ರಮೇಶ ದೊಡ್ಡಪುರಬೆಂಗಳೂರು
ನಗರ ಪ್ರದೇಶದಲ್ಲಿ ಹರಿಯುವ ತ್ಯಾಜ್ಯ ನೀರಿನಲ್ಲಿ ಕರೊನಾ ಸೋಂಕಿದ್ದು, ಅದು ಕೃಷಿ ಹಾಗೂ ವನ್ಯಜೀವಿ ಸೇರಿ ಅನೇಕ ಕ್ಷೇತ್ರಗಳನ್ನು ಬಾಧಿಸುವ ಬಗ್ಗೆ ವಿಶ್ವಾದ್ಯಂತ ಇಲ್ಲಿಯವರೆಗೆ ನಡೆದ ಯಾವ ಸಂಶೋಧನೆಯಲ್ಲೂ ಸಾಬೀತಾಗಿಲ್ಲ. ಆದರೂ ಮೈಮರೆಯುವುದು ಬೇಡ ಎಂದಿರುವ ವಿಜ್ಞಾನಿಗಳು, ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮಾಡುವ ಮೂಲಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರ ಪ್ರದೇಶದಲ್ಲಿ ಎಲ್ಲ ಮನೆಗಳ ತ್ಯಾಜ್ಯ ನೀರು ಬೃಹತ್ ಕಾಲುವೆ ಮೂಲಕ ನದಿ ಜಲಮೂಲ ಸೇರುತ್ತವೆ. ಅಲ್ಲಿಂದ ರೈತರ ಜಮೀನಿಗೆ, ಕಾಡು ಮೇಡುಗಳಲ್ಲಿ, ಅಂತಿಮವಾಗಿ ಸಮುದ್ರವನ್ನೂ ಸೇರಬಹುದು. ಕರೊನಾ ವೈರಸ್ ಅಲ್ಲಿಯವರೆಗೆ ಜೀವವನ್ನು ಉಳಿಸಿಕೊಳ್ಳಲು ಸೂಕ್ತ ವಾತಾವರಣ ಈ ತ್ಯಾಜ್ಯದಲ್ಲಿದ್ದರೆ ಅದು ರೈತರ ಜಮೀನಿನ ಮೂಲಕ ಕೃಷಿ ಬೆಳೆ ಹಾಗೂ ರೈತರನ್ನೂ ಬಾಧಿಸಬಹುದು ಎಂಬ ಅಂದಾಜಿನಲ್ಲಿ ವಿಶ್ವಾದ್ಯಂತ ಸಂಶೋಧನೆಗಳು ನಡೆದಿವೆ.
ಸ್ಕಾಟ್ಲೆಂಡ್​ನಲ್ಲಿ 14 ಸ್ಥಳದಿಂದ ತ್ಯಾಜ್ಯ ನೀರಿನ ಮಾದರಿ ಸಂಗ್ರಹಿಸಿ ಸ್ಕಾಟಿಷ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಏಜೆನ್ಸಿ (ಸೇಪಾ) ನಡೆಸಿದ ಸಂಶೋಧನೆ ಪ್ರಕಾರ, ಕೋವಿಡ್-19ರ ಗುರುತುಗಳು ಪತ್ತೆಯಾಗಿವೆ. ಆದರೆ ಈ ಅಂಶಗಳು ಸೋಂಕನ್ನು ಹರಡಬಹುದು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಸ್ವೀಡನ್ ಸಂಶೋಧಕರು, ಭಾರತದ ಗುಜರಾತ್​ನ ಐಐಟಿ-ಗಾಂಧಿನಗರ ಸೇರಿ ವಿಶ್ವಾದ್ಯಂತ 51 ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ (ಎಬ್ಲ್ಯುಎಚ್​ಒ) ಪ್ರಕಾರ, ಶುದ್ಧ ಕುಡಿಯುವ ನೀರಿನಲ್ಲಿ ವೈರಸ್ ಬದುಕುವ ಸಾಧ್ಯತೆಯಿದೆ. ಆದರೆ ಮೇಲ್ಮೈ ನೀರು, ತ್ಯಾಜ್ಯ ನೀರು, ಅಂತರ್ಜಲದಲ್ಲಿ ಬದುಕುವ ನಿದರ್ಶನಗಳಿಲ್ಲ.
ಸಾಂಕ್ರಾಮಿಕವಾಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ನೆದರ್​ಲೆಂಡ್​ನ ಕೆಡಬ್ಲ್ಯುಆರ್ ವಾಟರ್ ರಿಸರ್ಚ್ ಇನ್ಸ್​ಟಿಟ್ಯೂಟ್ ತಿಳಿಸಿದೆ. ಸಂಸ್ಕರಿಸದ ನೀರಿನ ಜತೆಗೆ ಸಂಪರ್ಕಕ್ಕೆ ಬಂದವರಿಗೆ ವೈರಸ್ ತಗುಲಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಸಂಶೋಧನೆ ಹೇಳಿದೆ.
