|ವಿಲಾಸ ಮೇಲಗಿರಿಬೆಂಗಳೂರು
ಕೋವಿಡ್ ನಿಯಂತ್ರಣ ಕಾರ್ಯಕ್ಕೆ ನಿಯೋಜಿತರಾದ ಹಾಗೂ ಉಪ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ನೂರಾರು ಶಿಕ್ಷಕರು ಕರೊನಾಗೆ ಬಲಿಯಾಗಿದ್ದು, ಶಿಕ್ಷಕರ ವಲಯವನ್ನು ತಲ್ಲಣಗೊಳಿಸಿದೆ. ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದ ಅನೇಕ ಶಿಕ್ಷಕರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಆ ಪೈಕಿ 30 ಕ್ಕೂ ಹೆಚ್ಚು ಶಿಕ್ಷಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ರಾಜ್ಯದಲ್ಲಿ 25ರಿಂದ 30 ಸಾವಿರ ಶಿಕ್ಷಕರು ಕೋವಿಡ್ ಸಂಬಂಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈ ಶಿಕ್ಷಕರಿಗೆ ಯಾವುದೇ ಸುರಕ್ಷತೆಯೂ ಇಲ್ಲ! ಕರೊನಾ ಮೊದಲ ಅಲೆ, ಲಾಕ್​ಡೌನ್ ಹಾಗೂ ವಿದ್ಯಾಗಮ ಜಾರಿ ಸಂದರ್ಭದಲ್ಲೂ ಸುಮಾರು ನೂರು ಶಿಕ್ಷಕರು ಅಸುನೀಗಿದ್ದರು. 2ನೇ ಅಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 30 ದಿನದಲ್ಲಿ 39 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 14 ಸೇರಿ ರಾಜ್ಯದಲ್ಲಿ ಇದುವರೆಗೆ 394 ಕ್ಕೂ ಹೆಚ್ಚು ಶಿಕ್ಷಕರು ಮೃತಪಟ್ಟಿರುವುದಾಗಿ ಶಿಕ್ಷಕರ ಸಂಘಟನೆಗಳು ಹೇಳಿವೆ.
ಶಿಕ್ಷಕರ ಕೆಲಸವೇನು?:ಬಸ್ ನಿಲ್ದಾಣ, ಡೇಟಾ ಎಂಟ್ರಿ, ಕ್ವಾರಂಟೈನ್ ಸೂಪರ್ ವೈಸರ್, ಕರೊನಾ ಸಹಾಯವಾಣಿ, ಕರೊನಾ ಪಾಸಿಟಿವ್ ಗುರುತಿಸುವಿಕೆ, ಚೆಕ್​ಪೋಸ್ಟ್ ಡ್ಯೂಟಿ, ಕಾಂಟ್ಯಾಕ್ಟ್ ಟ್ರೇಸಿಂಗ್, ರೈಲು ನಿಲ್ದಾಣಗಳಲ್ಲಿ ಕ್ವಾರಂಟೈನ್ ನೋಂದಣಿ ಮತ್ತಿತರ ಕಾರ್ಯಗಳಿಗಾಗಿ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.ಕರೊನಾ ಸೋಂಕು ತಡೆಯುವಲ್ಲಿ ಹೋರಾಡುತ್ತಿರುವ ಶಿಕ್ಷಕರಿಗೆ ಸರ್ಕಾರ ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್​ಶೀಲ್ಡ್, ಸ್ಯಾನಿಟೈಸರ್ ಸೇರಿ ಯಾವುದೇ ಸವಲತ್ತನ್ನೂ ಸರ್ಕಾರ ನೀಡಿಲ್ಲ. ಇದರಿಂದಾಗಿ ಶಿಕ್ಷಕರು ಸೋಂಕಿಗೆ ಸುಲಭವಾಗಿ ಒಳಗಾಗುತ್ತಿದ್ದಾರೆ.
