ತುಮಕೂರು:ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಬಯಸಿ ಲಕ್ಷಾಂತರ ರೂಪಾಯಿಗೆ ಹರಾಜು ಕೂಗುವುದು ಒಂದು ಕಡೆಯಾದರೆ, ಗುಬ್ಬಿ ತಾಲೂಕಿನ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯತ್​ನ 36 ಸ್ಥಾನಗಳಿಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ!
ಈ ಭಾಗದ ಮಠದಕೆರೆ ಹಾಗೂ ಶೇಷನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸುವ ಭರವಸೆ ಸುಮಾರು ವರ್ಷಗಳಿಂದ ಈಡೇರಿಸದಿದ್ದರಿಂದ 33 ಹಳ್ಳಿಯ ಮತದಾರರು ಚುನಾವಣೆ ಬಹಿಷ್ಕರಿಸಿದ್ದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಕೂಡ ಯಾರೂ ನಾಮಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕರಿಸಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಹೇಮೆಗಾಗಿ ಚುನಾವಣೆ ಬಹಿಷ್ಕರಿಸುವ ಮೂಲಕ ಹೋರಾಟ ಆರಂಭಿಸಿದ್ದರು. ತಹಸೀಲ್ದಾರ್, ತುಮಕೂರು ಉಪವಿಭಾಗಾಧಿಕಾರಿಗಳು ಸೇರಿ ಗ್ರಾಪಂ ಚುನಾವಣೆ ಬಹಿಷ್ಕರಿಸದಂತೆ ಮನವಿ ಮಾಡಿದರಲ್ಲದೆ, ಹೇಮೆ ನೀರು ಹರಿಸುವ ಸರ್ಕಾರದ ಗಮನಕ್ಕೆ ತರುವ ಭರವಸೆ ಕೊಟ್ಟಿದ್ದರಾದರೂ ಹೋರಾಟದಿಂದ ಗ್ರಾಮಸ್ಥರು ಹಿಂದೆ ಸರಿಯಲಿಲ್ಲ.
36 ಸ್ಥಾನ, ಒಂದು ನಾಮಪತ್ರ ಇಲ್ಲ!: ಅಂಕಸಂದ್ರ ಗ್ರಾಪಂನ 21 ಸ್ಥಾನ ಹಾಗೂ ಮಂಚಲದೊರೆ ಗ್ರಾಪಂನ 15 ಸ್ಥಾನ ಸೇರಿ ಒಟ್ಟು 36 ಸ್ಥಾನಗಳಿಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಕೊನೆಯ ದಿನವಾದ್ದರಿಂದ ಇಂದು ಮಧ್ಯಾಹ್ನ 3ರವರೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಹೋರಾಟಕ್ಕೆ ಬದ್ಧರಾಗಿದ್ದರಲ್ಲದೆ, ಈ ಹೋರಾಟಕ್ಕೂ ಮಂಗಳ ಹಾಡಲಾಯಿತು.
ಪಡಿತರ ಅಕ್ಕಿ ಮಾರಾಟ ಮಾಡಿ ಸಿಕ್ಕಿಬಿದ್ದರೆ 6 ತಿಂಗಳು ಕಾರ್ಡ್ ಸಸ್ಪೆಂಡ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
