ಮಡಿಕೇರಿ: ವಿಮಾನ ನಿಲ್ದಾಣದಲ್ಲಿ ಗಂಭೀರ ತಪಾಸಣೆ ಮಾಡಿದ್ದರೆ ನಾನು ಕೊಡಗಿಗೆ ಬರುತ್ತಿರಲಿಲ್ಲ. ಕೇವಲ ಉಷ್ಣಾಂಶ ಪರೀಕ್ಷೆ ನಡೆಸಿದ್ದು, ಗಂಟಲು ಕಿರಿಕಿರಿ ಬಗ್ಗೆ ಹೇಳಿಕೊಂಡೆ. ಆದರೆ, ಜ್ವರ ಇರಲಿಲ್ಲ ಎಂಬ ಕಾರಣಕ್ಕಾಗಿ ನಿಮ್ಮೂರಿನ ಆಸ್ಪತ್ರೆಗೆ ತೋರಿಸುವಂತೆ ಹೇಳಿದ್ದರೆಂದು ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವ ಮಸೂದ್ ಹೇಳಿದರು.
ದುಬೈಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಮಾ.28ರಂದು ನಿಗದಿಯಾಗಿದ್ದ ಸಹೋದರಿ ಪುತ್ರಿ ವಿವಾಹಕ್ಕಾಗಿ ಬಂದಿದ್ದೆ. ಮಾ.15ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಗಂಟಲು ಕಿರಿಕಿರಿ ಆಗುತ್ತಿದ್ದ ಬಗ್ಗೆ ತಪಾಸಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದೆ. ಕೇವಲ ಉಷ್ಣಾಂಶ ಪರೀಕ್ಷೆ ಮಾಡುತ್ತಿದ್ದ ಅವರು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಮಂಗಳವಾರ ‘ವಿಜಯವಾಣಿ’ಗೆ ಮೊಬೈಲ್ ಮೂಲಕ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ದುಬೈಯಲ್ಲಿ ನನ್ನೊಂದಿಗೆ ಇದ್ದ ಯಾರಿಗೂ ಸೋಂಕು ಇರಲಿಲ್ಲ. ಶಾಪ್​ನಲ್ಲಿದ್ದ ವೇಳೆ ಗ್ರಾಹಕರಿಂದ ಬಂದಿರುವ ಸಾಧ್ಯತೆ ಇದೆ. ವಿವಿಧ ದೇಶಗಳಿಗೆ ತೆರಳುವ ಚೀನಾ ವಿಮಾನಗಳು ದುಬೈಯಲ್ಲಿ ನಿಲುಗಡೆ ಆಗುತ್ತವೆ. ಇದರಿಂದ ದುಬೈಯಲ್ಲಿ ಸೋಂಕು ಹರಡಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆ ಐಸೋಲೇಷನ್ ವಾರ್ಡ್​ನಲ್ಲಿ 22 ದಿನ ಕಳೆದಿದ್ದೇನೆ. ವೈದ್ಯರಾದ ಡಾ.ಅಜೀಜ್, ದಾದಿಯರು, ಸಿಬ್ಬಂದಿ ನನ್ನ ಯೋಗಕ್ಷೇಮ ಚೆನ್ನಾಗಿ ನೋಡಿಕೊಂಡಿದ್ದಾರೆ. ಸರ್ಕಾರ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಿದೆ. ಪ್ರತಿಯೊಬ್ಬರಿಗೂ ಈ ಮೂಲಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಮಂಗಳವಾರದ ಹೈಲೈಟ್ಸ್
ಕರೊನಾ ಸೋಂಕಿತ ವೈದ್ಯರಿಂದ ಚಿಕಿತ್ಸೆ ಪಡೆದಚಿಕ್ಕಬಳ್ಳಾಪುರ ಜಿಲ್ಲೆಯ 6 ಮಂದಿಯನ್ನು ಕ್ವಾರಂಟೈನ್​ನಲ್ಲಿರಿಸಿದ್ದಾರೆ.
ದುಬೈನಿಂದ ಆಗಮಿಸಿದ ಮೈಸೂರು ಜಿಲ್ಲೆಯ ಮೊದಲ ಕರೊನಾ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮತ್ತೆ 50 ಶಂಕಿತ ಸೋಂಕಿತರು ಪತ್ತೆಯಾಗಿದ್ದು, ಅವರ ಕಫದ ಮಾದರಿಯನ್ನು ಲ್ಯಾಬ್​ಗೆ ಕಳುಹಿಸಲಾಗಿದೆ.
ಬಳ್ಳಾರಿ ಜಿಲ್ಲೆ ರಾಮಸಾಗರ ಗ್ರಾಮದಲ್ಲಿ ಸುಗಂಧಿ ಬಾಳೆ ಬೆಳೆದ ರೈತ ಗಂಗಾಧರ್, ‘ ಬಾಳೆಯನ್ನು 2 ದಿನಗಳಲ್ಲಿ ಜಿಲ್ಲಾಡಳಿತ ಖರೀದಿಸಬೇಕು. ಇಲ್ಲವೆ ಮಾರುಕಟ್ಟೆ ಒದಗಿಸಿಕೊಡಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.
ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ರೈತ ಟಿ.ಎಲ್. ನಾಯಕ ಅವರ 8 ಎಕರೆ ಜಮೀನಿನಲ್ಲಿ ಬೆಳೆದಿರುವ ಚಿಕ್ಕು ಹಣ್ಣು ಮಾರಾಟವಾಗದೆ ಜಮೀನಿನಲ್ಲಿ ಕೊಳೆಯುವ ಹಂತ ತಲುಪಿದೆ.
ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಗದಗ ಜಿಲ್ಲೆ ನರೇಗಲ್ಲ ಪಟ್ಟಣದ ಕೆಲ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.
VIDEO| ಅಪರಿಚಿತರು ನೀಡುವ ಮಾಸ್ಕ್​ನಲ್ಲಿ ಪ್ರಜ್ಞೆ ತಪ್ಪಿಸುವ ರಾಸಾಯನಿಕವಿದೆಯೇ? ಫ್ಯಾಕ್ಟ್​ಚೆಕ್​ ಬಿಚ್ಚಿಟ್ಟ ಸತ್ಯಾಂಶ ಹೀಗಿದೆ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:six − 6 =
Remember me
