ಬೆಂಗಳೂರು:ದೇಶಕ್ಕಾಗಿ ಗಾಂಧಿ ಕುಟುಂಬ ಮಾಡಿದ ತ್ಯಾಗ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮೂಲಕ ಕಾಂಗ್ರೆಸ್​ ಹೈಕಮಾಂಡ್​ ಅನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಕೊಂಡಾಡಿದರು.
ಇಂದಿರಾ ಗಾಂಧಿ ಭವನದಲ್ಲಿ ನಡೆದ ರಾಜೀವ್​ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಡಿಕೆಶಿ ಮಾತನಾಡಿದರು.
ರಾಜ್ಯದ ಜನತೆ ನಮ್ಮ ‌ಮೇಲೆ ಪ್ರೀತಿ ಇಟ್ಟಿದ್ದಾರೆ. ಕನ್ನಡ ತಾಯಿಗೆ ನಾನು ನಮಸ್ಕಾರ ಅರ್ಪಿಸುತ್ತೇನೆ. ನಾವು ರಾಜೀವ್ ಗಾಂಧಿ ಕಾಲದವರು. ಅವರು ನಮ್ಮ ಜೊತೆ ನೇರವಾಗಿ ಕೂತು ಮಾತನಾಡಿ ಶಕ್ತಿ ತುಂಬಿದರು. ನನ್ನ ಮುಂದೆ ರಾಜೀವ್ ಗಾಂಧಿ ಒಂದು ಮಾತು ಹೇಳಿದ್ದರು. ಪಂಚಾಯಿತಿಯಿಂದ ಪಾರ್ಲಿಮೆಂಟ್​ವರಗೆ ನಾಯಕರು ಸೃಷ್ಟಿ ಆಗಬೇಕು ಎಂದಿದ್ದರು. ಆ ನಿಟ್ಟಿನಲ್ಲಿ ಕಾನೂನು ತಂದರು. 18 ವರ್ಷಕ್ಕೆ ಯುವಕರಿಗೆ ಮತ ಹಾಕುವ ಅವಕಾಶ ಕೊಟ್ಟರು ಎಂದು ಹೇಳಿದರು.
ಇದನ್ನೂ ಓದಿ:ವಿಚಿತ್ರ ಚಿಟ್ಟೆ; ಮಾನವರ ಮುಖದಂತೆ ಕಾಣುವ ಪತಂಗ ದಾವಣಗೆರೆಯಲ್ಲಿ ಪತ್ತೆ
ಅಂದು ಪಾರ್ಲಿಮೆಂಟ್​ನಲ್ಲಿ ರಾಜೀವ್ ಗಾಂಧಿ ಭಾಷಣ ಮಾಡಿದರು. 16 ವರ್ಷಕ್ಕೆ ಮಿಲಿಟರಿ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಬಂದೂಕು ಕೊಟ್ಟು‌ ಅವರನ್ನು ದೇಶ ಕಾಯಲು ನಿಲ್ಲಿಸುತ್ತೇವೆ. ಅಂತಹ ಯುವಕರಿಗೆ ಜನಪ್ರತಿನಿಧಿ ಆಯ್ಕೆ ಮಾಡಬೇಡಿ ಅಂದ್ರೆ ಹೇಗೆ? ಎಂದಿದ್ದರು. ಅಂತಹ ದೊಡ್ಡ ನಾಯಕ ರಾಜೀವ್ ಗಾಂಧಿ. ದೇಶಕ್ಕಾಗಿ ಗಾಂಧಿ ಕುಟುಂಬ ಮಾಡಿದ ತ್ಯಾಗ ಯಾರು ಮಾಡಲು ಸಾಧ್ಯವಿಲ್ಲ ಎಂದರು.
