ಬೆಂಗಳೂರು:ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಅದನ್ನು ಸಾರ್ವಜನಿಕರೇ ಪೊಲೀಸರಿಗೆ ತಿಳಿಸುವಂಥ ‘ಪಬ್ಲಿಕ್ ಐ’ ಎಂಬ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಮಾಡಿಕೊಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಅದೆಷ್ಟೋ ಮಂದಿ ಈ ಮೂಲಕ ದಂಡ ತೆರುವಂತಾಗಿದ್ದು ಕೂಡ ಸುಳ್ಳಲ್ಲ. ಆದರೆ ಇದೀಗ ಸಂಚಾರ ನಿಯಮ ಉಲ್ಲಂಘಿಸಿರುವ ಪೊಲೀಸರೇ ಪಬ್ಲಿಕ್​ ಐನಲ್ಲಿ ಅರ್ಥಾತ್ ಸಾರ್ವಜನಿಕರ ನೋಟಕ್ಕೆ ಸಿಕ್ಕಿ ಹಾಕಿಕೊಂಡಿದ್ದು ಸಿಬ್ಬಂದಿ ಜತೆಗೆ ಇಲಾಖೆಗೂ ಮುಜುಗರ ಉಂಟಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.
ಪೊಲೀಸ್ ಸಿಬ್ಬಂದಿ ಇಬ್ಬರು ತಮ್ಮ ವಾಹನ ನಿಲ್ಲಿಸಿ ಕರ್ತವ್ಯದಲ್ಲಿದ್ದಾಗ, ಆ ವಾಹನದ ನಂಬರ್ ನಮೂದಿಸಿಕೊಂಡು ಪರೀಕ್ಷಿಸಿದ ಸಾರ್ವಜನಿಕರು ಸರ್ಕಾರದ ಎಂ ಪರಿವಾಹನ್ ಆ್ಯಪ್​ ಮೂಲಕ ವಿವರಗಳನ್ನು ಪರಿಶೀಲಿಸಿದ್ದಾರೆ. ಆಗ ಆ ದ್ವಿಚಕ್ರವಾಹನದ ವಿಮೆ ಅವಧಿ ಮುಗಿದಿರುವುದು ಕಂಡು ಬಂದಿದೆ. 2019ರ ಜುಲೈ 16ಕ್ಕೆ ವಿಮೆ ಅವಧಿ ಮುಗಿದಿದ್ದರೂ ನವೀಕರಿಸದೆ ಅದನ್ನು ಬಳಸುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು (ಫೆ. 25) ಬೆಂಗಳೂರಿನ ಶಿರಸಿ ಸರ್ಕಲ್​ನಲ್ಲಿ ಈ ವಾಹನ ಹಾಗೂ ಪೊಲೀಸರು ಕಂಡು ಬಂದಿದ್ದು, ಮಂಜಿತ್ (@manjith_r) ಎನ್ನುವವರು ಟ್ವಿಟರ್​ನಲ್ಲಿ ಈ ವಿವರಗಳನ್ನು ಪೋಸ್ಟ್ ಮಾಡಿಕೊಂಡು ಬೆಂಗಳೂರು ಪೊಲೀಸರ ಟ್ವಿಟರ್ ಹ್ಯಾಂಡಲ್​ಗೆ ಮೆನ್ಷನ್​ ಮಾಡಿ ಗಮನ ಸೆಳೆದಿದ್ದಾರೆ.
Where is the insurance@blrcitytraffic? This is rampant among your department vehicles. And you penalize others.@BlrCityPolice@CPBlrLocation : Sirsi circle, Bengaluru.pic.twitter.com/9vUg0Z3jCH
— Manjith (@manjith_r)February 25, 2021

ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

60ರ ವೃದ್ಧನಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ; ಬಾಲಕಿಗೆ ಚಿಕಿತ್ಸೆ, ಆರೋಪಿ ಪೊಲೀಸ್ ವಶಕ್ಕೆ…

ತನ್ನ ಪತ್ನಿ-ನಾದಿನಿಯನ್ನೇ ಕೊಂದ ಸ್ಯಾಂಡಲ್​ವುಡ್ ಮ್ಯೂಸಿಕ್ ಡೈರಕ್ಟರ್​ಗೆ ಜಿವಾವಧಿ ಶಿಕ್ಷೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 1 =
Remember me
