ಬೆಂಗಳೂರು:ನಿಮ್ಮ ವಾಹನದ ನಂಬರ್ ಪ್ಲೇಟ್​ ಮೇಲೆ ನಿಮ್ಮ ಸಂಘ, ಸಂಸ್ಥೆಗಳ ಹೆಸರೋ ಅಥವಾ ಜಾತಿ, ಧರ್ಮದ ಹೆಸರನ್ನೇದಾರೂ ಬರೆಸಿಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ.. ಇಲ್ಲವಾದಲ್ಲಿ ಮುಂದೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗಿ ಬರಬಹುದು.
ಹೌದು! ಉತ್ತರ ಪ್ರದೇಶದಲ್ಲಿ ವಾಹನಗಳ ಮೇಲೆ ಯಾವುದೇ ಜಾತಿ ಹೆಸರನ್ನು ಬರೆಸಿಕೊಳ್ಳುವುದು ಅಪರಾಧ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಓ) ಮಹತ್ತರ ಆದೇಶವೊಂದನ್ನು ಹೊರಡಿಸಿದೆ. ಗಾಡಿಯ ನಂಬರ್​ ಪ್ಲೇಟ್​ ಮೇಲೆ ನೋಂದಣಿ ಸಂಖ್ಯೆ ಬಿಟ್ಟು ಬೇರೆ ಏನೇ ಇದ್ದರು ಅಂತಹ ನಂಬರ್​ ಪ್ಲೇಟ್​ಗಳನ್ನು ತೆರವುಗೊಳಿಸಿ, ಅದರ ಸವಾರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ನಿಮ್ಮ ಗಾಡಿಯ ಮೇಲೆ ಮೋಟಾರು ವಾಹನ ಖಾಯ್ದೆ 50-51ರ ಅನುಗುಣವಾಗಿ ವಾಹನಗಳ ನಂಬರ್ ಇರಬೇಕು. ಅದನ್ನು ಹೊರೆತಾಗಿ ಸಂಘ ಸಂಸ್ಥೆಯ ಹೆಸರೋ, ಹುದ್ದೆಯ ಹೆಸರು, ಇಲಾಖೆಯ ಹೆಸರು ಇನ್ನಿತರ ಬರಹಗಳೇನಾದರೂ ಇದ್ದರೆ ನಿಮ್ಮ ಮೇಲೆ ಆರ್​ಟಿಓ ಕಣ್ಣು ಬೀಳಲಿದೆ. ಮೇ 12ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಈ ರೀತಿಯ ಬರಹಗಳಿರವವರು ಈ ಕೂಡಲೇ ಅದನ್ನು ತೆಗೆಸಿಕೊಳ್ಳಬೇಕೆಂದು ಆರ್​ಟಿಓ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ನೀರು ಕೇಳುವ ನೆಪದಲ್ಲಿ 71 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 17ರ ಯುವಕ

https://www.vijayavani.net/ramesh-jarakiholi-cd-case-a-business-man-from-ramanagar-involved/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
