ದಾವಣಗೆರೆ:ತಮ್ಮದೇ ಪಕ್ಷದ ನಾಯಕರ ವಿರುದ್ಧ ಮತ್ತೊಮ್ಮೆ ಗುಡುಗಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಲ್ಲದೆ, ಬಿಜೆಪಿ ಶಿಸ್ತು ಸಮಿತಿ ನೋಟಿಸ್​ಗೆ ಉತ್ತರ ಕೊಡುವುದಿಲ್ಲ ಎಂಬುದಾಗಿಯೂ ಹೇಳಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು ಈ ಸ್ಪಷ್ಟನೆಯನ್ನು ನೀಡಿದ್ದಾರೆ. ನಾನೇನು ಬಿಜೆಪಿ ಪಕ್ಷ ಇಲ್ಲವೇ ಮೋದಿಯವರ ವಿರುದ್ಧ ಮಾತನಾಡಿದ್ದೇನಾ? ನೋಟಿಸ್​​ಗೆ ನಾನೇಕೆ ಉತ್ತರ ಕೊಡಬೇಕು? ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳುತ್ತಾರೆ. ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ಎಂದು ಹೇಳುತ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದೇ ನನಗೆ ಗೊತ್ತಿಲ್ಲ. ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟಿಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ? ನಾನು ಕಾಂಗ್ರೆಸ್​ಗೆ ಹೋಗಲ್ಲ. ಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧ ಇದೆ. ಶಾಮನೂರು ಶಿವಶಂಕರಪ್ಪ ಅವರ ಜೊತೆಯಲ್ಲಿ ಮೈಸೂರಿಗೆ ಫ್ಲೈಟ್​ನಲ್ಲಿ ಒಂದು ಬಾರಿ ಹೋಗಿದ್ದೆ. ಶಾಮನೂರು ಪ್ರೀತಿಯಿಂದ ನನಗೆ ನನ್ನ ಫ್ಲೈಟ್​ನಲ್ಲಿ ಬರುವಂತೆ ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ನಾನು ಪೋನ್ ಮಾಡಿ ಸಮಯ ತೆಗೆದುಕೊಂಡು ಹೋಗಿ ಮಾತನಾಡಿದ್ದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ, ನಾನು ಕಾಂಗ್ರೆಸ್ ಹೋಗಲ್ಲ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ‌‌ ಎಂದಿರುವ ರೇಣುಕಾಚಾರ್ಯ, ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಎಂಬಿಎ ಪದವೀಧರ, ಅಕೌಂಟ್​ನಲ್ಲಿ 20 ಲಕ್ಷ, ಆದ್ರೂ 150 ರೂ. ದಿನಗೂಲಿ ಕೆಲಸ: ಕೊನೆಗೂ ಸಿಕ್ಕಿಬಿದ್ದ ಕೊಲೆಗಾರ ಪ್ರಿಯಕರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
