ಬೆಂಗಳೂರು:ಸಿಇಟಿ-2024ರ ಪರೀಕ್ಷೆಯಲ್ಲಿ ಪಠ್ಯಕ್ರಮ ಹೊರತಾದ 50 ಪ್ರಶ್ನೆಗಳಿದ್ದು, ಈ ಎಲ್ಲ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಬೇಕು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸದೆ ತಪ್ಪಾದ 2 ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ನೇಮಿಸಿದ್ದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶ್ರೀಕರ್ ಈ ವಿಷಯ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏ.18, 19ರಂದು ನಡೆಸಿದ್ದ ಸಿಇಟಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆ ನೇಮಿಸಿದ್ದ 4 ಸಮಿತಿಗಳು ಸರ್ಕಾರಕ್ಕೆ ವರದಿ ನೀಡಿವೆ. ಸಿಇಟಿಯನ್ನು 3.49 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಹಲವು ಪ್ರಶ್ನೆಗಳು ಪಠ್ಯಕ್ರಮ ಹೊರತಾಗಿವೆ ಎಂಬ ಆರೋಪ ಮಾಡಿದ್ದವು.
ಸಮಿತಿ ಶಿಫಾರಸು:
2023-24ನೇ ಸಾಲಿನ ಪಠ್ಯಕ್ರಮದಿಂದ ಹೊರಗಿರುವ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ತೆಗೆದು ಹಾಕಬೇಕು ? ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡಬೇಕು ? ಜೀವಶಾಸ್ತ್ರದಲ್ಲಿ 11, ಭೌತಶಾಸ್ತ್ರ-9, ಗಣಿತ-15 ಪ್ರಶ್ನೆ ತೆಗೆದುಹಾಕಬೇಕು ? ರಸಾಯನಶಾಸ್ತ್ರದಲ್ಲಿ 15 ಸೇರಿ ಒಟ್ಟು 50 ಪ್ರಶ್ನೆ ಮೌಲ್ಯಮಾಪನದಿಂದ ಬಿಡಬೇಕು ? ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡಬೇಕು ? ಪ್ರಶ್ನೆಪತ್ರಿಕೆಯಲ್ಲಿ ತಪ್ಪಾದ 2 ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು ? ತೆಗೆದುಹಾಕಲಾದ ಪ್ರಶ್ನೆ , ಕೀ ಉತ್ತರಗಳನ್ನು ಕೆಇಎ ವೆಬ್​ಸೈಟ್ ಪ್ರಕಟಿಸಬೇಕು. ಕೃಪಾಂಕ ನೀಡಬೇಕು ಮತ್ತು ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಫಲಿತಾಂಶದ ವೇಳೆ ಕೈಬಿಡಬೇಕು ಎಂದು ಒತ್ತಾಯಿಸಲಾಗಿತ್ತು ಈ ಬಗ್ಗೆ ವಿಜಯವಾಣಿ ವಿವರವಾದ ಸರಣಿ ವರದಿ ಪ್ರಕಟಿಸಿತ್ತು.
