ಕಲಬುರಗಿ:ಗ್ರಾಮ ಪಂಚಾಯಿತಿಯ ಮೊದಲ ಹಂತದ ಮತದಾನ ಇಂದು ಆರಂಭಾಗಿದ್ದು, ಮತದಾರರ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇನ್ನೊಂದೆಡೆ ಎರಡನೇ ಹಂತದ ಪ್ರಚಾರ ಕಾರ್ಯವೂ ಸಹ ಭರದಿಂದ ಸಾಗಿದೆ. ಇದರ ನಡುವೆ ನಾಮಪತ್ರ ಹಿಂಪಡೆಯಲು ಗನ್​ ತೋರಿಸಿ ಬೆದರಿಕೆ ಹಾಕಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಎದುರಾಳಿ ಅಭ್ಯರ್ಥಿ ಪಿಸ್ತೂಲ್ ತೋರಿಸಿ ಬೆದರಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಯಲ್ಲೆ ಇದ್ದುಕೊಂಡು ಸಂಚು ರೂಪಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ.
ಇದನ್ನೂ ಓದಿ:ವಿಚಿತ್ರ ಬ್ಯಾಟಿಂಗ್​ ಶೈಲಿಯನ್ನು ಟ್ರೋಲ್​ ಮಾಡಿದವರಿಗೆ ಸರಿಯಾದ ತಿರುಗೇಟು ನೀಡಿದ ಫವಾದ್​ ಅಲಮ್​!
ಘಟನೆಯ ವಿವರಣೆಗೆ ಬರುವುದಾದರೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗುಡೂರ ಪಂಚಾಯ್ತಿಗೆ ಮಹಾಲಕ್ಷ್ಮಿ ಪೂಜಾರಿ ಎಂಬುವರು ಸ್ಪರ್ಧಿಸಿದ್ದರು. ಕಣದಿಂದ ಹಿಂದೆ ಸರಿಸಲು ಮಹಾಲಕ್ಷ್ಮಿ ಗಂಡ ಶರಣಪ್ಪ ಪೂಜಾರಿಯನ್ನ ಎದುರಾಳಿ ಬೀರಲಿಂಗ ಪೂಜಾರಿ ಬೆದರಿಕೆ ಹಾಕಿದ್ದಾರೆ.
ಬಿರಲಿಂಗ ಪೂಜಾರಿ ತನ್ನ ತಾಯಿಯನ್ನು ಗೆಲ್ಲಿಸೋದಕ್ಕೆ ಬೆದರಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ. ಶರಣಪ್ಪನನ್ನು ಕಾರಿನಲ್ಲಿ ಪಂಚಾಯ್ತಿಗೆ ಕರೆದುಕೊಂಡು ಹೋಗಿ ಬೀರಲಿಂಗ ತನ್ನ ಬೆಂಬಲಿಗರ ಜತೆ ಸೇರಿ ಬೆದರಿಕೆ ಹಾಕಿದ್ದ. ನಾಮಪತ್ರ ವಾಪಸ್ ಪಡೆಯದೆ ಹೊದ್ರೆ ನಿನ್ನ ಮನೆ ಬಳಿ ನಮ್ಮವರು ಇದ್ದಾರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ ಎಂದು ಹೆದರಿಸಿದ್ದ. ಈ ಹಿನ್ನಲೆ ಹೆಂಡತಿಯ ನಾಮಪತ್ರಕ್ಕೆ ಸೂಚಕನಾಗಿದ್ದ ಗಂಡ ಶರಣಪ್ಪ ಪೂಜಾರಿ ನಾಮಪತ್ರ ವಾಪಸ್ ಪಡೆದಿದ್ದಾನೆ.
ಇದನ್ನೂ ಓದಿ:ಗ್ರಾಮೀಣ ಚುನಾವಣೆಗೆ ಮತಪೆಟ್ಟಿಗೆ: ಇವಿಎಂ ಟ್ರೆಂಡ್ ಮಧ್ಯೆ ಸಾಂಪ್ರದಾಯಿಕ ಚುನಾವಣೆ ಸೊಗಡು
ಇದೀಗ ಹೆದರಿಸಿ ನಾಮಪತ್ರ ವಾಪಸ್ ಹಿಂಪಡೆಯುವಂತೆ ಮಾಡಿದ್ದಾರೆಂದು ಜೇವರ್ಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಸಾಮಾನ್ಯ ವಿಭಾಗ ಮುಕ್ತ ಮುಕ್ತ; ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆ

ಕೋಟಿ ರೂ. ಲಂಚಕ್ಕೆ ಸಚಿವ ನಾಗೇಶ್ ಬೇಡಿಕೆ? ಸಚಿವರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
