ಬೆಂಗಳೂರು:ಭಾರತಿಶೆಟ್ಟಿ, ಸಿ.ಪಿ.ಯೋಗೀಶ್ವರ್, ಎಚ್.ವಿಶ್ವನಾಥ್, ಶಾಂತಾರಾಂ ಸಿದ್ದಿ ಮತ್ತು ಡಾ. ತಳವಾರ್ ಸಾಬಣ್ಣ ಅವರ ಹೆಸರನ್ನು ಮೇಲ್ಮನೆಗೆ ರಾಜ್ಯಪಾಲರ ವಜುಭಾಯಿ ವಾಲಾ ಅವರು ನಾಮನಿರ್ದೇಶನ ಮಾಡಿದ್ದಾರೆ.
ಸರ್ಕಾರದಿಂದ ಮೇಲ್ಮನೆಗೆ ನಾಮನಿರ್ದೇಶನ ಮಾಡಲು ಅವಕಾಶ ಇದ್ದಿದ್ದರಿಂದ ಹಲವರ ಹೆಸರು ಕೇಳಿ ಬರುತ್ತಿತ್ತು. ಅಂತಿಮ ಪಟ್ಟಿಯಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಯೋಗೀಶ್ವರ್ ಮತ್ತು ಮೈಸೂರಿನ ಮಾಜಿ ಸಂಸದ ವಿಶ್ವನಾಥ್​ ಹೆಸರಿಗೆ ಅಂಕಿತ ಹಾಕಲಾಗಿದ್ದು, ಆ ಮೂಲಕ ಇವರಿಬ್ಬರಿಗೂ ರಾಜಕೀಯವಾಗಿ ಮರುಜೀವ ಕೊಟ್ಟಂತಾಗಿದೆ.
ಇದನ್ನೂ ಓದಿರಿ‘ರಣಧೀರ’ ನಟಿ ಖುಷ್ಬೂ ಗಂಡಸಿನಂತೆ ಕಾಣುತ್ತಿದ್ದಾರೆ!
ಮೂರು ದಶಕಗಳಿಂದ ಪಶ್ಚಿಮಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಮ ಸಿದ್ದಿ ಅವರನ್ನೂ ಮೇಲ್ಮನೆಗೆ ರಾಜ್ಯಪಾಲರು ನಾಮಕರಣ ಮಾಡಿದ್ದಾರೆ. ಸಿದ್ದಿಸಮುದಾಯದ ಮೊದಲ ಪದವೀಧರ ಶಾಂತಾರಾಮ. ಕಾಲೇಜು ದಿನಗಳಿಂದ ಆರ್​ಎಸ್ಎಸ್ ಕಾರ್ಯಕರ್ತರಾಗಿದ್ದವರು.
ಇನ್ನು ಮುಖ್ಯಮುಂತ್ರಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಭಾರತಿಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ.
ಕೋಲಿ ಸಮಾಜಕ್ಕೆ ಸೇರಿದ ಡಾ. ತಳವಾರ್ ಸಾಬಣ್ಣ ಅವರು ಕಲಬುರಗಿ ಜಿಲ್ಲೆಯವರು. ರಾಣಿ ಚೆನ್ನಮ್ಮ ವಿವಿಯ ಎಕನಾಮಿಕ್ಸ್ ಪ್ರೊಫೆಸರ್‌ ಆಗಿದ್ದಾರೆ.
ಕರೊನಾ ಸೋಂಕಿಗೆ ಆಯುರ್ವೇದ ಔಷಧ ಪಡೆದ ಸಿ.ಟಿ.ರವಿ ಗುಣಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 2 =
Remember me
