| ಶ್ರವಣ್ ಕುಮಾರ್ ನಾಳ ಮಂಗಳೂರುಹಿಂದು ಧಾರ್ವಿುಕ ಹಾಗೂ ಧರ್ವದಾಯ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ನೋಂದಾಯಿತ 34,563 ದೇವಸ್ಥಾನಗಳ ಪೈಕಿ ಸಿ ಗ್ರೇಡ್​ನ ಬಹಳಷ್ಟು ದೇವಾಲಯಗಳ ಆಸ್ತಿ ಪರರ ಪಾಲಾಗಿದೆ. ಆಸ್ತಿ ರಕ್ಷಣೆ ಹಾಗೂ ನೋಂದಣಿಗೆ ನಾಲ್ಕು ವರ್ಷದ ಹಿಂದೆ ಸರ್ವೆ ಆದೇಶ ನೀಡಲಾಗಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. 2003ಕ್ಕೂ ಮುನ್ನ ರಾಜ್ಯದಲ್ಲಿ ಧಾರ್ವಿುಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಧಾರ್ವಿುಕ ಸಂಸ್ಥೆಗಳ ಆಡಳಿತ ನಿರ್ವಹಣೆಯನ್ನು ಐದು ವಿವಿಧ ಕಾಯ್ದೆಗಳ ಅನ್ವಯ ನಿರ್ವಹಿಸಲಾಗುತ್ತಿತ್ತು. ಮೈಸೂರು ಮತೀಯ ಮತ್ತು ಧಮಾರ್ಥ ಸಂಸ್ಥೆಗಳ ಅಧಿನಿಯಮ 1927, ಬಾಂಬೆ ಸಾರ್ವಜನಿಕ ಜಿಮ್ಮೆಗಳ ಕಾಯ್ದೆ 1950, ಹೈದರಾಬಾದ್ ಎಂಡೋಮೆಂಟ್ ರೆಗ್ಯುಲೇಷನ್ಸ್ ಫಸಲಿ 1349, ಮದ್ರಾಸ್ ಹಿಂದು ಧಾರ್ವಿುಕ ಮತ್ತು ದತ್ತಿ ಉಂಬಳಿ ಕಾಯ್ದೆ 1951, ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಅಧಿನಿಯಮವನ್ನು (1956) ಪಾಲಿಸಲಾಗುತ್ತಿತ್ತು.
ಆಡಳಿತದಲ್ಲಿ ಏಕರೂಪ ಹಾಗೂ ಸಮರ್ಪಕ ನಿರ್ವಹಣೆ ಜಾರಿಗೆ ತರಲು ಕರ್ನಾಟಕ ಹಿಂದು ಧಾರ್ವಿುಕ ಸಂಸ್ಥೆಗಳು ಮತ್ತು ಧರ್ವದಾಯ ದತ್ತಿಗಳ ಅಧಿನಿಯಮ 1997 ಜಾರಿಗೆ ತರಲಾಯಿತು. 2011 ಹಾಗೂ 2012ರಲ್ಲಿ ಇದನ್ನು ತಿದ್ದುಪಡಿ ಮಾಡಲಾಗಿತ್ತು. ಆ ವೇಳೆಗಾಗಲೇ ರಾಜ್ಯದ ಬಹುತೇಕ ಎ ಗ್ರೇಡ್ ಹಾಗೂ ಬಿ ಗ್ರೇಡ್ ದೇವಾಲಯಗಳ ಆಸ್ತಿ ರಕ್ಷಣೆ, ಸರ್ವೆ ಕಾರ್ಯ ಪೂರ್ಣಗೊಳಿಸಿದ್ದರೂ ಸಿ ಗ್ರೇಡ್ ದೇವಾಲಯಗಳ ಆಸ್ತಿ ರಕ್ಷಣೆಗೆ ಕ್ರಮ ಕೈಗೊಂಡಿರಲಿಲ್ಲ.
