ಅಮ್ಮನ ಪಾತ್ರ ನೀಡುವ ಸಂತಸ, ಸಂತೃಪ್ತ ಭಾವಗಳನ್ನು ಅನುಭಾವಿಸುತ್ತ ಆನಂದಿಸುವುದು ಒಂದೆಡೆಯಾದರೆ ಅಮ್ಮನ ಪಟ್ಟ ತರುವ ದೊಡ್ಡದೊಡ್ಡ ಜವಾಬ್ದಾರಿಗಳ ಭಾರ ಮತ್ತೊಂದೆಡೆ. ಮಕ್ಕಳು ಬೆಳೆದಂತೆ ತಾನಾಗಿಯೇ ಬೆಳೆಯುವ ತಾಯಿಯ ಕೆಲಸ, ಕರ್ತವ್ಯಗಳಿಗೆ ಕೊನೇ ಮೊದಲಿಲ್ಲ. ಆದರೆ ಜವಾಬ್ದಾರಿ ಹೆಚ್ಚಿದಂತೆ ಅದನ್ನು ನಿಭಾಯಿಸಲು ಬೇಕಾದ ನೆರವು, ಸಂಪನ್ಮೂಲ ಲಭ್ಯವಿಲ್ಲವಾದಾಗ ಒಂದು ರೀತಿಯ ದೈಹಿಕ-ಮಾನಸಿಕ ಬಳಲಿಕೆ, ಬರಿದಾದ ಭಾವ ತಾಯಂದಿರನ್ನು ಆವರಿಸಿಕೊಂಡುಬಿಡುತ್ತದೆ. ಅದೇ ಡಿಪ್ಲೇಟರ್ ಮದರ್ ಸಿಂಡ್ರೋಮ್​ಡಿಎಂಎಸ್)ಅಥವಾ ಮಮ್ ಬರ್ನ ಔಟ್. ಈ ಸ್ಥಿತಿ ಅಮ್ಮನನ್ನು ಭಾವನಾತ್ಮಕವಾಗಿ ಅತಿಸೂಕ್ಷ್ಮಳನ್ನಾಗಿಸುತ್ತದೆ. ಹೊರಗಿನ-ಒಳಗಿನ ಸಣ್ಣ ಏರುಪೇರು ಗಳಿಗೂ ಧೃತಿಗೆಡುವಂತೆ ಪ್ರಚೋದಿಸುವ ಡಿಎಮ್​ಸ್ ಹೊಸ ಅಮ್ಮಂದಿರಲ್ಲಿ, ಪುಟ್ಟ ಮಕ್ಕಳ ತಾಯಂದಿರಲ್ಲಿ ಹೆಚ್ಚು ಕಾಣಿಸಿ ಕೊಳ್ಳುತ್ತದೆ. ಹಾಗಂತ ತಾಯ್ತನದ ಆರೈಕೆಯ ಹೊಣೆ ಹೊತ್ತ ಯಾವ ತಾಯಿಯೂ ಇದಕ್ಕೆ ಹೊರತೇನಲ್ಲ.
ತನ್ನನ್ನೇ ಕಡೆಗಣಿಸುವ ಅಮ್ಮ
ಅಮ್ಮನ ದಿನಚರಿ ಸಹಜವಾಗಿ ಮಕ್ಕಳ ಸುತ್ತಲೇ ಸುತ್ತಿಕೊಂಡಿರುವುದು. ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನೂ ಒದಗಿಸಿಕೊಡುವ ಭರದಲ್ಲಿ ತಾಯಂದಿರು ತಮ್ಮನ್ನೇ ತಾವು ಕಡೆಗಣಿಸಿಬಿಡುತ್ತಾರೆ. ಅವಳ ಸೌಖ್ಯವನ್ನು ವಿಚಾರಿಸುವವರು ಹತ್ತಿರವಿಲ್ಲದಿದ್ದಾಗ ಅವಳಿಗವಳು ಮುಖ್ಯವಾಗುವುದೇ ಇಲ್ಲ. ಹಾಗಾಗಿ ಅಪೌಷ್ಟಿಕತೆಯಿಂದ ಅನಾರೋಗ್ಯ-ದೈಹಿಕ ಬೇನೆಗಳು ಕಾಣಿಸಿಕೊಂಡರೆ, ವಿಶ್ರಮಿಸಿ ಉಲ್ಲಸಿಸಲು ಅಸಾಧ್ಯವಾದಾಗ ಅದು ಭಾವನಾತ್ಮಕವಾಗಿ ಪ್ರಭಾವಿಸಿ ಅನಿಯಂತ್ರಿತ ಕೋಪ, ಬೇಸರ, ವೇದನೆ, ಚಿಂತೆಗಳಿಗೆ ಕಾರಣವಾಗುತ್ತದೆ. ಜತೆಗೆ ಹಗಲಿರುಳಿನ ದುಡಿಮೆಯಿಂದ ಮಕ್ಕಳ ಆರೈಕೆಯ ಸಂತಸ, ಇದೂ ಒಂದು ಅವಕಾಶವೇ ಎಂಬ ಅನುಭೂತಿ ಒಳಬರಲು ಸಾಧ್ಯವಾಗದೇ ಮಗುವಿಗಾಗಿ ನಾನು ತ್ಯಾಗ ಮಾಡುತ್ತಿದ್ದೇನೆ ಎನ್ನುವಂತಹ ಭಾವವೇ ಬಲವಾಗತೊಡಗುತ್ತದೆ. ಇದರಿಂದ ತಲೆದೋರುವ ಹತಾಶೆ ಅಸಹಾಯಕ ಮನಸ್ಥಿತಿಯನ್ನು ಭದ್ರಪಡಿಸಿ ಬಿಡುತ್ತದೆ.
