ವಿಜಯಪುರ:ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಈ ಸರ್ಕಾರ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಟೊಮ್ಯಾಟೋಗಾಗಿ ಸುಮಾರು 500 ಜನರಿಂದ ಬೆಳ್ಳಂ ಬೆಳಿಗ್ಗೆ ಸರದಿ ಸಾಲು..!ರಾಜ್ಯ ಕಾಂಗ್ರೆಸ್ ಸರ್ಕಾರ ಕೆಡುವಲು ವಿದೇಶದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರ, ನಮ್ಮ ಸರ್ಕಾರ ಅಸ್ಥಿರಗೊಳಿಸಲು ಆಗಲ್ಲ. ರಾಜ್ಯದಲ್ಲಿದ್ದುಕೊಂಡೇ ಏನನ್ನೂ ಮಾಡಲಾಗಲ್ಲ. ಇನ್ನು ವಿದೇಶದಲ್ಲಿ ಕುಳಿತು ಅಲ್ಲಾಡಿಸಲು ಆಗುತ್ತಾ ಎಂದು ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. 136 ಸ್ಥಾನಗಳನ್ನು ಪಡೆದು ಭದ್ರವಾಗಿದ್ದು ಜನಪರ ಆಡಳಿತ ನೀಡುತ್ತಿದೆ. ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಈಗಲೂ ನುಡಿದಂತೆ ನಡೆಯುತ್ತೇವೆ. ಐದು ವರ್ಷಗಳ ಕಲ ಸುಭದ್ರ ಆಡಳಿತ ನೀಡಲಿದ್ದೇವೆ ಎಂದಿದ್ದಾರೆ.ಇದನ್ನೂ ಓದಿ:ಕಂಪ್ಯೂಟರ್, ಲ್ಯಾಪ್‌ಟಾಪ್ ಆಮದಿಗೆ ನಿರ್ಬಂಧ: ಆದೇಶ ಮುಂದೂಡಿದ ಕೇಂದ್ರಇನ್ನು ವರ್ಗಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆಯ ಮಾಹಿತಿ ವಿದೇಶದಲ್ಲಿ ಕೊಟ್ಟರಂತಾ? ಸುಮ್ಮನೇ ಪೆನ್‌ಡ್ರೈವ್ ಇಟ್ಟುಕೊಂಡು ತಿರುಗಾಡೋದು…ಪೆನ್‌ಡ್ರೈವ್ ಇಲ್ಲಾ..ಏನೂ ಇಲ್ಲ. ಈ ಹಿಂದೆ ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆಯೇ ಮಾಡಿಲ್ಲವಾ? ತಡೆಯಾಜ್ಞೆ ಆಗಿಲ್ಲವಾ? ಆಡಳಿತದ ದೃಷ್ಟಿಯಿಂದ ವರ್ಗಾವಣೆ ಸಹಜ. ಅದರಲ್ಲಿ ದಂಧೆ ಏನು ಬಂತು ಎಂದು ಎಂ.ಬಿ.ಪಾಟೀಲ್​ ಪ್ರಶ್ನಿಸಿದ್ದಾರೆ.ಬಿಜೆಪಿ ವಿರುದ್ಧ ವಾಗ್ದಾಳಿ:ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಜಾರಿಗೊಳಿಸಿದೆ. ಇನ್ನು ಆರು ತಿಂಗಳಲ್ಲಿ ಯುವ ನಿಧಿ ಕೂಡ ನೀಡಲಿದ್ದೇವೆ. ಈ ಹಿಂದೆ 2013-18ರಲ್ಲಿ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೀಡಿದ್ದ 620ರ ಪೈಕಿ ಕೇವಲ 50-60 ಭರವಸೆ ಮಾತ್ರ ಈಡೇರಿಸಿದೆ. ಇನ್ನು ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ನುಡಿದಂತೆ ನಡೆಯಲಿಲ್ಲ. ಅಚ್ಚೆ ದಿನ್ ಬರಲೇ ಇಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದವರು ಮಾಡಲೇ ಇಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಾಕುವುದಾಗಿ ಹೇಳಿದವರು ಈವರೆಗೂ ಹಾಕಲಿಲ್ಲ ಎಂದು ಸಚಿವರು ಹೇಳಿದ್ದಾರೆ.ಇದನ್ನೂ ಓದಿ:ದೈವ ದರ್ಶನಕ್ಕೆಂದು ಹೊರಟು ನಡುರಸ್ತೆಯಲ್ಲೇ ದೇವರ ಪಾದ ಸೇರಿದ ಐದು ಭಕ್ತರು..ಅಲ್ಲದೇ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ 22 ಸಾವಿರ ಕೋಟಿ ಸಾಲ ಮನ್ನಾ ಮಾಡುವುದರ ಜತೆಗೆ ಪಡಿತರ ಚೀಟಿಯನ್ನು ವಿತರಣೆ, ವೃದ್ಧಾಪ್ಯ ವೇತನ ಸೇರಿದಂತೆ ಅನೇಕ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿತ್ತು ತಿಳಿಸಿದ್ದಾರೆ. ಜತೆಗೆ ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಈ ಹಿಂದಿನ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೀಸಲಾತಿ ಒಡೆದು ಶೇ. 4ರಷ್ಟು ಮೀಸಲಾತಿ ಪೈಕಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿತು. ಆದರೆ, ಅಂಥ ಯಾವುದೇ ಶಿಫಾರಸ್ಸು ಮಾಡಿಲ್ಲವೆಂದು ಹಿಂದುಳಿದ ವರ್ಗದ ಸಚಿವರೇ ಹೇಳಿದ್ದಾರೆ. ತಮ್ಮಲ್ಲಿ ಯಾವುದೇ ಶಿಫಾರಸ್ಸು ಬಂದಿಲ್ಲ ಎಂದಿದ್ದಾರೆ. ಹೀಗಾಗಿ ಇದೊಂದು ಗಿಮಿಕ್ ಅಷ್ಟೆ ಎಂದು ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 17 =
Remember me
