ಬೆಂಗಳೂರು:ಬೆಂಗಳೂರು: ಬಡತನದ ಬಗ್ಗೆ ತಿಳಿಸುವ ಮಕ್ಕಳ ಪುಸ್ತಕಗಳ ಸಂಖ್ಯೆ ತೀರಾ ಕಡಿಮೆಯಿದ್ದು, ಬಡವರಿಗೆ ಅರ್ಥಶಾಸ್ತ್ರದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ಥರ್ ದುಫ್ಲೊ ಹೇಳಿದ್ದಾರೆ.
ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಮೂಲಭೂತ ವಿಚಾರಗಳ ಬಗ್ಗೆ 5 ಮಕ್ಕಳ ಪುಸ್ತಕಗಳ ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತೀರಾ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕು ಕಷ್ಟಕರವಾಗಿದ್ದು, ಪ್ರತಿ ವರ್ಷ ವಿವಿಧ ಕಾರಣಗಳಿಂದ ಐದು ವರ್ಷಕ್ಕಿಂತ ಚಿಕ್ಕ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸೂಕ್ತ ಲಸಿಕೆ ಹಾಗೂ ಸೊಳ್ಳೆ ಪರದೆಗಳು ಸಿಕ್ಕಿದ್ದರೆ ಹಲವು ಮಕ್ಕಳನ್ನು ರಕ್ಷಿಸಲು ಸಾಧ್ಯ. ಶೋಷಣೆಗೊಳಗಾದವರಿಗೆ ಅರಿವು ಮೂಡಿಸುವ ಗಂಭೀರ ಚಿಂತನೆಗಳನ್ನು ಎಸ್ಥರ್ ಅವರ ಪ್ರಸ್ತಾಪಿಸಿದರು.
ಬಡವರು ಬಡವರಾಗಿಯೇ ಯಾಕೆ ಉಳಿಯಬೇಕು ? ಎಂಬ ಸಂಕೀರ್ಣ ವಿಷಯವನ್ನು ಬಿಡಿಬಿಡಿ ಯಾಗಿ ಕತೆ ರೂಪದಲ್ಲಿ ಹೇಳುವ ಪ್ರಯತ್ನ ಪುಸ್ತಕದಲ್ಲಿ ಮಾಡಿದ್ದು, ಬಡತನದ ಕತೆಗಳು ಸಾಧ್ಯವಾದಷ್ಟು ಮಕ್ಕ ಳಿಗೆ ತಲುಪಬೇಕು, ಈ ಬಗ್ಗೆ ಅವರು ಆಲೋಚಿಸುವಂತಾಗಬೇಕು. ಮುಖ್ಯವಾಗಿ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಂತಾಗಬೇಕು ಎಂದು ಅವರು ವಿವರಿಸಿದರು.
ಎಸ್ಥರ್ ಅವರ ಫ್ರೆಂಚ್ ಮೂಲದ ಕತೆಗಳನ್ನು ಕನ್ನಡ, ಮರಾಠಿ, ಹಿಂದಿ, ತಮಿಳು, ಬಂಗಾಳ ಭಾಷೆಗಳಿಗೆ ಓ.ಎಲ್.ನಾಗಭೂಷಣಸ್ವಾಮಿ, ಎಸ್.ದಿವಾಕರ್, ಎಚ್.ಎಸ್.ರಾಘವೇಂದ್ರರಾವ್, ಜೆವಿ ಕಾರ್ಲೊ, ಎಲ್.ಸಿ.ನಾಗರಾಜ್ ಅನುವಾದಿಸಿದ್ದಾರೆ. ಬೆಂಗಳೂರಿನ ಮಕ್ಕಳ ಪುಸ್ತಕಗಳ ಪ್ರಕಾಶನ ಸಂಸ್ಥೆ ‘ಪ್ರಥಮ್ ಬುಕ್ಸ್’ ಈ ಕೃತಿಗಳನ್ನು ಪ್ರಕಟಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 12 =
Remember me