ನಿರಂತರ ಪಶ್ಚಾತ್ತಾಪ
ಅಮ್ಮನದ್ದು 24 ಘಂಟೆಗಳ ಮುಗಿಯದ ಕೆಲಸ. ರಜೆ, ಹಬ್ಬ-ಹರಿದಿನ, ಅನಾರೋಗ್ಯ, ಸುಸ್ತು-ಸಂಕಟ ಏನೇ ಇದ್ದರೂ ಆಕೆಯ ಸೇವೆ ಚಾಲ್ತಿಯಲ್ಲಿರಬೇಕಾದ ಜರೂರತ್ತು. ಮಗುವಿನ ವಿವಿಧ ಅಗತ್ಯ, ಸಾಮಾಜಿಕ ನಿರೀಕ್ಷೆ, ತನ್ನ ಮೇಲೇ ತಾನೇ ಹೇರಿಕೊಂಡ ನಿಯಮಗಳು ತಾಯಿಯನ್ನು ಬೇಡಿಕೆಗಳಿಗೆ ಸ್ಪಂದಿಸಲೇಬೇಕಾದ ಅನಿವಾರ್ಯಕ್ಕೆ ಒಳಗಾಗಿಸುತ್ತಲೇ ಇರುತ್ತವೆ. ಆದರೆ ಇಷ್ಟೆಲ್ಲಾ ಅಗತ್ಯಗಳನ್ನು ಪೂರೈಸಲು ಬೇಕಾದ ಮಾನಸಿಕ ದೃಢತೆ, ನಿಭಾಯಿಸುವ ಕೌಶಲ್ಯ, ದೈಹಿಕ ನೆರವು ಇದ್ದಾಗ ಹೆಚ್ಚಿನ ಸಮಸ್ಯೆ ಎನಿಸದು. ಹಾಗಿಲ್ಲದಿದ್ದ ಪಕ್ಷದಲ್ಲಿ ಏನೇ ಮಾಡುತ್ತಿದ್ದರೂ ನಾನು ಒಳ್ಳೆಯ ತಾಯಿಯಲ್ಲ ಎನ್ನುವ ಗಿಲ್ಟ್ ಭಾವ, ಎಷ್ಟೇ ಕೊಡುತ್ತಿದ್ದರೂ ಕುಟುಂಬಕ್ಕೆ ನನ್ನ ಕೊಡುಗೆ ಸಾಕಾಗುತ್ತಿಲ್ಲ ಎನ್ನುವ ಅಭಾವದ ಅನುಭವ ಅಮ್ಮಂದಿರ ಬೆನ್ನೇರುತ್ತದೆ. ಏನೆಂದರೂ ಪಶ್ಚಾತ್ತಾಪ ಅಮ್ಮನ ಹೆಗಲು ಬಿಡದು. ವೃತ್ತಿಯಲ್ಲಿರುವ ಅಮ್ಮ ಮಗುವಿನೊಡನೆ ಜಾಸ್ತಿ ಸಮಯ ಮೀಸಲಿಡಲಾಗುತ್ತಿಲ್ಲ ಎಂದು ಹಲುಬಿದರೆ, ಗೃಹಿಣಿಯಾದವಳು ಕೆಲಸದಲ್ಲಿದ್ದಿದ್ದರೆ ಮಗುವಿಗೆ ಉತ್ತಮ ಸವಲತ್ತು ಒದಗಿಸಿಕೊಡಬಹುದಿತ್ತೇನೋಎಂಬ ಪಶ್ಚಾತ್ತಾಪದಲ್ಲಿರುತ್ತಾಳೆ.
https://www.vijayavani.net/bengaluru-woman-lost-gold-ornaments-in-a-different-way/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − seven =
Remember me
