ಆನೇಕಲ್​:ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮದ ಪ್ರಗತಿಗೆ ಶ್ರಮಿಸಬೇಕೆಂದು ಹಲವು ತಿಂಗಳಿನಿಂದ ತಯಾರಿ ನಡೆಸಿ ನಾಮಪತ್ರ ಹಾಕಿದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ಅಪರಿಚಿತನೊಬ್ಬ ಪಡೆದಿರುವ ಅಚ್ಚರಿ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿಯ ನಾಗರ ವಾರ್ಡ್ ಒಂದಕ್ಕೆ ಸಾಮಾನ್ಯ ಪುರುಷ ಸ್ಥಾನಕ್ಕೆ ಸಿದ್ದೇಶ್ ಎಂಬುವವರು ನಾಮಪತ್ರ ಸಲ್ಲಿಸಿದರು. ಇದೇ ಖುಷಿಯಲ್ಲಿ ಮತದಾರರನ್ನು ಭೇಟಿ ಮಾಡಿ ಮತಕ್ಕಾಗಿ ಮನವಿ ಸಲ್ಲಿಸಲು ಅಣಿಯಾಗುತ್ತಿದ್ದಂತೆ ಸಿದ್ದೇಶ್​ಗೆ ಶಾಕ್ ಕಾದಿತ್ತು.
ಇದನ್ನೂ ಓದಿ:ಹಣಕ್ಕಾಗಿ ಮನುಷ್ಯತ್ವವನ್ನೇ ಮರೆತ ರಾಕ್ಷಸ ಯುವಕ: ಈತನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ನಾಮಪತ್ರ ಹಿಂಪಡೆಯುವ ಕೊನೆ ದಿನವಾದ 19ರ ಸಂಜೆ ತನ್ನ ನಾಮಪತ್ರ ವಾಪಸ್ಸು ಪಡೆದುಕೊಳ್ಳಲಾಗಿದೆ ಎಂಬ ಸುದ್ದಿ ಸಿದ್ದೇಶ್​ಗೆ ತಿಳಿದಿದೆ. ಕೂಡಲೇ ಪಂಚಾಯಿತಿ ಕಚೇರಿಗೆ ಹೋಗಿದ್ದರು ಆ ವೇಳೆಗೆ ಅಲ್ಲಿ ಚುನಾವಣಾ ಅಧಿಕಾರಿಗಳು ಯಾರು ಇರಲಿಲ್ಲ. ಭಾನುವಾರ ರಜೆ ಇದ್ದಿದ್ದರಿಂದ ದೂರವಾಣಿ ಮೂಲಕ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಅಧಿಕಾರಿಗಳಿಂದಲೂ ನಿಮ್ಮ ನಾಮಪತ್ರವನ್ನು ಹಿಂಪಡೆಯಲಾಗಿದೆ ಎಂದು ಉತ್ತರ ಬಂದಿದೆ.
ಈ ಬಗ್ಗೆ ಮಾತನಾಡಿರುವ ಸಿದ್ದೇಶ್​, ನಾಮಪತ್ರ ಸಲ್ಲಿಕೆ ದಿನದಿಂದ ಹಿಂಪಡೆದುಕೊಳ್ಳಲು ಹಲವರಿಂದ ಒತ್ತಡ ಇತ್ತು. ಈ ಹಿನ್ನೆಲೆಯಲ್ಲಿ ನಾನು ಯಾರಿಗೂ ಸಿಗದಂತಿದ್ದೆ. ನಾಮಪತ್ರ ಹಿಂಪಡೆಯುವ ದಿನ ನಾಗೇಶ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ನನ್ನ ಸಹಿ ಹಾಕಿ ನನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ನಾನು ಸ್ಪರ್ಧಿಸಿದ ವಾರ್ಡ್​ನಲ್ಲಿ ಚುನಾವಣೆ ಮುಂದೂಡಬೇಕೆಂದು ಚುನಾವಣೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡು ಲಿಖಿತವಾಗಿ ದೂರು ನೀಡಬೇಕೆಂದಿದ್ದೇನೆ ಎಂದು ತಿಳಿಸಿದರು.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಅಕ್ಕನಿಂದಲೇ 15 ವರ್ಷದ ತಂಗಿಯ ಮೇಲೆ ನಿರಂತರ ರೇಪ್​: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆ ಇದು!
ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದ್ರೆ ಟ್ವಿಟರ್​ನಿಂದ ದೂರಾಗುತ್ತಾರಂತೆ ಚುನಾವಣಾ ತಂತ್ರಗಾರ ಪಿಕೆ !

ಪ್ರತಿಭಟನೆ ಮುಗಿಸಿಬಂದು ಆತ್ಮಹತ್ಯೆ ಮಾಡಿಕೊಂಡ ಯುವರೈತ; ಕಾರಣ ನಿಗೂಢ!

ಕರಿದುಳಿದ ಎಣ್ಣೆಗೆ ಡಾಲ್ಡಾ ಸೇರಿಸಿ ಪರಿಶುದ್ಧ ತುಪ್ಪ ಎಂದರು…ಆಹಾ! ಘಮಘಮ ಎಂದು ವಿಷ ತಿಂದ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
