|ಎನ್.ಎಲ್. ಶಿವಮಾದುಬೆಂಗಳೂರು
ರಾಜ್ಯದ ‘ಎ’ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ನಗರಪ್ರದೇಶವಾದ ‘ಎ’ ವಲಯದಲ್ಲಿರುವ ಶಿಕ್ಷಕರನ್ನು ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಿ ‘ಬಿ’ ಅಥವಾ ’ಸಿ’ ವಲಯಕ್ಕೆ ವರ್ಗಾವಣೆ ಮಾಡುತ್ತಿಲ್ಲ. ಹೀಗಾಗಿ ಈಗಿರುವ ಸ್ಥಳದಲ್ಲೇ ಶಿಕ್ಷಕರು ನಿಶ್ಚಿಂತೆಯಾಗಿ ಮುಂದುವರಿಯಲಿದ್ದಾರೆ. ವರ್ಗಾವಣೆ ನಿಯಮದ ಪ್ರಕಾರ ಶಿಕ್ಷಕರನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುತ್ತದೆ. ಕಳೆದ ವರ್ಷ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಕೈಗೊಂಡಿದ್ದರಿಂದ ಈ ವರ್ಷ ಇರುವುದಿಲ್ಲ. ಶಿಕ್ಷಕರು ಬಯಸಿದಲ್ಲಿ ಮಾತ್ರವೇ ‘ಸಿ’ ವಲಯಗಳಿಗೆ ವರ್ಗಾವಣೆ ಆಗಲು ಅನುವು ಮಾಡಿಕೊಡಲಾಗುತ್ತದೆ.
ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರು ಮೊದಲ 10 ವರ್ಷದ ಅವಧಿಗೆ ಸಿ ವಲಯದಲ್ಲಿ ಕೆಲಸ ಮಾಡಬೇಕು ಎಂಬ ನಿಯಮ ಇದೆ. ಆದ್ದರಿಂದ ಈಗ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಲಿರುವ 13,363 ಶಿಕ್ಷಕರನ್ನು ಮೊದಲ 10 ವರ್ಷದ ಅವಧಿಗೆ ‘ಸಿ’ ವಲಯದಲ್ಲಿ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಕಳೆದ ವರ್ಷ ಕಡ್ಡಾಯ ವರ್ಗಾವಣೆಯಲ್ಲಿ ‘ಎ’ ವಲಯದಿಂದ ‘ಸಿ’ ವಲಯಕ್ಕೆ ವರ್ಗಾವಣೆಯಾಗಿರುವ ಶಿಕ್ಷಕರು ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಬೇಕಿರುವ ಕಾರಣ ಈ ವರ್ಷ ಅವರು ವರ್ಗಾವಣೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಇರುವುದಿಲ್ಲ. ಹೀಗಾಗಿ ‘ಸಿ’ ವಲಯದಲ್ಲಿಯೇ ಕಾರ್ಯನಿರ್ವಹಿಸಲಿದ್ದಾರೆ. ಇದರ ಜತೆಗೆ ಹೊಸದಾಗಿ 13,363 ಶಿಕ್ಷಕರು ಕೂಡ ಸೇರ್ಪಡೆಯಾಗುವುದರಿಂದ ‘ಸಿ’ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರ ನೇಮಕವಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಪ್ರಸ್ತುತ ‘ಸಿ’ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ‘ಬಿ’ ಮತ್ತು ‘ಎ’ ವಲಯಕ್ಕೆ ವರ್ಗಾವಣೆಯಾಗುವ ಅವಕಾಶ ದೊರೆಯಲಿದೆ. ಈ ಎಲ್ಲ ಕಾರಣಗಳಿಂದ ‘ಎ’ ವಲಯದಲ್ಲಿರುವ ಶಿಕ್ಷಕರು ಈ ವರ್ಷ ತಾವು ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿಯೇ ಮುಂದುವರಿಯಲಿದ್ದಾರೆ.
