ವಿಧಾನಮಂಡಲದ ಉಭಯ ಸದನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಬಳಿಕ ಬಿಜೆಪಿ, ಜೆಡಿಎಸ್ ಶಾಸಕರು ರಾಜಭವನಕ್ಕೆ ಪಾದಯಾತ್ರೆ ನಡೆಸಿದರು. ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಕ್ರಮಗಳ ತನಿಖೆ ನಡೆದು ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಬಳಿಕ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಅವರಿಗೆ ದೂರಿತ್ತರು.
2. ಪಾದಯಾತ್ರೆಯಿಂದ ಬೆಂಗಳೂರು- ರಾಮನಗರ- ಮಂಡ್ಯ- ಮೈಸೂರು ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಸಹಜವಾಗಿ ರಾಜಕೀಯವಾಗಿ ಸಂಚಲನ ಉಂಟಾಗಲಿದೆ
3. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್, ಅದರಲ್ಲೂ ರಾಹುಲ್ ಗಾಂಧಿಗೆ ಮುಜುಗರ ಉಂಟುಮಾಡಲು ಸಿಕ್ಕಂತಹ ಅಪರೂಪದ ಅವಕಾಶ ಬಳಕೆ
4. ಜೆಡಿಎಸ್ ಜತೆಗೆ ಕರೆದುಕೊಂಡು ಹೋಗುವುದರಿಂದ ಆ ಪಕ್ಷದ ಬಲವರ್ಧನೆಗೆ ಟಾನಿಕ್ ನೀಡಿದಂತಾಗಲಿದೆ. ಸಹಜವಾಗಿ ಇದರಿಂದ ಸಮಾನ ಎದುರಾಳಿಯ ಬಲ ಕುಗ್ಗಿಸಿದಂತಾಗುತ್ತದೆ
5. ವಾಲ್ಮೀಕಿ, ಮುಡಾ ಹಗರಣಗಳ ವಿಷಯವನ್ನು ಜೀವಂತವಾಗಿಟ್ಟಷ್ಟು ದಿನವೂ ಆಡಳಿತಾರೂಢ ಪಕ್ಷಕ್ಕೆ ಆಡಳಿತ ಯಂತ್ರದ ಮೇಲೆ ಹಿಡಿತ ತಪ್ಪಲಿದೆ, ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ
1 . ಹಗರಣಗಳ ವಿಷಯ ಪ್ರಸ್ತಾಪಿಸಿ ಪಕ್ಷದ ಇಮೇಜ್​ಗೆ ಧಕ್ಕೆ ಮಾಡಲು ಬಿಜೆಪಿ- ಜೆಡಿಎಸ್ ಪ್ರಯತ್ನ ಮಾಡುತ್ತಿವೆ. ಇದಕ್ಕೆ ಪ್ರತಿಯಾಗಿ ಸಮಾವೇಶ ನಡೆಸಿ 2-4 ಲಕ್ಷ ಪುಸ್ತಕ ಹಂಚಲು ಕಾಂಗ್ರೆಸ್ ಯೋಜನೆ
2. ಪಾದಯಾತ್ರೆ ಬರುವ ಮಾರ್ಗದುದ್ದಕ್ಕೂ ಕಾಂಗ್ರೆಸ್ ಶಾಸಕರೇ ಇರುವುದರಿಂದ ಸಾಕಷ್ಟು ಜನರನ್ನು ಸೇರಿಸುವುದಕ್ಕೆ ಅನುಕೂಲ
3. ಮುಡಾದಲ್ಲಿ ಏನೆಲ್ಲ ಆಗಿದೆ, ಬಿಜೆಪಿ-ಜೆಡಿಎಸ್ ನಾಯಕರು ಯಾರೆಲ್ಲ ನಿವೇಶನ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸುವುದು
4. ವಾಲ್ಮೀಕಿ ನಿಗಮದಲ್ಲಿ ಆದ ಬೆಳವಣಿಗೆಯು ಮಾಹಿತಿಯಲ್ಲಿರಲಿದೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಜಿಲ್ಲೆಯಲ್ಲೂ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡುವ ಮೂಲಕ ಪ್ರತಿಪಕ್ಷಗಳ ಲೆಕ್ಕಾಚಾರ ಬುಡಮೇಲು ಮಾಡುವ ಉದ್ದೇಶ
ವಾಲ್ಮೀಕಿ ಹಗರಣ ಎಲ್ಲಿ ತಮ್ಮ ಬುಡಕ್ಕೆ ಬರಲಿದೆಯೋ ಎಂದು ಸಿದ್ದರಾಮಯ್ಯ ಹೆದರಿಕೊಂಡಿದ್ದಾರೆ. ಮುಡಾ ಹಗರಣದ ವಿಚಾರವಾಗಿ ವಿಸõತ ಚರ್ಚೆ ನಡೆಸಿ ವಿಪಕ್ಷಕ್ಕೆ ಸವಾಲು ಹಾಕಲಿದ್ದಾರೆ ಎಂದು ನಿರೀಕ್ಷೆಯಲ್ಲಿದ್ದೆವು. ಆದರೆ ಪಲಾಯನ ಮಾಡಿದ್ದಾರೆ.
| ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ
ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈಗ ನನಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗುತ್ತಿದೆ.
| ಸಿದ್ದರಾಮಯ್ಯ ಸಿಎಂ
ವಾಲ್ಮೀಕಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಮಾಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯುತ್ತಾರೆ. ಬಿಜೆಪಿ ಕಾಲದಲ್ಲಿ ಅಕ್ರಮವಾಗಿ ಮುಡಾ ಸೈಟು ಹಂಚಿಕೆ ಮಾಡಲಾಗಿದೆ. ಈ ನಿವೇಶನಗಳನ್ನು ಬಿಜೆಪಿಯವರೇ ಹಂಚಿಕೆ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇವೆ.
– ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 11 =
Remember me