ಮಧ್ಯಮ ವಯಸ್ಸಿನವರೇ ಹೆಚ್ಚು:ಅನೇಕ ಶಿಕ್ಷಕರು ಅದರಲ್ಲೂ ಯುವ ಹಾಗೂ ಮಧ್ಯಮ ವಯಸ್ಸಿನ ಶಿಕ್ಷಕರು ಸೋಂಕಿನಿಂದ ಮೃತಪಡುತ್ತಿರುವುದು ಆತಂಕ ಹೆಚ್ಚಿಸುವಂತೆ ಮಾಡಿದೆ. ನಿತ್ಯವೂ ಒಂದಿಬ್ಬರು ಶಿಕ್ಷಕರು ಕೋವಿಡ್​ಗೆ ಬಲಿಯಾಗುತ್ತಿರುವುದು ಶಿಕ್ಷಣ ವ್ಯವಸ್ಥೆ ಮೇಲೆಯೂ ನಿಶ್ಚಿತವಾಗಿ ಪರಿಣಾಮ ಬೀರಲಿದೆ. ಅಲ್ಲದೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲು ಹೆದರುವಂತಾಗಿದೆ. ಶಿಕ್ಷಕರಲ್ಲಿ ಸೋಂಕು ಹೆಚ್ಚುತ್ತಿರುವುದು ಪಾಲಕರಲ್ಲೂ ಆತಂಕ ಉಂಟು ಮಾಡಿದೆ. ಶಾಲೆ ಶುರುವಾದರೆ ಮಕ್ಕಳ ಆರೋಗ್ಯ ಹೇಗೆ ಕಾಪಾಡುವುದು ಎಂಬ ಸವಾಲು ಕೂಡ ಎದುರಾಗಿದೆ.
ಚಿಕ್ಕಮಗಳೂರು ತಾಪಂ ಮಾದರಿ:ಕೋವಿಡ್ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಹ್ಯಾಂಡ್ ಸ್ಯಾನಿಟೈಸರ್, ಮುಖಗವುಸು, ಹ್ಯಾಂಡ್ ಗ್ಲೌಸ್​ಗಳನ್ನು ಗ್ರಾಮ ಪಂಚಾಯಿತಿ ನಿಧಿ-1 ಮತ್ತು ಇತರ ಲಭ್ಯ ಅನುದಾನದಲ್ಲಿ ಅತಿ ತುರ್ತಾಗಿ ಒದಗಿಸುವಂತೆ ಚಿಕ್ಕಮಂಗಳೂರು ತಾಲೂಕು ಪಂಚಾಯಿತಿ ಜ್ಞಾಪನಾ ಪತ್ರ ಹೊರಡಿಸಿದೆ. ಇದೇ ರೀತಿ ರಾಜ್ಯದ ಇತರ ತಾಲೂಕು ಪಂಚಾಯಿತಿಗಳಿಗೂ ನಿರ್ದೇಶನ ನೀಡಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದೆ.
ಮಾಹಿತಿ ಪಡೆಯಲು ಜ್ಞಾಪನಾ ಪತ್ರ:ರಾಜ್ಯದಲ್ಲಿ ಕೋವಿಡ್​ನಿಂದ ಮೃತಪಡುತ್ತಿರುವ ಶಿಕ್ಷಕರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಕೋವಿಡ್​ನಿಂದ ಮೃತಪಟ್ಟ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುವ ಸಂಬಂಧ ಮಂಗಳವಾರ ಅತಿ ತುರ್ತು ಜ್ಞಾಪನಾ ಪತ್ರ ಹೊರಡಿಸಿದೆ.
1 ಕೋಟಿ ರೂ. ಪರಿಹಾರಕ್ಕೆ ಆಗ್ರಹ:ಕೋವಿಡ್​ನಿಂದ ಮೃತರಾದ ಶಿಕ್ಷಕರ ಕುಟುಂಬಕ್ಕೆ ಅಲಹಾಬಾದ್ ಹೈಕೋರ್ಟ್ ತೀರ್ಪಿನಂತೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಶಿಕ್ಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯ ಕಾರಣ:ಮಧುಮೇಹ, ರಕ್ತದ ಒತ್ತಡ, ಅಸ್ತಮಾ ಇನ್ನಿತರ ಕಾಯಿಲೆ ಗಳಿರುವ ಶಿಕ್ಷಕರು ಕರೊನಾ ಸೋಂಕಿನ ಲಕ್ಷಣ ಕಂಡುಬಂದರೂ ಆಸ್ಪತ್ರೆಗೆ ದಾಖಲಾ ಗದೆ ನಿರ್ಲಕ್ಷ್ಯ ತೋರಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂದು ಇಲಾಖೆ ಮೂಲಗಳು ಹೇಳುತ್ತವೆ.
ರೆಮ್​ಡೆಸಿವಿರ್​ ಹೆಸರಲ್ಲಿ ಕರಾಳ ದಂಧೆ! 2500 ರೂ. ಇಂಜೆಕ್ಷನ್​ಗೆ 40000 ರೂ. ವಸೂಲಿ, ನಕಲಿ ಔಷಧವೂ ಮಾರಾಟ

ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನೀನಾಸಂ ಸತೀಶ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 4 =
Remember me