ಒಟ್ಟು 4 ವಿಷಯಗಳಿಗೆ ತಲಾ 60 ಅಂಕಗಳ ಪರೀಕ್ಷೆ ನಡೆಸಲಾಗಿತ್ತು. ಅದರಂತೆ 2022-23 ಮತ್ತು 2023-24ರಲ್ಲಿ ಕೈಬಿಡಲಾದ ಪಠ್ಯಕ್ರಮಗಳಿಂದ ಜೀವಶಾಸ್ತ್ರದಲ್ಲಿ 11, ಭೌತಶಾಸ್ತ್ರ-9, ಗಣಿತ ಮತ್ತು ರಸಾಯನಶಾಸ್ತ್ರದಲ್ಲಿ ತಲಾ 15 ಸೇರಿ ಒಟ್ಟು 50 ಪ್ರಶ್ನೆಗಳು ಪಠ್ಯಕ್ರಮ ಹೊರತಾದ ಪ್ರಶ್ನೆಗಳಿವೆ. ಆದರೆ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಕಲಿತ ಹಲವು ಪ್ರಶ್ನೆಗಳಿವೆ. ಇವುಗಳನ್ನು ಪ್ರಶ್ನೆಪತ್ರಿಕೆಗಳಿಂದ ತೆಗೆದು ಹಾಕುವ (ಡಿಲೀಟ್) ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಮರು ಪರೀಕ್ಷೆ ಹೊರೆ:ಮೇ ಮತ್ತು ಜೂನ್​ನಲ್ಲಿ ಜೆಇಇ ಅಡ್ವಾನ್ಸ್​ಡ್, ನೀಟ್, ನೆಟ್, ಸಿಯುಇಟಿ ಮತ್ತು ದ್ವಿತೀಯ ಪಿಯುಸಿ 2 ಮತ್ತು 3ನೇ ಪರೀಕ್ಷೆ ಸೇರಿ ಹಲವು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಿದೆ. ಈ ಹಂತದಲ್ಲಿ ಮರು ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ ಹಾಗೂ ಭಾರಿ ಹೊರೆಯಾಗಲಿದೆ. ಜತೆಗೆ, ವಿದ್ಯಾರ್ಥಿಗಳಿಗೆ ಅನಗತ್ಯ ಗಾಬರಿ ಮತ್ತು ಕಿರುಕುಳವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳ ತಮ್ಮದಲ್ಲದ ತಪ್ಪಿಗೆ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಮರು ಪರೀಕ್ಷೆಯನ್ನು ನಡೆಸುವುದರಿಂದ ವೃತ್ತಿಪರ ಕೋರ್ಸ್​ಗಳ ಶೈಕ್ಷಣಿಕ ವೇಳಾಪಟ್ಟಿ ಕೂಡ ವಿಳಂಬವಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಇಟಿ ಫಲಿತಾಂಶವನ್ನು ಮೇ ಅಂತ್ಯದೊಳಗೆ ಪ್ರಕಟಿಸುವಂತೆ ಸೂಚಿಸಿದೆ.
ಕೆಇಎಗೆ 4000 ಆಕ್ಷೇಪಣೆ:ಇಂಜಿನಿಯರಿಂಗ್ ಸೇರಿ ಹಲವು ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಏ.18 ಮತ್ತು 19ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಅಂದಾಜು 4,000 ಆಕ್ಷೇಪಣೆ ಸಲಿಕೆಯಾಗಿವೆ. ಆಕ್ಷೇಪಣೆ ಸಲ್ಲಿಕೆಗೆ ಏ. 27 ಕೊನೆಯ ದಿನವಾಗಿತ್ತು.
ಕೆಇಎ ಪ್ರತಿ ವಿಷಯದಲ್ಲಿ ಒಟ್ಟು 60 ಅಂಕಗಳಿಗೆ ಪರೀಕ್ಷೆ ನಡೆಸಿದ್ದು, ಕೆಲವು ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲೂ ಪಠ್ಯಕ್ರಮದ ಹೊರತಾದ ಪ್ರಶ್ನೆಗಳಿವೆ ಎಂದು ಆಕ್ಷೇಪಿಸಿದರೆ, ಕೆಲವು ವಿದ್ಯಾರ್ಥಿಗಳು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳು ಹೊರಗಿನವು ಎಂದು ಆಕ್ಷೇಪಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಆಕ್ಷೇಪಣೆಯಲ್ಲಿ ಹೆಸರು, ನೋಂದಣಿ ಸಂಖ್ಯೆ ಮತ್ತಿತರ ಮಾಹಿತಿಯನ್ನು ತಪ್ಪಾಗಿ ನಮೂದಿಸಿರುವುದು ತಿಳಿದು ಬಂದಿದೆ. ಎಲ್ಲ ಆಕ್ಷೇಪಣೆಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಬಳಿಕ ಕೆಇಎ 1500 ಆಕ್ಷೇಪಣೆಗಳನ್ನು ಪರಿಗಣಿಸಿದೆ. ಈ ಕುರಿತು ಸೋಮವಾರ (ಏ.30) ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಲಿದೆ.
ನನಗಂತೂ ಇದು ಸರಿ ಅನಿಸಲಿಲ್ಲ! ದೆಹಲಿ ಏರ್​ಪೋರ್ಟ್​ನ ಪಾಸ್​ಪೋರ್ಟ್​ ಅಧಿಕಾರಿ ವಿರುದ್ಧ ರಷ್ಯನ್​ ಚೆಲುವೆ ಕಿಡಿ

ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 − two =
Remember me
