ಬೆಂಗಳೂರು:ಲಾಕ್​ಡೌನ್ ಸಡಿಲ ಮಾಡುವುದರಿಂದ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂಬುದನ್ನು ಅಂದಾಜು ಮಾಡಿರುವ ರಾಜ್ಯ ಸರ್ಕಾರ, ಪಾಸಿಟಿವ್ ಕೇಸ್​ಗಳಿಗಿಂತ ಸಾವಿನ ಸಂಖ್ಯೆ ನಿಯಂತ್ರಣದತ್ತ ಲಕ್ಷ್ಯ ವಹಿಸಿದೆ.
ಹೆಚ್ಚು ದಿನ ಲಾಕ್​ಡೌನ್ ಮಾಡಿಕೊಂಡಿದ್ದರೆ, ಆರ್ಥಿಕ ಕುಸಿತವಾಗುತ್ತದೆ ಎಂಬ ಕಾರಣಕ್ಕೆ ಸಡಿಲ ಮಾಡಲಾಗುತ್ತಿದೆ. ಮುಂದಿನ ವಾರದಿಂದ ಧಾರ್ವಿುಕ ಕೇಂದ್ರ, ಹೋಟೆಲ್, ಪ್ರವಾಸಿತಾಣ, ಮಾಲ್​ಗಳಿಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ರೈಲ್ವೆ ಸಂಚಾರವೂ ಆರಂಭವಾಗುತ್ತಿದೆ. ಆ ರೀತಿ ಆಗುವುದರಿಂದ ಸೋಂಕು ಹೆಚ್ಚುತ್ತದೆ ಎಂಬುದು ಸರ್ಕಾರದ ಅರಿವಿಗೂ ಇದೆ. ರಾಜ್ಯದ ತಜ್ಞರ ಸಮಿತಿ ಸಹ ಇದೇ ನಿಟ್ಟಿನಲ್ಲಿಯೇ ಸರ್ಕಾರಕ್ಕೆ ಮಾಹಿತಿ ನೀಡಿದೆ. ಆದ್ದರಿಂದಲೇ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚಾಗಿ ಸಾವಿನ ಪ್ರಮಾಣ ಹೆಚ್ಚದಂತೆ ತಡೆಯುವುದಕ್ಕೆ ಬೇಕಾದ ಸಿದ್ಧತೆಗೆ ಆದ್ಯತೆ ನೀಡುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸಾವಿನ ಪ್ರಮಾಣ ದೇಶದ ಸರಾಸರಿ ಶೇ.4 ಇದ್ದರೆ, ರಾಜ್ಯದಲ್ಲಿ ಶೇ.3-4 ಇದೆ. ಗುಜರಾತ್​ನಲ್ಲಿ ಶೇ.6 ದಾಖಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಕರೊನಾ ಸೋಂಕಿತರ ಸಂಖ್ಯೆ ಜನಸಂಖ್ಯೆಯ ಅರ್ಧದಷ್ಟು ತಲುಪುವ ಅಪಾಯದ ಸಾಧ್ಯತೆಯನ್ನು ನಿರ್ಲಕ್ಷ್ಯ ಮಾಡಲಾಗದು. ತಜ್ಞರು ಸಹ ಸಾವಿನ ಪ್ರಮಾಣ ಹೆಚ್ಚಾಗದಂತೆ ಗಮನ ಹರಿಸಬೇಕೆಂದೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆ ನಿಟ್ಟಿನಲ್ಲಿಯೇ ಸರ್ಕಾರ ಹೆಜ್ಜೆಯನ್ನಿಡುತ್ತಿದ್ದು, ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳುತ್ತಿದೆ.
ಇದನ್ನೂ ಓದಿಅಲಯನ್ಸ್ ವಿಮಾನ ಆರಂಭ ಶುರು
ಡೆತ್ ಆಡಿಟ್: ಪ್ರಸ್ತುತ ಸಂಭವಿಸಿರುವ 47 ಸಾವುಗಳ ಬಗ್ಗೆ ಸರ್ಕಾರ ಆಡಿಟ್ ಮಾಡಿದೆ. ಸಾವಿನ ಸಂಖ್ಯೆ ಕಡಿಮೆ ಮಾಡಬೇಕೆಂದರೆ, ಈ 47 ಸಾವಿಗೆ ಕಾರಣ ಗುರುತಿಸಿಕೊಳ್ಳಲೇಬೇಕಾಗಿದೆ. ಕಾರಣಗಳನ್ನು ಅಧ್ಯಯನ ಮಾಡಿದಾಗ ಏಕರೂಪ ಚಿಕಿತ್ಸೆ ನೀಡಲು ಅನುಕೂಲ ವಾಗುತ್ತದೆ ಎಂಬುದು ಸರ್ಕಾರದ ಉದ್ದೇಶ. ಹೃದ್ರೋಗ, ಕಿಡ್ನಿ ಸಮಸ್ಯೆ,
ಎಚ್​ಐವಿ ಬಾಧಿತರು, ಕ್ಯಾನ್ಸರ್ ರೋಗಿಗಳಿಗೆ ಕರೊನಾ ಮಾಹಿತಿ ನೀಡಲಾಗುತ್ತಿದೆ. ಆಕ್ಸಿಜನ್ ಪ್ರಮಾಣ ಕಡಿಮೆಯಾಗುವುದನ್ನು ಪತ್ತೆ ಮಾಡುವ ಸಲುವಾಗಿ ಆಕ್ಸಿ ಮೀಟರ್​ಗಳ ಬಳಕೆಯನ್ನು ಹೆಚ್ಚಿಸಲಾಗಿದೆ.
ಸರಪಳಿ ಕತ್ತರಿ: ಕರೊನಾ ಸಮುದಾಯದಲ್ಲಿ ಹರಡದಂತೆ ಎಲ್ಲ ಎಚ್ಚರಿಕೆಯನ್ನು ಸರ್ಕಾರ ಕೈಗೊಂಡಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸೋಂಕಿತರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್​ಗೆ ಜತೆಗೆ ರ್ಯಾಂಡಮ್ ಚೆಕ್ ಮಾಡುವುದನ್ನು ಮುಂದುವರಿಸಲಾಗಿದೆ. ಪ್ರಯೋಗಾಲಯಗಳ ಸಂಖ್ಯೆಯನ್ನು ಜೂನ್ ಮಧ್ಯದ ವೇಳೆಗೆ 75ಕ್ಕೆ ಏರಿಸಲಿದೆ. 1 ಲಕ್ಷ ಜನರಿಗೆ ಆನ್​ಲೈನ್ ತರಬೇತಿ ನೀಡಿ ಸಜ್ಜುಗೊಳಿಸಿದೆ.
ಟಾಸ್ಕ್​ಪೋರ್ಸ್:ಲಾಕ್​ಡೌನ್ ಮುಗಿದ ನಂತರ ನಗರದಿಂದ ಗ್ರಾಮೀಣ ಮಟ್ಟಕ್ಕೆ ಟಾಸ್ಕ್​ಪೋರ್ಸ್​ಗಳನ್ನು ರಚನೆ ಮಾಡಲು ಸರ್ಕಾರ ಚಿಂತಿಸಿದೆ.
https://www.vijayavani.net/florida-officials-use-donuts-to-trap-a-bear/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 12 =
Remember me