ಮೊಂಡಾಟ ಶಿಕ್ಷಕರಿಗೆ ಬಂಪರ್:ಕೆಲ ಶಿಕ್ಷಕರು ಹತ್ತಾರು ವರ್ಷಗಳಿಂದ ನಗರ ಪ್ರದೇಶಗಳಲ್ಲಿಯೇ ತಳವೂರಿದ್ದು, ಪ್ರತಿ ಬಾರಿ ವರ್ಗಾವಣೆ ಸಂದರ್ಭದಲ್ಲಿಯೂ ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆಯಾಗಲು ಮೊಂಡಾಟವಾಡುತ್ತಿದ್ದರು. ಈಗ ವರ್ಗಾವಣೆಯಿಂದ ವಿನಾಯಿತಿ ದೊರೆತಿರುವುದರಿಂದ ಅಂತಹ ಶಿಕ್ಷಕರಿಗೆ ಬಂಪರ್ ಹೊಡೆದಂತಾಗಿದೆ.
ಈ ಬಾರಿ ಕಡ್ಡಾಯ ವರ್ಗಾವಣೆ ಇಲ್ಲದಿರುವುದರಿಂದ ಮತ್ತು ಹೊಸದಾಗಿ ನೇಮಕವಾಗುವ ಶಿಕ್ಷಕರನ್ನು ‘ಸಿ’ ವಲಯಕ್ಕೆ ಸ್ಥಳ ನಿಯೋಜನೆ ಮಾಡುವುದರಿಂದ ‘ಎ’ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ.
|ಡಾ. ಆರ್. ವಿಶಾಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಎ ವಲಯ:– ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಪ್ರದೇಶಗಳು, ನಗರ ಪಾಲಿಕೆ, ನಗರ/ಪುರಸಭೆ, ಪಟ್ಟಣ ಪಂಚಾಯಿತಿ ಕೇಂದ್ರಗಳು.
ಬಿ ವಲಯ:– ಬೆಂಗಳೂರು ಗಡಿ ಪ್ರದೇಶದಿಂದ 20 ಕಿಮೀ ವ್ಯಾಪ್ತಿ, ನಗರ ಪಾಲಿಕೆಯಿಂದ 15 ಕಿಮೀ ವ್ಯಾಪ್ತಿ, ಜಿಲ್ಲಾ ಕೇಂದ್ರದಿಂದ 10 ಕಿಮೀ, ನಗರಪಾಲಿಕೆ ವ್ಯಾಪ್ತಿಯಿಂದ 5 ಕಿಮೀ ವ್ಯಾಪ್ತಿಯಲ್ಲಿರುವ ಪ್ರದೇಶಗಳು.
ಸಿ ವಲಯ:‘ಎ’ ಮತ್ತು ‘ಬಿ’ ವಲಯವನ್ನು ಹೊರತುಪಡಿಸಿದ ಗ್ರಾಮೀಣ ಪ್ರದೇಶಗಳನ್ನು ‘ಸಿ’ ವಲಯಗಳೆಂದು ಪರಿಗಣಿಸಲಾಗುತ್ತದೆ.
50 ಸಾವಿರ ಮಂದಿಗೆ ಅನುಕೂಲ:ಪ್ರಾಥಮಿಕ ಶಾಲೆಯಲ್ಲಿ 1.53 ಲಕ್ಷ ಹಾಗೂ ಪ್ರೌಢಶಾಲೆಯಲ್ಲಿ 38 ಸಾವಿರ ಶಿಕ್ಷಕರಿದ್ದಾರೆ. ಇದರಲ್ಲಿ ಅಂದಾಜು 50 ಸಾವಿರ ಶಿಕ್ಷಕರು ‘ಎ’ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಶಿಕ್ಷಕರಲ್ಲಿ ಶೇ.15ರಷ್ಟು ಶಿಕ್ಷಕರನ್ನು ವರ್ಗಾವಣೆಗೆ ಪರಿಗಣಿಸಲಾಗುತ್ತದೆ.
ವರ್ಗಾವಣೆ ಅಧಿಸೂಚನೆ ವಾರದಲ್ಲಿ ಪ್ರಕಟ:ಶಿಕ್ಷಕರ ವರ್ಗಾವಣೆ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿಯಮಗಳನ್ನು ರೂಪಿಸುವ ಕೆಲಸ ಅಂತಿಮ ಹಂತದಲ್ಲಿದೆ. ಇವುಗಳನ್ನು ಪೂರ್ಣಗೊಳಿಸಿದ ನಂತರ ಅಧಿಸೂಚನೆ ಹೊರ ಬೀಳಲಿದೆ. ಮುಂದಿನ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × four =
Remember me
