ಬೆಂಗಳೂರು:ಬಿಬಿಎಂಪಿ ಶಾಲೆ- ಕಾಲೇಜುಗಳಲ್ಲಿ ಅಭ್ಯಾಸ ಮಾಡುವ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಅನುದಾನ ಮೀಸಲಿಟ್ಟರೂ ಅಧಿಕಾರಿಗಳು ಹಣ ಬಿಡುಗಡೆ ಮಾಡದೆ ಮಕ್ಕಳನ್ನು ಪ್ರವಾಸದಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ 32 ಪ್ರೌಢಶಾಲೆಗಳು ಹಾಗೂ 15 ಪದವಿ ಪೂರ್ವ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಎಸ್​ಎಸ್​ಎಲ್​ಸಿ ಮಕ್ಕಳು ಹಾಗೂ ದ್ವಿತೀಯ ಪಿಯು ಮಕ್ಕಳಿಗೆ ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸುವ ಯೋಜನೆಯನ್ನು ಕಳೆದ ಹಲವು ವರ್ಷಗಳಿಂದ ಜಾರಿಗೆ ತರಲಾಗಿದೆ. ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿವರ್ಷ ಬಜೆಟ್​ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಇಂತಿಷ್ಟು ಹಣ ಮೀಸಲಿಟ್ಟರೂ ಅದರ ಉಪಯೋಗ ಮಾತ್ರ ಮಕ್ಕಳಿಗೆ ತಲುಪುತ್ತಿಲ್ಲ. ಆರ್ಥಿಕವಾಗಿ ದುರ್ಬಲ ಆಗಿರುವ ಕುಟುಂಬದ ಶೇ.90ಕ್ಕಿಂತ ಹೆಚ್ಚು ಮಕ್ಕಳು ಇಲ್ಲಿ ಅಭ್ಯಾಸ ಮಾಡುತ್ತಿದ್ದು, ಉಚಿತ ಪ್ರವಾಸದಿಂದ ವಂಚಿತರಾಗುತ್ತಿದ್ದಾರೆ.
1.5 ಕೋಟಿ ರೂ. ಮೀಸಲು:ಪಾಲಿಕೆ 2019-20 ನೇ ಸಾಲಿನ ಶೈಕ್ಷಣಿಕ ಬಜೆಟ್​ನಲ್ಲಿ 1.5 ಕೋಟಿ ರೂ. ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಅನುದಾನ ಮೀಸಲಿಡಲಾಗಿದೆ. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿಯ 4,200 ವಿದ್ಯಾರ್ಥಿಗಳು ಪ್ರವಾಸಕ್ಕೆ ಅರ್ಹರಾಗಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಅಂದಾಜು 3,500 ರೂ. ಪ್ರವಾಸಕ್ಕಾಗಿ ಖರ್ಚು ಮಾಡಬಹುದಾಗಿದೆ. ಆದರೆ, ಪ್ರತಿ ಸಭೆಯಲ್ಲಿ ಶೈಕ್ಷಣಿಕ ಪ್ರವಾಸದ ಬಗ್ಗೆ ಚರ್ಚೆ ಆಗುತ್ತದೆಯೇ ಹೊರತು ಜಾರಿಯಾಗುತ್ತಿಲ್ಲ.
ಎರಡು ವರ್ಷ ಪ್ರವಾಸವಿಲ್ಲ:ಕಳೆದ ಎರಡು ವರ್ಷಗಳಿಂದ ಮಕ್ಕಳು ಪ್ರವಾಸ ಮಾಡದೇ ತಮ್ಮ ಶಿಕ್ಷಣ ಮುಗಿಸಿದ್ದಾರೆ. ಖಾಸಗಿ ಶಾಲೆ ಮಕ್ಕಳು ಪ್ರತಿ ವರ್ಷ ಪ್ರವಾಸ ಮಾಡುತ್ತ ಶೈಕ್ಷಣಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಆದರೆ, ಪಾಲಿಕೆ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳು ಪ್ರವಾಸದ ಆಸೆಯಿದ್ದರೂ, ಅಸಹಾಯಕರಾಗಿ ಸುಮ್ಮನೆ ಶಿಕ್ಷಣ ಪಡೆದು ಹೋಗಬೇಕಿದೆ. ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬಂತೆ ಪಾಲಿಕೆ ಬಜೆಟ್​ನಲ್ಲಿ ಹಣ ಮೀಸಲಿಟ್ಟರೂ ಹಣ ಬಿಡುಗಡೆ ಮಾಡದೆ ಅಧಿಕಾರಿಗಳು ಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ.
ಸ್ಥಾಯಿ ಸಮಿತಿಗೆ ಜವಾಬ್ದಾರಿ:4 ಸಾವಿರ ಮಕ್ಕಳು 3 ರಿಂದ 4 ದಿನಗಳ ರಾಜ್ಯ ಪ್ರವಾಸ ಮಾಡಲು ಅನುಕೂಲವಾಗುವಷ್ಟು ಅನುದಾನವಿದೆ. ಹೀಗಾಗಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಈ ಸಾಲಿನಲ್ಲಿ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸುವಂತೆ ಸೂಚನೆ ನೀಡಿದ್ದರು. ಈ ಕುರಿತು ಯೋಜನೆ ತಯಾರಿ ಸಲಾಗಿದ್ದು, ಹಣ ಬಿಡುಗಡೆ ಆಗದೆ ಪ್ರವಾಸ ಭಾಗ್ಯ ಅರ್ಧಕ್ಕೆ ನಿಂತಿದೆ. ಮಕ್ಕಳ ಶೈಕ್ಷಣಿಕ ಪ್ರವಾಸದ ಕುರಿತು ಮುಂದಿನ ಸ್ಥಾಯಿ ಸಮಿತಿ ಎಚ್ಚೆತ್ತುಕೊಂಡು ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸುವ ಕಾರ್ಯ ಮಾಡಬೇಕಿದೆ.
ಪಾಲಿಕೆಯ ಎಸ್​ಎಸ್​ಎಲ್​ಸಿ ಮಕ್ಕಳು ಹಾಗೂ ದ್ವಿತೀಯ ಪಿಯು ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಲಾಗುವುದು. ಆದರೆ 3 ದಿನ ಪ್ರವಾಸ ಆಗದಿದ್ದರೂ ಕನಿಷ್ಠ 1 ದಿನದ ಪ್ರವಾಸಕ್ಕೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ.
| ಹರೀಶ್ ಕುಮಾರ್ ಶೈಕ್ಷಣಿಕ ಅಧಿಕಾರಿ, ಬಿಬಿಎಂಪಿ
ಅನುದಾನ ನೀಡುತ್ತಿಲ್ಲ
ಕಳೆದ ಹಲವು ವರ್ಷ ಗಳಿಂದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ, ಶಾಲಾ ಮಕ್ಕಳ ಪರೀಕ್ಷಾ ಶುಲ್ಕ, ಪ್ರಶ್ನೆಪತ್ರಿಕೆಗಳ ಮುದ್ರಣ ಒಳಗೊಂಡು ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಕಾಲೇಜು ಪ್ರಾಚಾರ್ಯರೊಬ್ಬರು ತಿಳಿಸಿದ್ದಾರೆ.
| ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
