ಬೆಂಗಳೂರು:ಶಿವಾಜಿನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಹೆಸರುಗಳನ್ನು ಕೈಬಿಟ್ಟಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಪಟ್ಟಿಯಲ್ಲಿ ಮತದಾರರ ಹೆಸರನ್ನು ಕೈ ಬಿಡಲಾಗಿದೆ ಎಂದು ಶಿವಾಜಿನಗರ ಕ್ಷೇತ್ರದ ಶಾಸಕರು ಹೇಳಿರುವುದು ಕೆಲ ಮಾಧ್ಯಮದಲ್ಲಿ ಪ್ರಕಟವಾಗಿದೆ. ಕ್ಷೇತ್ರದಲ್ಲಿ 91 ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಾಸವಿಲ್ಲದ, ಮರಣ ಹೊಂದಿರುವ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು, ಮನೆಗೆ ಭೇಟಿ ನೀಡಿ ಸ್ಥಳಾಂತರಗೊಂಡ ಮತದಾರರ ಪಟ್ಟಿಯನ್ನು ತಯಾರಿಸಿದ್ದಾರೆ.
ಇದನ್ನೂ ಓದಿ:ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ
ಇಂಥ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತ್ಯೇಕ ಪ್ರಮಾಣಿತ ಕಾರ್ಯಾಚರಣೆಯ ವಿಧಾನ(ಎಸ್‌ಒಪಿ) ಪಾಲಿಸಬೇಕಿದೆ. ಅದರಂತೆ, 9,195 ಸ್ಥಳಾಂತರಗೊಂಡ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಚುನಾವಣಾ ವರ್ಷದ 6 ತಿಂಗಳ ಪೂರ್ವದಲ್ಲಿ ಮತದಾರರ ಪಟ್ಟಿಯಲ್ಲಿ ಯಾವುದೇ ಡಿಲೀಟ್ ಹೆಸರುಗಳನ್ನು ಸ್ವಯಂಪ್ರೇರಿತವಾಗಿ ಸೇರಿಸಲು ಅಧಿಕಾರಿಗಳಿಗೆ ಅವಕಾಶ ಇಲ್ಲ. ಹಾಗಾಗಿ. ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗದ ನಿರ್ದೇಶನಕ್ಕೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಅಲ್ಲದೆ, ಈ ವಿಚಾರ ಕುರಿತು ದೂರುದಾರರೊಬ್ಬರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಿದ 22 ಮತದಾರರ ಕುರಿತು ಪರಿಶೀಲಿಸಲಾಗಿದೆ. ಈ ವೇಳೆ ಮತದಾರರ ಸಾಮಾನ್ಯ ನಿವಾಸಿಗಳು ಎಂಬುದನ್ನು ಖಚಿತ ಪಡಿಸಿಕೊಂಡು ನೀಡಿರುವ ನೋಟೀಸ್‌ಗೆ ಮುಂದಿನ ಪ್ರಕ್ರಿಯೆ ಕೈ ಬಿಡಲಾಗಿದೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ಸಲ್ಲಿಸಲಾಗಿದೆ. ಆದ್ದರಿಂದ, ದೂರಿಗೆ ಸಂಬಂಧ ಈ ಕ್ಷೇತ್ರದ ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ಕೈಬಿಟ್ಟಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
KGF​​ ಬಗ್ಗೆ ಟಾಲಿವುಡ್​ ನಿರ್ದೇಶಕನ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ರಶಾಂತ್​ ನೀಲ್​ ಹಳೇ ವಿಡಿಯೋ ವೈರಲ್​!

ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

ಈ ಒಂದು ಮಾತಿಗೆ ನಡೆದೇ ಹೋಯ್ತು ಘೋರ ದುರಂತ: ಯುವಕನ ಪರಿಚಯವೇ 48ರ ಮಹಿಳೆ ಪ್ರಾಣಕ್ಕೆ ಕುತ್ತಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
