ಬೆಂಗಳೂರು:ಶನಿವಾರ (ಅ.14) ಸಂಭವಿಸಲಿರುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಯಾವುದೇ ದೋಷವಿಲ್ಲ ಎಂದು ರಾಜಗುರು ಬಿ.ಎಸ್.ದ್ವಾರಕನಾಥ ಗುರೂಜಿ ತಿಳಿಸಿದ್ದಾರೆ. ಅ.14ರ ಸೂರ್ಯಗ್ರಹಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಲ್ಲಿ ಎದ್ದಿರುವ ಗೊಂದಲಗಳ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಭಾರತ ಹೊರತುಪಡಿಸಿ ಅಮೆರಿಕ ಯೂರೋಪ್ ರಾಷ್ಟ್ರಗಳಲ್ಲಿ ಗೋಚರಿಸುವ ಸೂರ್ಯಗ್ರಹಣವು ಬಹಳ ಕಡಿಮೆ ಅವಧಿಯದ್ದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 11.29ರಿಂದ ಗ್ರಹಣ ಸಂಭವಿಸಲಿದೆ. ಭಾರತಕ್ಕೆ ಈ ಗ್ರಹಣದಿಂದ ಯಾವುದೇ ದೋಷವಿಲ್ಲ. ಆಚರಣೆಯ ಅಗತ್ಯವೂ ಇಲ್ಲ. ಗ್ರಹಣ ಗೋಚರಿಸುವ ರಾಷ್ಟ್ರಗಳಿಗೆ ಸೀಮಿತವಾಗಿ ಫಲಗಳು ನಿರ್ಣಯವಾಗುತ್ತದೆ. ಸಾಮಾನ್ಯವಾಗಿ ಬೇರೆ ರಾಷ್ಟ್ರಗಳಲ್ಲಿ ಗೋಚರಿಸುವ ಗ್ರಹಣಗಳಿಂದ ತಕ್ಕಮಟ್ಟಿನ ಪ್ರಭಾವ ಇತರೆ ದೇಶದ ಮೇಲೂ ಇರುವುದರಿಂದ ತಕ್ಕಮಟ್ಟಿನ ಯುದ್ಧಭಯ, ಆಹಾರದ ಕೊರತೆ, ಅಗ್ನಿಭೀತಿ ಮತ್ತು ಪ್ರಜೆಗಳಲ್ಲಿ ಅಶಾಂತಿ ತಲೆದೋರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಜಲಪ್ರಳಯ ಮತ್ತು ಭೂಮಿ ನಡುಗುವ (ಭೂಕಂಪ) ಸಾಧ್ಯತೆಯಿದ್ದು, ವಿಜ್ಞಾನಿಗಳು ಕೂಡ ಈ ಮುನ್ನೆಚ್ಚರಿಕೆ ನೀಡಿದ್ದಾರೆ. ಅ.14ರ ಸೂರ್ಯಗ್ರಹಣದ ದಿನ ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃತರ್ಪಣಾದಿ ಪೂಜೆಗಳ ಜತೆಗೆ ಜಗತ್ತಿಗೆ ಗ್ರಹಣದ ಹಾನಿಯಾಗದಂತೆ ದೇವರ ಪ್ರಾರ್ಥನೆ ಮಾಡಬೇಕು. ಹಾಗೂ ಅ.15ರಿಂದ ನವರಾತ್ರಿ ಆರಂಭವಾಗಲಿದ್ದು, ಆದಿಶಕ್ತಿ ಚಾಮುಂಡೇಶ್ವರಿ ಪ್ರಾರ್ಥನೆ ಮಾಡುವುದರಿಂದ ವಿಶ್ವಶಾಂತಿ ಸಾಧ್ಯ ಎಂದು ವಿವರಿಸಿರುವ ಅವರು, ಕೆಲವರು ಗ್ರಹಣದ ಹೆಸರಿನಲ್ಲಿ ಭಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಭಾರತೀಯರು ಗ್ರಹಣದ ಬಗ್ಗೆ ಭಯಪಡುವ ಅಥವಾ ಗ್ರಹಣದೋಷ ನಿವಾರಣೆಗಾಗಿ ಪ್ರತ್ಯೇಕ ಪೂಜೆಗಳನ್ನು ಮಾಡಿಸುವ ಅಗತ್ಯವಿಲ್ಲ. ನಿಮ್ಮ ಮನೆಗುರುಗಳ ಸ್ಮರಣೆ, ಗಾಯತ್ರಿ ಮಂತ್ರ ಜಪ, ಮಾತಾ-ಪಿತೃಗಳಿಗೆ ನಮಿಸುವುದೇ ಪರಿಹಾರವೆಂದು ಸಲಹೆ ನೀಡಿದ್ದಾರೆ.
ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
