ದೇವರಾಜ್ ಎಲ್. ಬೆಂಗಳೂರು
ಕರೊನಾ ಮಹಾಮಾರಿ ಈ ವರ್ಷ ಲಕ್ಷಾಂತರ ಪದವೀಧರರ ವೃತ್ತಿಜೀವನ ಅರಳುವ ಮುನ್ನವೇ ಬಾಡುವ ಅಪಾಯ ತಂದೊಡ್ಡಿದೆ. ಆರ್ಥಿಕ ಸಂಕಷ್ಟದಿಂದಾಗಿ ಈಗಾಗಲೇ ಹಲವು ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗಿಗಳ ವೇತನಕ್ಕೆ ಕತ್ತರಿ ಹಾಕುವ ಜತೆಗೆ ಸಾವಿರಾರು ನೌಕರರನ್ನು ಮನೆಗೆ ಕಳುಹಿಸಿದ್ದರೆ, ಕ್ಯಾಂಪಸ್ ಸಂದರ್ಶನ ಮುಗಿಸಿ ಆಫರ್ ಲೆಟರ್ ಕಳುಹಿಸಿದ್ದ ಕೆಲವು ಸಂಸ್ಥೆಗಳು ನೇಮಕಾತಿಗೆ ನಿಗದಿ ಪಡಿಸಿದ್ದ ದಿನಾಂಕವನ್ನು 2-3 ತಿಂಗಳಿಗೆ ಮುಂದೂಡಿವೆ. ಇನ್ನೂ ಕೆಲವೆಡೆ ಆಫರ್ ಲೆಟರ್​ಗಳನ್ನೇ ರದ್ದು ಮಾಡಲಾಗಿದೆ.
ಈ ದಿಢೀರ್ ಆಘಾತ ಈ ವರ್ಷ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಸೇರಿದಂತೆ ಹಲವಾರು ಕೋರ್ಸ್​ಗಳನ್ನು ಮುಗಿಸಿ ಪದವೀಧರರಾಗಿ ಹೊರ ಬರುವ ವಿದ್ಯಾರ್ಥಿಗಳ ಪಾಲಿಗೆ ನಿರುದ್ಯೋಗದ ಆತಂಕ ಕವಿಯುವಂತೆ ಮಾಡಿದೆ. ಪ್ರತಿ ವರ್ಷ ಭಾರತದಲ್ಲಿ 10 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವೀಧರರಾಗಿ ಹೊರಹೊಮ್ಮುತ್ತಾರೆ. ಈ ಪೈಕಿ ಶೇ.50ರಿಂದ 60 ಅಭ್ಯರ್ಥಿಗಳಿಗಷ್ಟೇ ಉದ್ಯೋಗ ಸಿಗುತ್ತಿದೆ. ಈ ವರ್ಷ ಅದಕ್ಕೂ ಕತ್ತರಿ ಬೀಳಲಿದೆ.
ಹೊರಗುತ್ತಿಗೆಗೆ ಸಂಚಕಾರ: ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಬಹುತೇಕ ಸಂಸ್ಥೆಗಳು ವಿದೇಶದ್ದಾಗಿವೆ. ಅಲ್ಲಿನ ಕೆಲಸವನ್ನು ಹೊರಗುತ್ತಿಗೆ ಆಧಾರದ ಮೇಲೆ ಭಾರತೀಯ ನೌಕರರು ನಿರ್ವಹಿಸುತ್ತಿದ್ದಾರೆ. ಇದೀಗ ಕರೊನಾಘಾತ ತಟ್ಟಿರುವ ಪರಿಣಾಮ ಆ ವಿದೇಶಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಭಾರತೀಯರಿಗೆ ಹೊರಗುತ್ತಿಗೆ ಕೆಲಸ ರದ್ದು ಮಾಡಿ ಸ್ಥಳೀಯರಿಗೇ ನೀಡುವ ಸಾಧ್ಯತೆ ಇದೆ. ಹೀಗಾದಲ್ಲಿ ಮತ್ತಷ್ಟು ಸಂಕಷ್ಟ ತಟ್ಟಲಿದೆ.
ದೇಶದ ಪ್ಲೇಸ್​ವೆುಂಟ್ ಸ್ಥಿತಿಗತಿ
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ನ 2018-19ರ ಮಾಹಿತಿ ಪ್ರಕಾರ ದೇಶದಲ್ಲಿ ಯುಜಿ., ಪಿ.ಜಿ, ಡಿಪ್ಲೊಮಾ ಸೇರಿ 10,426 ಕಾಲೇಜುಗಳಿವೆ. ಒಟ್ಟು 33.92 ಲಕ್ಷ ತಾಂತ್ರಿಕ ಕೋರ್ಸ್ ಗಳ ಇನ್​ಟೇಕ್ ಇದ್ದು, 18.40 ಲಕ್ಷ ನೋಂದಣಿಯಾಗಿದ್ದಾರೆ. 7.65 ಲಕ್ಷ ವಿದ್ಯಾರ್ಥಿಗಳಿಗೆ ಪ್ಲೇಸ್​ವೆುಂಟ್ ಸಿಕ್ಕಿದೆ. ಕರ್ನಾಟಕದ ಮಾಹಿತಿ ನೋಡಿದಾಗ 751 ತಾಂತ್ರಿಕ ಕೋರ್ಸ್ ಬೋಧನೆ ಮಾಡುವ ಕಾಲೇಜು ಇವೆ. 2.55 ಲಕ್ಷ ಇನ್​ಟೇಕ್ ಇದ್ದು, 1.58 ಲಕ್ಷ ಅಭ್ಯರ್ಥಿಗಲೂ ನೋಂದಣಿ ಅಗಿದ್ದಾರೆ. 55 ಸಾವಿರ ವಿದ್ಯಾರ್ಥಿಗಳಿಗೆ ಪ್ಲೇಸ್​ವೆುಂಟ್ ಸಿಕ್ಕಿದೆ. ಸರಾಸರಿ ಶೇ.30-35 ಪ್ಲೇಸ್​ವೆುಂಟ್ ದೊರೆಯುತ್ತಿರುವುದು ದೃಢವಾಗಿದೆ.