ಮಾಜಿ‌ ಸಿಎಂ ವೀರೇಂದ್ರ ಪಾಟೀಲ್ ಅಧಿಕಾರದಿಂದ ಇಳಿಸಿದ ಪ್ರಸಂಗದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ರಾಜೀವ್ ಗಾಂಧಿ ಮುಂದೆ ಪಾಟೀಲ್ ಆರೋಗ್ಯದ ಬಗ್ಗೆ ಗಮನಕ್ಕೆ ತಂದೆವು. ರಾಜೀವ್ ಗಾಂಧಿ ಅವರು ಪಾಟೀಲ್ ಅವರ ಆರೋಗ್ಯ ವಿಚಾರಿಸಿದರು. ಬೇರೆ ಯಾರನ್ನೂ ಸಿಎಂ ಮಾಡಬೇಕು ಅಂತ ಅ ಕೇಳಿದರು. ನಾನು ಬಂಗಾರಪ್ಪ ಹೆಸರು ಹೇಳಿದೆ. ಬಳಿಕ ಬಂಗಾರಪ್ಪ ಮನೆಗೆ ನಾನೇ ಕರೆದುಕೊಂಡು ಹೋದೆ. ನಾನು ಬಂಗಾರಪ್ಪ ಶಿಷ್ಯ. ಎಸ್.ಎಂ. ಕೃಷ್ಣ ಅವರು ಶಿಷ್ಯ ಅಲ್ಲ. ಬಂಗಾರಪ್ಪ ಅವರ ಮನೆಗೆ ಹೋದಾಗ ಪಾಟೀಲ್ ಕೆಳಗೆ ಇಳಿಸುವ ಬಗ್ಗೆ ಹೇಳಿದ್ದಕ್ಕೆ ಅವರು ಗರಂ ಆದರು. ನಾನು ಪರಿಸ್ಥಿತಿಯ ವಿವರಣೆ ಮಾಡಿದೆ. ನಾನು ಸಿಎಂ ಆದ್ರೆ ನೀನು ಮಂತ್ರಿ ಎಂದು ಅವತ್ತೆ ಬಂಗಾರಪ್ಪ ಹೇಳಿದರು. ಅವತ್ತು ಪಾಟೀಲ್ ಆರೋಗ್ಯ ನೋಡಿ ಸಿಎಂ ಬದಲಾವಣೆ ಆಯ್ತು. ಏರ್ಪೋರ್ಟ್​ನಲ್ಲೆ ಬದಲಾವಣೆ ಮಾಡಿ ಹೋದರು. ಅದು ರಾಜೀವ್ ಗಾಂಧಿ ಗಟ್ಟಿತನದ ನಾಯಕತ್ವ ಎಂದು ಡಿಕೆಶಿ ಕೊಂಡಾಡಿದರು.
ಇದನ್ನೂ ಓದಿ:ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ನಟಿ, ನಿರೂಪಕಿ ಅನಸೂಯ! ಫೋಟೋಗಳು ವೈರಲ್​
ರಾಜೀವ್ ಗಾಂಧಿ ಯುವಕ ಸಂಘ ಮಾಡಿಸಿದ್ದೆ. ಆದರೆ, ಅದು ಮುಂದುವರೆಯಲಿಲ್ಲ. ಆ ನೋವು ನನಗೆ ಈಗಲೂ ಇದೆ. ಮುಂದೆ ಪ್ರತಿ ಪಂಚಾಯತಿಯಲ್ಲಿ ಈ ಸಂಘ ಮಾಡ್ತೇವೆ. ಭಾರತ್ ಜೋಡೋ ಯುವಕ ಸಂಘ ಮಾಡ್ತೇವೆ. ಎಲ್ಲ ಧರ್ಮದವರು ಈ ಸಂಘದಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.(ದಿಗ್ವಿಜಯ ನ್ಯೂಸ್​)
ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಆಕ್ರೋಶ…!

ಕಲಬುರಗಿ | ಸಾವಿಗೆ ಶರಣಾದ ಹೆಡ್​ ಕಾನ್ಸ್​​​​ಸ್ಟೇಬಲ್

ಫೇಸ್​ಬುಕ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ; ಸರ್ಕಾರಿ ಶಾಲಾ ಶಿಕ್ಷಕ ಅಮಾನತ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
