ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಅಥವಾ ಸೋಮವಾರ ಮತದಾನ ಇಡಬಾರದು ಎಂದು ಶಾಸಕ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.
ಲೋಕಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮತದಾನ ಆಗಿರುವುದನ್ನು ವಿಶ್ಲೇಷಿಸಿರುವ ಅವರು, ಹೆಚ್ಚು ಮತದಾರರು ಇರುವ ಕಡೆ ಮತದಾರರ ಕಾಯುವ ವೇಳೆ ಕಡಿಮೆ ಮಾಡಲು ಮತದಾನಕ್ಕೆ ಉಪ ಕೇಂದ್ರ ತೆರೆಯಬೇಕು. ಮತದಾರರ ಪಟ್ಟಿಯನ್ನು ಪೂರ್ಣ ಸ್ವಚ್ಛಗೊಳಿಸಬೇಕು. ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಬೇಕು. ಮತದಾರರ ಚೀಟಿ ಪೂರ್ಣ ಪ್ರಮಾಣದಲ್ಲಿ ತಲುಪಿಸುವ ವ್ಯವಸ್ಥೆ ಆಗಬೇಕು ಎಂದು ತಿಳಿಸಿದ್ದಾರೆ.
ಸುರೇಶ್ ಕುಮಾರ್ ಹೇಳಿದ್ದಿಷ್ಟು: ಬೆಂಗಳೂರು ಮಹಾನಗರದಲ್ಲಿ ಮತದಾನ ತೀರ ಕಡಿಮೆ ಆಗಿದೆ. ಫಸ್ಟ್ ಕ್ಲಾಸ್ ಸಿಟಿಯಲ್ಲಿ ಸೆಕೆಂಡ್ ಕ್ಲಾಸ್ ಮತದಾನ ಎಂಬ ಬಿರುದೂ ಸಹ ನಮ್ಮ ಪಾಲಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು ಇರುವ ಮಾರ್ಗೋಪಾಯಗಳ ಕುರಿತು ನಾನು ಚುನಾವಣಾ ಆಯೋಗಕ್ಕೆ ಕನಿಷ್ಟ ಮೂರು ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದೇನೆ.
ಬೆಂಗಳೂರು ನಗರದಲ್ಲಿ ಚುನಾವಣೆಯನ್ನು ಶುಕ್ರವಾರ, ಶನಿವಾರ, ಭಾನುವಾರ ಅಥವಾ ಸೋಮವಾರ ಇಡಬಾರದು. ಮತದಾನದ ದಿನ ಶುಕ್ರವಾರವಾದರೆ, ಆಯಾ ದಿನವನ್ನು ಚುನಾವಣಾ ಆಯೋಗ ರಜೆಯೆಂದು ಘೋಷಿಸಿದರೆ ಅನೇಕರು ಇದನ್ನು ದೀರ್ಘ ವಾರಂತ್ಯ ವೆಂದು ಪರಿಗಣಿಸಿ ತಮ್ಮ ಸಂತೋಷಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.
ಕೆಲವು ಮತದಾನ ಕೇಂದ್ರಗಳಲ್ಲಿ ಉದಾಹರಣೆಗೆ ರಾಜಾಜಿನಗರ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡ್‌ನ ವಾರ್ಡ್ ಆಫೀಸ್ ಮತಗಟ್ಟೆ ಸಂಖ್ಯೆ 99ರಲ್ಲಿ 1424 ಮತದಾರರಿದ್ದಾರೆ. ಇಂತಹ ಕಡೆ (ಮತದಾನ ಪ್ರಕ್ರಿಯೆಯಲ್ಲಿ ನಿಧಾನವಾದ ಕಾರಣ) ಅಲ್ಲಿ ನಿಂತ ಉದ್ದವಾದ ಸಾಲನ್ನು ಕಂಡು ಕೆಲವರು ವಾಪಸ್ ಹೋಗಿದ್ದು ನಿಜ. ಇಂತಹ ಕಡೆಗಳಲ್ಲಿ ಮತ್ತೊಂದು ಉಪ ಕೇಂದ್ರ ಮಾಡಿದ್ದರೆ ಒಳಿತಾಗುತ್ತಿತ್ತು.
ರಾಜಾಜಿನಗರ ಕ್ಷೇತ್ರದಲ್ಲಿ ಇರುವ ಮತದಾರರ ಪೈಕಿ ಸುಮಾರು 50 ಸಾವಿರ ಮತದಾರರಿಗೆ ನಮ್ಮ ಕಾರ್ಯಕರ್ತರು ಮತದಾನ ಚೀಟಿ ತಲುಪಿಸಲು ಆಗಲಿಲ್ಲ. ಏಕೆಂದರೆ ಅನೇಕ ವರ್ಷಗಳ ಹಿಂದೆ ತೀರಿ ಹೋದವರು, ಮನೆಗಳಲ್ಲಿ ಬಾಡಿಗೆಗೆ ಇದ್ದ ಅನೇಕರು ಇಲ್ಲಿಂದ ಬೇರೆ ಕಡೆ ಮನೆ ಮಾಡಿಕೊಂಡು ಹೋಗಿದ್ದರೂ, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇನ್ನೂ ಇವೆ.
ಅವರನ್ನು ಸಂಪರ್ಕಿಸಲು ನಮ್ಮ ಕಾರ್ಯಕರ್ತರು ಪ್ರಯತ್ನ ಪಟ್ಟರೂ ಸಹ ಬಹುತೇಕ ಸಾಧ್ಯವಾಗಲಿಲ್ಲ. ಆದ್ದರಿಂದ ಮತದಾರ ಪಟ್ಟಿಯನ್ನು ಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಆಗುವ ವರೆಗೂ ಮತದಾನ ಪ್ರಮಾಣ ಕಡಿಮೆ ಎಂಬ ಗೊಣಗಾಟ ಕೇಳುತ್ತಲೇ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.ಆಧಾರ್ ಕಾರ್ಡ್ ಲಿಂಕ್ ಆಗುವವರೆಗೂ ಎರಡು ಮೂರು ಹೆಚ್ಚು ಕಡೆಗಳಲ್ಲಿ ಮತದಾರರ ಹೆಸರು ಇರುವುದು ಮುಂದುವರೆಯುತ್ತದೆ. ಇದರಿಂದ ಮತದಾನ ಪ್ರಮಾಣಕ್ಕೆ ಏಟು ಬೀಳುತ್ತದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ಕ್ಷೇತ್ರದಲ್ಲಿ ಇಲ್ಲದ, ಮರಣ ಹೊಂದಿದವರ ಹೆಸರುಗಳು ಇನ್ನೂ ಮುಂದುವರೆದಿವೆ. ಇದರಿಂದಲೂ ಮತದಾನ ಪ್ರಮಾಣ ಕಡಿಮೆಯಾಗಿ ಕಾಣುತ್ತದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + five =
Remember me