ಉದ್ಯೋಗ ಸದ್ಯಕ್ಕೆ ಅಸಾಧ್ಯ
ಇಂಜಿನಿಯರಿಂಗ್ ಕೋರ್ಸ್​ಗಳಿಗೆ 7ನೇ ಸೆಮಿಸ್ಟರ್​ನಲ್ಲಿರುವಾಗಲೇ ಶೇ.50ರಿಂದ 60 ಭಾಗ ಕ್ಯಾಂಪಸ್ ಸಂದರ್ಶನ ಮುಗಿದು ಹೋಗುತ್ತದೆ. ಈ ರೀತಿ ಆಯ್ಕೆಯಾದವರಿಗೆ ಕಂಪನಿ ಆಫರ್ ಲೆಟರ್ ನೀಡಿರುತ್ತವೆ. ಉಳಿದವರಿಗೆ 2ನೇ ಸುತ್ತಿನಲ್ಲಿ ಅಂದರೆ ಅಂತಿಮ ವರ್ಷದ ಫಲಿತಾಂಶ ಬಂದ ಮೇಲೆ ಮತ್ತೊಮ್ಮೆ ಸಂದರ್ಶನ ನಡೆಸುವ ಆಲೋಚನೆಯಲ್ಲಿ ಕೆಲವು ಕಂಪನಿಗಳಿದ್ದವು. ಆದರೆ, ಲಾಕ್​ಡೌನ್ ಮುಂದುವರಿದಿರುವುದರಿಂದ ಪ್ಲೇಸ್​ವೆುಂಟ್ ಸಾಧ್ಯವಿಲ್ಲವೆಂಬುದನ್ನು ಕಾಲೇಜುಗಳ ಗಮನಕ್ಕೆ ತಂದಿವೆ.
ಕಡಿಮೆ ವೇತನದ ಆಫರ್
ಬಹುತೇಕ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಆಸೆಯಿಂದಲೇ ಖಾಸಗಿ ಕಾಲೇಜುಗಳಿಗೆ ಹೆಚ್ಚಿನ ಪ್ರವೇಶ ಶುಲ್ಕ ಕೊಟ್ಟು ಸೇರುತ್ತಾರೆ. ಆದರೆ ಇದೀಗ ಇಂತಹ ಕಾಲೇಜುಗಳಲ್ಲೂ ಪ್ಲೇಸ್​ವೆುಂಟ್ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿ ವರ್ಷ 100ಕ್ಕೂ ಹೆಚ್ಚಿನ ಕಂಪನಿಗಳು ಖಾಸಗಿ ವಿವಿಗಳಿಗೆ ಭೇಟಿ ನೀಡಿ ಕ್ಯಾಂಪಸ್ ಸಂದರ್ಶನ ನಡೆಸುತ್ತವೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಕಡಿಮೆ ಪ್ಯಾಕೇಜ್ ಆಫರ್ ನೀಡುತ್ತಾರೆ. ವಿಧಿ ಇಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು.
10,00,000
ಪ್ರತಿವರ್ಷ ದೇಶದಲ್ಲಿ ಹೊರಹೊಮ್ಮುವ ಇಂಜಿನಿಯರಿಂಗ್ ಪದವೀಧರರು
70,000
ರಾಜ್ಯದ ಅಂತಿಮ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಖ್ಯೆ
303
ರಾಜ್ಯದಲ್ಲಿರುವ ಪಾಲಿಟೆಕ್ನಿಕ್​ಗಳು
252
ಇಂಜಿನಿಯರಿಂಗ್ ಕಾಲೇಜುಗಳು
751
ಪದವಿ ಕಾಲೇಜುಗಳು
ಕರೊನಾ ರೋಗಿಗಳನ್ನು ಗುಣಪಡಿಸಿದ ವೈದ್ಯೆಗೆ ತಮ್ಮ ರಕ್ಷಣೆ ಸಾಧ್ಯವಾಗಲಿಲ್ವಾ?: ವೈರಲ್​ ಸುದ್ದಿಯ ಸತ್ಯಾಂಶ ನಿಜಕ್ಕೂ ಅಚ್ಚರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
