ಹಾಸನ:ವಿಶ್ವಪ್ರಸಿದ್ದ ಬೇಲೂರು ಚೆನ್ನಕೇಶವ ದೇವಾಲಯ ರಥೋತ್ಸವ ವೇಳೆ ಥೇರಿನ ಮುಂದೆ ಕುರಾನ್ ಪಠಣ ವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ. ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಿಂದ ಆದೇಶ ಹೊರಬಿದ್ದಿದ್ದು, ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.
ಇಂದು ಬೆಳಗ್ಗೆ 10 ಗಂಟೆಗೆ ಚೆನ್ನಕೇಶವ ರಥೋತ್ಸವ ನಡೆಯಲಿದೆ. ಈ ವೇಳೆ ಥೇರಿನ ಮುಂದೆ ಕುರಾನ್​ ಪಠಣ ಮಾಡುವಂತಿಲ್ಲ. ಮೇದೂರು ಖಾಜಿಸಾಹೇಬರು ಬಂದು ಗೌರವವನ್ನು ಮಾತ್ರ ಸ್ವೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಯಾರು ಹಿತವರು ನಿನಗೆ?; ಹೊಂದಾಣಿಕೆಗೆ ಪ್ರಾಶಸ್ತ್ಯವಿಲ್ಲದ ಬದುಕು ಬದುಕಲ್ಲ
ಕುರಾನ್ ಪಠಣ ನಂತರವೇ ಚೆನ್ನಕೇಶವ ಥೇರು ಎಳೆಯುವ ಪದ್ದತಿ ಕೆಲ ವರ್ಷಗಳಿಂದ ರೂಢಿಯಲ್ಲಿತ್ತು. ಆದರೆ, ಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಅಂತ ಹಿಂದೂ ಪರ ಸಂಘಟನೆಗಳು ಪ್ರತಿಭಟಿಸಿದ್ದರು. ಹೀಗಾಗಿ ಧಾರ್ಮಿಕ ದತ್ತಿ ಆಯುಕ್ತರು ಆಗಮ ಪಂಡಿತರನ್ನು ಕಳಿಸಿ ಪರಿಶೀಲನೆ ಮಾಡಿ ವರದಿ ಪಡೆದಿದ್ದರು.
ರಥದ ಮುಂದೆ ಕುರಾನ್ ಪಠಣ ಅವಕಾಶ ಇದೆ ಅಂತ ದೇವಾಲಯದ ಕೈಪಿಡಿಯಲ್ಲಿ ಇಲ್ಲ. ಖಾಜಿ ಸಾಹೇಬರು ದೇವಾಲಯಕ್ಕೆ ಬಂದು ದೇವರಿಗೆ ವಂದನೆ ಮಾಡಿ, ದವಸ ಮತ್ತು ಧನ ರೂಪದಲ್ಲಿ ಗೌರವ ಸ್ವೀಕರಿಸುವುದು ಎಂದು ದೇವಾಲಯದ ಕೈಪಿಡಿಯಲ್ಲಿದೆ ಎಂದು ಧಾರ್ಮಿಕ ದತ್ತಿ ಆಯುಕ್ತರು ಆದೇಶ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)
ಸಿಹಿತಿಂಡಿ ಜತೆಗೆ 500 ರೂ. ನೋಟುಗಳನ್ನು ಬಡಿಸಿದ ಅಂಬಾನಿ ಕುಟುಂಬ! ಇಲ್ಲಿದೆ ನೋಟಿನ ಅಸಲಿಯತ್ತು​

ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ಸದ್ಯದಲ್ಲೇ ಬಿಡುಗಡೆ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
