ಬೆಂಗಳೂರು:ನಾವು ಕರೊನಾ ವೈರಸ್​ ಬಗ್ಗೆ ಹೆದರುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ಇರುವುದೇ ಕರೊನಾ ತಡೆಗೆ ಇರುವ ಸರಿಯಾದ ಅಸ್ತ್ರ ಎಂದು ಆಯುರ್ವೇದ ತಜ್ಞರಾದ ಡಾ. ಗಿರಿಧರ್​ ಕಜೆ ಅವರು ಹೇಳಿದರು.
ಇಂದು ಉತ್ತರಹಳ್ಳಿಯ ಸಾಧನಾ ಕಾಲೇಜು ಶಿಕ್ಷಕರಿಗಾಗಿ ಆಯೋಜಿಸಿದ್ದ ‘ಆಯುರ್ವೇದದ ಮೂಲಕ ಕೊರೋನಾ ತಡೆ’ ರಾಷ್ಟ್ರ ಮಟ್ಟದ ವೆಬಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರೊನಾ ಇತರ ವೈರಾಣುಗಳಷ್ಟು ಪರಿಣಾಮಕಾರಿಯಲ್ಲ. ಊರಿನಲ್ಲಿ ಒಬ್ಬರಿಗೆ ಬಂದರೆ, ಇಡೀ ಊರಿಗೇ ಹರಡುವ ರೋಗಗಳೂ ಈ ಹಿಂದೆ ಬಂದು ಹಗಿವೆ. ಕರೊನಾ ಹಾಗೆಲ್ಲ ಹರಡುವುದಿಲ್ಲ. ಇದು ಹರಡಿದರೂ ಅಷ್ಟು ಪರಿಣಾಮಕಾರಿಯಲ್ಲ ಎಂದು ತಿಳಿಸಿದರು.
ಸೋಂಕು ಬಂದವರಲ್ಲಿ 90% ಜನರಿಗೆ ಗುಣಲಕ್ಷಣಗಳೇ ಇರುವುದಿಲ್ಲ. ಉಳಿದ 10% ಜನರಲ್ಲಿ ಕೆಲವರಿಗೆ ಮಾತ್ರ ಐಸಿಯು, ವೆಂಟಿಲೇಟರ್ ಅಗತ್ಯವಿರುತ್ತದೆ. ಅದರಲ್ಲಿ ಕೆಲವರಿಗೆ ಸಾವು ಸಂಭವಿಸುತ್ತಿದೆ. ಹಾಗಾಗಿ ಹೆದರುವ ಅವಶ್ಯಕತೆ ಇಲ್ಲ ಎಂದೂ ಅವರು ಹೇಳಿದರು.ಇದನ್ನೂ ಓದಿ:ಯೋಗಿ ಆದಿತ್ಯನಾಥ್​ ಅವರ ವೀಕೆಂಡ್​ ಪ್ಲ್ಯಾನ್​ ಯಾರಿಗೂ ಅರ್ಥವಾಗುತ್ತಿಲ್ಲ: ಪ್ರಿಯಾಂಕಾ ಗಾಂಧಿ
ಕೈ ಶುದ್ಧವಾಗಿಟ್ಟುಕೊಳ್ಳುವುದರಿಂದ ನಮಗೂ ಹಿತ, ದೇಶಕ್ಕೂ ಹಿತ. ಅದರಿಂದಾಗಿ ನಾವು ಕರೋನಾಮುಕ್ತರಾಗುತ್ತೇವೆ. ನಾವು ಈಗ ರೋಗನಿರೋಧಕಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಯಾವುದೋ ಔಷಧಿ ತೆಗೆದುಕೊಳ್ಳುವುದಕ್ಕಿಂತ ದಿನನಿತ್ಯ ಸೇವಿಸುವ ನೀರು, ಹಾಲುಗಳ ಮೌಲ್ಯವರ್ಧನೆ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕು. ಮಾಸ್ಕ್ ಧರಿಸಬೇಕು. ಕೈಯಿಂದ ಮುಖ ಮುಟ್ಟಬಾರದು. ಹೊರಗಡೆಯಿಂದ ಬಂದಾಗ ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿ, ತೊಳೆದು, ಸ್ನಾನ ಮಾಡಬೇಕು. ರೋಗ ನಿರೋಧಕ ಶಕ್ತಿ ವರ್ಧಿಸುವ ಆಹಾರ ಸೇವಿಸಬೇಕು. ರೆಫ್ರಿಜರೇಟರ್​, ಎಸಿ ಬಳಕೆ ಸದ್ಯದ ಮಟ್ಟಿಗೆ ಕೈಬಿಡಬೇಕು ಎಂದು ಹೇಳಿದರು.ನಂತರ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಆತ್ಮವಿಶ್ವಾಸ ತುಂಬಿದರು.
ಸಾಧನಾ‌ ಕಾಲೇಜ್ ನ ಪ್ರೊ. ಕೃಷ್ಣಾನಂದ ಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು. ಕಾಲೇಜ್ ಪ್ರಾಂಶುಪಾಲರಾದ ಪ್ರೊ. ಸಿರಾಜ್ ಉರ್ ರಹಮಾನ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಅಜಯ್. ಆರ್. ವಂದಿಸಿದರು. ಪ್ರೊ.ಬದರಿನಾಥ್ ಉಪಸ್ಥಿತರಿದ್ದರು. ಪ್ರೊ.ಮಾಲಾ ಹಿರೇಮಠ್ ಪ್ರಾರ್ಥನೆ ಮಾಡಿದರು.
ವಿದ್ಯಾರ್ಥಿನಿಯನ್ನು ಕೊಲ್ಲಲು ಪ್ರಯತ್ನಿಸಿದ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ; ಈ ಘಟನೆಯೇ ವಿಚಿತ್ರ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 17 =
Remember me