ಪ್ರಸ್ತುತ ರಾಜ್ಯದಲ್ಲಿ 201 ಎ ಗ್ರೇಡ್, 139 ಬಿ ಗ್ರೇಡ್, 34,223 ಸಿ ಗ್ರೇಡ್ ಧಾರ್ವಿುಕ ಸಂಸ್ಥೆ, ದೇವಾಲಯಗಳಿವೆ. ಎ ಹಾಗೂ ಬಿ ಗ್ರೇಡ್ ಧಾರ್ವಿುಕ ಸಂಸ್ಥೆ, ದೇವಾಲಯಗಳು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಸುಪರ್ದಿಯಲ್ಲಿ ಆಡಳಿತಾಧಿಕಾರಿ ಮೂಲಕ ನಿರ್ವಹಣೆಯಾಗುತ್ತಿವೆ. ಸಿ ಗ್ರೇಡ್ ದೇವಾಲಯಗಳು ಸರ್ಕಾರದ ನಿರ್ದೇಶನದಂತೆ ವ್ಯವಸ್ಥಾಪನಾ ಸಮಿತಿಯ ಮೂಲಕ ನಡೆಸಲ್ಪಡುತ್ತವೆ. ಲಭ್ಯ ಮಾಹಿತಿ ಪ್ರಕಾರ ರಾಜ್ಯದ 5,730 ಪುರಾತನ ದೇವಾಲಯಗಳಿಗೆ ಪಹಣಿಯೇ ಇಲ್ಲ. ಈ ದೇವಾಲಯಗಳು ಇನ್ನೂ ಕಂದಾಯ ಇಲಾಖೆಯ ಭೂಮಿಯಲ್ಲೇ ಇವೆ. ಈ ದೇವಾಲಯಕ್ಕೆ ಸಂಬಂಧಿಸಿದ ಜಾಗವು 94ಸಿ, ಅಕ್ರಮ ಸಕ್ರಮದ ಮೂಲಕ, ಹಿಂದು ಹಾಗೂ ಹಿಂದುಯೇತರರಿಂದ ಒತ್ತುವರಿಯಾಗಿವೆ. 22,335 ದೇವಾಲಯಗಳ ಮೂಲ ಹೆಸರು ಪಹಣಿಯಲ್ಲಿ ದಾಖಲಾಗದೆ ಅಸ್ಪಷ್ಟ ರೀತಿಯಲ್ಲಿದ್ದು, ದೇವಾಲಯದ ಗರ್ಭಗುಡಿ ಹಾಗೂ ಪ್ರಾಂಗಣವನ್ನು ಮಾತ್ರ ಪಹಣಿಯಲ್ಲಿ ಸೂಚಿಸಲಾಗಿದೆ. ಉಳಿದ ಜಾಗ ಕಂದಾಯ, ಸರ್ಕಾರಿ ಎಂದು ಪಹಣಿಯಲ್ಲಿದೆ. ಈ ಕಂದಾಯ, ಸರ್ಕಾರಿ ಭೂಮಿಯನ್ನೂ ಅತಿಕ್ರಮಿಸಿ 94ಸಿ, ಅಕ್ರಮ ಸಕ್ರಮಕ್ಕೂ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿಗಳು ವಿಲೇಗೆ ಬಾಕಿಯಿವೆ. 3,327 ದೇವಾಲಯಗಳ ಭೂಮಿ ಕೋರ್ಟ್ ವ್ಯಾಜ್ಯದಲ್ಲಿದೆ.
ಸರ್ವೆಗೆ ಅಧಿಕಾರಿಗಳ ನಿರಾಸಕ್ತಿ:ಬಹುತೇಕ ಕಡೆ ದೇವಾಲಯದ ಆಸ್ತಿ ಅತಿಕ್ರಮಣ, ಪರರ ಪಾಲಾಗಿರುವುದು ನಾಲ್ಕು ವರ್ಷದ ಹಿಂದೆ ಧಾರ್ವಿುಕ ಪರಿಷತ್, ಸರ್ಕಾರದ ಗಮನಕ್ಕೆ ಬಂದಿದ್ದು, ಸರ್ಕಾರವು ರಾಜ್ಯದ ಎಲ್ಲ ದೇವಾಲಯಗಳ ಆಸ್ತಿ ಸರ್ವೆಗೆ ಆದೇಶ ನೀಡಿತ್ತು. ಸರ್ವೆಗೆ 7,345 ಸಾವಿರ ಸರ್ವೆಯರ್ ಅಗತ್ಯವಿದ್ದು, ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಲು ನಿರ್ದೇಶಿಸಲಾಗಿತ್ತು. ಆದರೆ, ಕಂದಾಯ ಇಲಾಖೆಯಲ್ಲೇ ಸರ್ವೆಯರ್​ಗಳ ಕೊರತೆಯಿದ್ದುದರಿಂದ ಇದುವರೆಗೆ ದೇವಾಲಯಗಳ ಆಸ್ತಿ ಸರ್ವೆಗೆ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ.
ಸಲ್ಲಿಕೆಯಾಗದ ಫೊಟೋ ಕ್ಯಾಟಲಾಗ್:ಹಲವು ದೇವಾಲಯಗಳಲ್ಲಿ ದೇವರ ಆಸ್ತಿಯಾಗಿರುವ ಪುರಾತನ ಕಾಲದ ಚಿನ್ನಾಭರಣಗಳಿದ್ದು, ಅದರ ವಿವರ ಹಾಗೂ ಮೌಲ್ಯಗಳನ್ನು ದಾಖಲೀಕರಣಗೊಳಿಸುವುದು ಮುಖ್ಯ. ಇದರ ಮೊದಲ ಹಂತವಾಗಿ ಎ ಹಾಗೂ ಬಿ ಗ್ರೇಡ್ ದೇವಾಲಯಗಳಲ್ಲಿನ ದೇವರ ಆಭರಣಗಳ ಬಗ್ಗೆ ಫೊಟೋ ಕ್ಯಾಟಲಾಗ್ (ಆಲ್ಬಂ) ಸಹಿತ ಮೌಲ್ಯಮಾಪನ ದಾಖಲಾತಿ ಮಾಡುವಂತೆ ಸೂಚನೆಯಿದ್ದು, ಇವುಗಳಲ್ಲಿ ಕೆಲ ದೇವಾಲಯಗಳ ಫೊಟೋಕ್ಯಾಟಲಾಗ್ ಮಾತ್ರ ಇಲಾಖೆಗೆ ಸಲ್ಲಿಕೆಯಾಗಿದೆ.
ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + one =
Remember me