ಸಮುದಾಯ ಸೋಂಕು ಪತ್ತೆಗೆ ಅನುಕೂಲ:ಭಾರತದಂತಹ ಜನಸಾಂದ್ರತೆ ಹೆಚ್ಚಿರುವ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರನ್ನೂ ಹುಡುಕಿ ಪರೀಕ್ಷೆ ಮಾಡುವುದು ಬಹುತೇಕ ಅಸಾಧ್ಯ. ನಿರ್ದಿಷ್ಟ ಪ್ರದೇಶದ ಜನರ ಬಳಕೆ ನಂತರ ರಾಜಕಾಲುವೆ ಸೇರಿ ಹರಿಯವ ತ್ಯಾಜ್ಯ ನೀರನ್ನು ಪರೀಕ್ಷೆ ಮಾಡಿದರೆ ಕರೊನಾ ಇರುವಿಕೆ ತಿಳಿಯಬಹುದು. ಇದರಿಂದ ಆ ಪ್ರದೇಶದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿವರೆಗೆ ನಡೆದಿರುವ ಬಹುತೇಕ ಸಂಶೋಧನೆಗಳು ಇದೇ ಅಂಶಗಳನ್ನು ಹೊರಗೆಡವಿವೆ. ನಿರಂತರವಾಗಿ ತ್ಯಾಜ್ಯ ನೀರಿನ ಮೇಲೆ ನಿಗಾ ಇಡುವುದರಿಂದ ಪ್ರಾರಂಭಿಕ ಹಂತದಲ್ಲೇ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದು ನೆದರ್​ಲೆಂಡ್​ನ ಸಾಂಕ್ರಾಮಿಕ ರೋಗಗಳ ಸಂಶೋಧಕರಾದ ಆನಾ ಮರಿಯಾ ಡಿ ರೋಡಾ ಹಸ್ಮನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಂಶೋಧನೆ:ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ವೈರಸ್​ಗಳು ಜೀವಂತವಾಗಿ ಕಂಡುಬಂದಿಲ್ಲ. ತ್ಯಾಜ್ಯ ನೀರಿನಲ್ಲಿ ಅನೇಕ ಜೈವಿಕ ಅಂಶಗಳು, ಪ್ಲಾಸ್ಟಿಕ್, ಮೈಕ್ರೊ-ಪ್ಲಾಸ್ಟಿಕ್ ಮುಂತಾದ ಅಂಶಗಳಿರುತ್ತವೆ. ವೈರಸ್ ಅಡಗಿ ಕುಳಿತು ಕೊಳ್ಳಲು ಹಾಗೂ ಬದುಕುಳಿಯಲು ಇವುಗಳು ಸಹಾಯಕ ವಾತಾವರಣ ನಿರ್ವಿುಸಬಹುದು ಎಂದು ಅಭಿಪ್ರಾಯಪಡಲಾಗಿದೆ.
ತ್ಯಾಜ್ಯ ನೀರಿನಲ್ಲಿ ಕರೊನಾ ವೈರಸ್ ದೃಢಪಟ್ಟಿಲ್ಲ ಎಂದಾಕ್ಷಣ ವೈರಸ್ ಇಲ್ಲ ಎನ್ನಲಾಗದು. ಇನ್ನಷ್ಟು ಸಂಶೋಧನೆಗಳು ನಡೆಯಲಿ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ
ಎಸ್​ಟಿಪಿಗಳಿಂದ ತ್ಯಾಜ್ಯ ನೀರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಸ್ಕರಣೆ ಮಾಡಲು ಮುತುವರ್ಜಿ ವಹಿಸಬೇಕು.
| ಡಾ.ಅ.ನ. ಯಲ್ಲಪ್ಪ ರೆಡ್ಡಿ
ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಅಧ್ಯಕ್ಷ
ತ್ಯಾಜ್ಯ ನೀರಿನಲ್ಲಿ ಕರೊನಾ ವೈರಸ್ ಜೀವಂತವಾಗಿ
ಇರಬಹುದು ಎಂದು ಈ ಹಿಂದೆ ವರದಿಗಳು ಬಂದಿದ್ದವು. ಈ ಕುರಿತು ಜಲಮಂಡಳಿ ವತಿಯಿಂದ ಸಂಶೋಧನೆ ನಡೆಸಲಾಗಿದ್ದು, ದೃಢಪಟ್ಟಿಲ್ಲ. ಆದರೂ ಮತ್ತಷ್ಟು ಸಂಶೋಧನೆಗೆ ಬೆಂಗಳೂರಿನ ಎರಡು ಎನ್​ಜಿಒಗಳು ಅನುಮತಿ ಕೋರಿವೆ. ಸಂಶೋಧನೆ ನಡೆದು ಸತ್ಯಾಂಶ ಹೊರಬರಲಿ ಎಂಬುದು ನಮ್ಮ ಆಶಯ.
| ಗಂಗಾಧರ್ಜಲಮಂಡಳಿ ಇಂಜಿನಿಯರ್ (ತ್ಯಾಜ್ಯ ನೀರು ಸಂಸ್ಕರಣೆ)
https://www.vijayavani.net/indian-who-risked-his-life-to-help-oxford-experts-develop-covid-19-vaccine/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
