ರಾಮನಗರ:ಜೆಡಿಎಸ್​ ಅಭ್ಯರ್ಥಿಯಾಗಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ, ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಕೋಟ್ಯಧಿಪತಿಯಾಗಿರುವ ನಿಖಿಲ್ ತಮ್ಮ ಚರಾಸ್ತಿ-ಸ್ಥಿರಾಸ್ತಿಗಳ ವಿವರವನ್ನು ನೀಡಿದ್ದು, ತಂದೆಗೆ ಸಾಲ ನೀಡಿರುವುದಲ್ಲದೆ, ಐಷಾರಾಮಿ ಕಾರುಗಳ ಒಡೆಯ ಕೂಡ ಆಗಿದ್ದಾರೆ. ನಿಖಿಲ್ ಹೆಸರಲ್ಲಿ ಒಟ್ಟು 77 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಆ ಪೈಕಿ ಚರಾಸ್ತಿಯ ಮೌಲ್ಯ 46.81 ಕೋಟಿ ರೂ. ಹಾಗೂ ಸ್ಥಿರಾಸ್ತಿ ಮೌಲ್ಯ 28 ಕೋಟಿ ರೂಪಾಯಿ.
ಇದನ್ನೂ ಓದಿ:ಅಮ್ಮನ ವಿರುದ್ಧ ದೂರು ಹೇಳಲು 130 ಕಿ.ಮೀ. ದೂರದ ಅಜ್ಜಿ ಮನೆಗೆ ಸೈಕಲ್​ನಲ್ಲೇ ಹೋದ ಹುಡುಗ!
ನಿಖಿಲ್ ಒಂದು ರೇಂಜ್‌ ರೋವರ್, 2.9 ಕೋಟಿ ಮೊತ್ತದ ಲ್ಯಾಂಬೊರ್ಗಿನಿ ಸೇರಿ ಐದು ಕಾರ್‌ಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದು, ಒಟ್ಟು 1151 ಗ್ರಾಂ ತೂಕದ ಚಿನ್ನ ಹಾಗೂ 16 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ಜತೆಗೆ 38.94 ಕೋಟಿ ರೂ. ಸಾಲ ಕೂಡ ಇದೆ. ಜತೆಗೆ ತಂದೆ ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಸಾಲವನ್ನೂ ನೀಡಿದ್ದಾರೆ.
ನಿಖಿಲ್ ಪತ್ನಿ ರೇವತಿ ಹೆಸರಿನಲ್ಲಿ 1.79 ಕೋಟಿ ಮೌಲ್ಯದ ಚರಾಸ್ತಿ ಹಾಗೂ 28 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅಲ್ಲದೆ 641 ಗ್ರಾಂ ಚಿನ್ನ, 12.59 ಕ್ಯಾರೆಟ್‌ ವಜ್ರ ಹಾಗೂ 33.5 ಕೆ.ಜಿ.ಬೆಳ್ಳಿ ಇದೆ.
ಇದನ್ನೂ ಓದಿ:ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!
ನಿಖಿಲ್‌ ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿ 76 ಲಕ್ಷ ರೂ., ಹಾರಿಜನ್ ರಿಯಾಲ್ಟಿ ಕಂಪನಿಯಲ್ಲಿ 6 ಕೋಟಿ ರೂ. ಸೇರಿದಂತೆ ವಿವಿಧೆಡೆ ಹಣ ಹೂಡಿಕೆ ಮಾಡಿದ್ದಾರೆ. ಇನ್ನು ಅವರು ತಮ್ಮ ವಾರ್ಷಿಕ ಆದಾಯವನ್ನೂ ಬಹಿರಂಗಪಡಿಸಿದ್ದಾರೆ. 2021–22ನೇ ಸಾಲಿನಲ್ಲಿ ನಿಖಿಲ್‌ ಕುಮಾರಸ್ವಾಮಿ ವಾರ್ಷಿಕ ಆದಾಯ 4.27 ಕೋಟಿ ರೂ. ಇದ್ದಿದ್ದಾಗಿ ಘೋಷಿಸಿಕೊಂಡಿದ್ದಾರೆ.
ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + fourteen =
Remember me
